2009ರಲ್ಲಿ ತೆರೆ ಕಂಡ ಗೋಲ್ಡನ್​ ಸ್ಟಾರ್​ ಗಣೇಶ್​ ನಟನೆಯ ‘ಉಲ್ಲಾಸ ಉತ್ಸಾಹ’ ಸಿನಿಮಾದ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದ್ದ ಬಾಲಿವುಡ್​​ ನಟಿ ಯಾಮಿ ಗೌತಮ್​, ನಿನ್ನಯಷ್ಟೆ ಹಸೆಮಣೆ ಏರಿದ್ದಾರೆ. ತಮ್ಮ ಬಹುಕಾಲದ ಗೆಳೆಯ, ನಿರ್ದೇಶಕ-ಸಾಹಿತಿ ಆದಿತ್ಯ ಧಾರ್​​ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಹೌದು.. ಸರಳವಾಗಿ ನಡೆದ ಈ ಮದುವೆಯ ಬಗ್ಗೆ ಎಲ್ಲೂ ಪ್ರಸ್ತಾವವೇ ಆಗಿರಲಿಲ್ಲ. ನಟಿ ಯಾಮಿ ಗೌತಮ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಹಾಕಿದಾಗಲೇ ಈ ವಿಷಯ ಬಹಿರಂಗವಾಗಿದೆ.

2019ರಲ್ಲಿ ತೆರೆ ಕಂಡ ಬಾಲಿವುಡ್​ನ ‘ಉರಿ’ ಸಿನಿಮಾದ ನಿರ್ದೇಶಕ ಆದಿತ್ಯ ಧಾರ್​ ಹಾಗೂ ಯಾಮಿ ಗೌತಮ್​ ಬಹಳ ವರ್ಷಗಳಿಂದ ಪ್ರೀತಿಯಲ್ಲಿದ್ದರು ಅಂತ ತಿಳಿದು ಬಂದಿದೆ. ಅಂದ್ಹಾಗೇ ‘ಉರಿ’ ಸಿನಿಮಾದ ಒಂದು ಪಾತ್ರದಲ್ಲಿ ಯಾಮಿ ಕೂಡ ಬಣ್ಣ ಹಚ್ಚಿದ್ದರು. ಇದೀಗ ಸರಳವಾಗಿ, ಶಾಸ್ತ್ರೋಕ್ತವಾಗಿ ನಡೆದ ಈ ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಭಾಗಿಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

 

View this post on Instagram

 

A post shared by Yami Gautam (@yamigautam)

ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​​ ಮಾಡಿ ತಿಳಿಸಿರುವ ಯಾಮಿ ಗೌತಮ್​​, ‘ನಮ್ಮ ಕುಟುಂಬಸ್ಥರ ಆಶೀರ್ವಾದೊಂದಿಗೆ ನಾವು ಇವತ್ತು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದೇವೆ. ಕೇವಲ ನಮ್ಮ ಆಪ್ತರ ಬಳಗದಲ್ಲಿ ನಮ್ಮ ಮದುವೆ ಸಂಭ್ರಮದಿಂದ ನಡೆಯಿತು. ನಾವು ನಮ್ಮ ಪ್ರೀತಿ ಹಾಗೂ ಸ್ನೇಹದ ಬಂಧನವನ್ನ ಶುರು ಮಾಡಿದ್ದೇವೆ, ನಿಮ್ಮಲ್ಲರ ಪ್ರೀತಿ-ಆಶೀರ್ವಾದ ಸದಾ ನಮ್ಮ ಮೇಲಿರಲಿ’ ಅಂದಿದ್ದಾರೆ.

‘ಉಲ್ಲಾಸ ಉತ್ಸಾಹ’ ಸಿನಿಮಾದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಂತರ, ನಟಿ ಯಾಮಿ ಗೌತಮ್​ ಬಹಳಷ್ಟು ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

The post ಗಣೇಶ್​​ ‘ಉಲ್ಲಾಸ ಉತ್ಸಾಹ’ ಸಿನಿಮಾದ ನಾಯಕಿ ಯಾಮಿಗೆ ಕಂಕಣ ಭಾಗ್ಯ appeared first on News First Kannada.

Source: newsfirstlive.com

Source link