ಗಣೇಶೋತ್ಸವ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ವ್ಯಕ್ತಿ ಸಾವು; ಸೌಂಡ್​ ಎಫೆಕ್ಟ್‌ಗೆ ಹೃದಯಾಘಾತವಾಗಿರುವ ಶಂಕೆ | A Man died in Ganeshotsav procession in Tumkur


ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿಯುವಾಗ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬಾಕ ಗ್ರಾಮದಲ್ಲಿ ನಡೆದಿದೆ.

ಗಣೇಶೋತ್ಸವ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುವಾಗ ವ್ಯಕ್ತಿ ಸಾವು; ಸೌಂಡ್​ ಎಫೆಕ್ಟ್‌ಗೆ ಹೃದಯಾಘಾತವಾಗಿರುವ ಶಂಕೆ

ಗಣೇಶ ಮೆರವಣಿಗೆ ವೇಳೆ ವ್ಯಕ್ತಿ ಸಾವು

ತುಮಕೂರು: ಗಣೇಶೋತ್ಸವ ಮೆರವಣಿಗೆಯಲ್ಲಿ ಕುಣಿಯುವಾಗ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತುಮಕೂರು ತಾಲ್ಲೂಕಿನ ಹೆಬ್ಬಾಕ ಗ್ರಾಮದಲ್ಲಿ ನಡೆದಿದೆ. ವಿರೂಪಾಕ್ಷ (48) ಮೃತ ದುರ್ದೈವಿ. ತಡರಾತ್ರಿ ಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಸೌಂಡ್ಸ್ ಹಾಕಲಾಗಿತ್ತು. ಸೌಂಡ್​ಗೆ ಕುಣಿಯುವಾಗ ವಿರೂಪಾಕ್ಷ ಸಾವನ್ನಪ್ಪಿದ್ದಾನೆ. ಡಿಜೆ ಸೌಂಡ್ಸ್ ಎಫೆಕ್ಟ್‌ಗೆ ಹೃದಯಾಘಾತವಾಗಿರುವ ಶಂಕೆ‌ ವ್ಯಕ್ತವಾಗಿದೆ. ಬೆಳ್ಳಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.‘

ಮಾರಕಾಸ್ತ್ರ ಹಿಡಿದು ಪುಂಡಾಟ ಮಾಡಿದ್ದ ಯುವಕರ  ಬಂಧನ

ಬೆಂಗಳೂರು: ಗಣಪತಿ ವಿಸರ್ಜನೆ ವೇಳೆ ಮಾರಕಾಸ್ತ್ರ ಹಿಡಿದು ಪುಂಡಾಟವಾಡಿದ್ದ ಆರು ಜನ ಯುವಕರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಸಿದ್ದಾರೆ. ಚಿರು, ಅಭಿ, ಯಶವಂತ,ಮನೋಜ್, ಹರೀಶ್, ಪ್ರಜ್ವಲ್ ಬಂಧಿತ ಆರೋಪಿಗಳು.

ಪುಟ್ಟೇನಹಳ್ಳಿಯ ಸಾರಕ್ಕಿ ಲೇಕ್ ಬಳಿ  ಸೆ. 14 ರಂದು ಮಾರಕಾಸ್ತ್ರ, ಬಾಟಲ್ ಹಿಡಿದು ಪುಂಡಾಟ ಮೆರದಿದ್ದರು. ಯುವಕರ ಪುಂಡಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸರು ಸುಮೋಟೊ ದೂರು ದಾಖಲಿಸಿಕೊಂಡಿದ್ದರು. ಕೇಸ್ ದಾಖಲಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೀನು ಹಿಡಿಯಲು ಹೋದವರು ನೀರುಪಾಲು: ಬೆಂಗಳೂರಿನ ನೈಸ್ ರಸ್ತೆಯ ಹೆಮ್ಮಿಗೆಪುರದ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ. ನಿನ್ನೆ (ಸೆ. 17) ಸಂಜೆ ಶಿವ , ಶಂಕರ್ ಹಾಗು ಚಿರಂಜೀವಿ ಎಂಬುವರು ಕೆರೆಯಲ್ಲಿ ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ನೀರಿನಲ್ಲಿ ತೆಪ್ಪ ಮಗುಚಿ ಬಿದ್ದಿದೆ.

ಆಗ ಚಿರಂಜೀವಿ ಈಜಿ ದಡ ಸೇರಿದ್ದಾನೆ. ಆದರೆ ಶಿವ ಹಾಗು ಶಂಕರ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂದು ಅಗ್ನಿಶಾಮಕದಳ ಸಿಬ್ಬಂಧಿಯಿಂದ ಮೃತದೇಹ ಹೊರತೆಗೆಯುವ ಕಾರ್ಯ ನಡೆಯುತ್ತಿದೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.