ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿ ದರ್ಶನ ಪಡೆಯಲು ಅಭಿಮಾನಿಗಳು, ಗಣ್ಯರು ಬರುತ್ತಲೇ ಇದ್ದಾರೆ. ಬೆಳಗ್ಗೆ ಸ್ಟುಡಿಯೋದ ಗೇಟ್ ಓಪನ್ ಆಗುವ ಮೊದಲೇ ಸಮಾಧಿ ದರ್ಶನ ಪಡೆಯಲು ಅಭಿಮಾನಿಗಳು ಕ್ಯೂನಲ್ಲಿ ನಿಂತಿರುತ್ತಾರೆ.
ಅದರಂತೆ ಇಂದು ಅಪ್ಪು ಸಮಾಧಿ ಮುಂದೆ ಪುಟ್ಟ ಕಂದಮ್ಮ ತನ್ನ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದೆ. ಪುಟಾಣಿ ಅಗಸ್ತ್ಯನ ಮೂರನೇ ವರ್ಷದ ಬರ್ತಡೇಯನ್ನ ಪೋಷಕರು ಅಪ್ಪು ಸಮಾಧಿ ಮುಂದೆ ಆಚರಿಸಿದ್ದಾರೆ. ಗದಗದಿಂದ ಬಂದು ಅಪ್ಪು ಸಮಾಧಿ ಬಳಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಬಳಿಕ ಶಿವಾನಂದ ಮಾತನಾಡಿ.. ಇವತ್ತು ನನ್ನ ಮಗನ ಬರ್ತಡೆ. ನನ್ನ ಮಗನ ಹುಟ್ಟುಹಬ್ಬವನ್ನ ಪುನೀತ್ ಸರ್ ಜೊತೆ ಆಚರಿಸಬೇಕು ಅನ್ನೋ ಆಸೆ ಇತ್ತು. ಆದರೆ ಅದು ಆಗಲಿಲ್ಲ. ಈ ಸ್ಥಳದಲ್ಲಿ ಅವರ ಜೊತೆ ಸೆಲ್ಫಿ ತೆಗೆದುಕೊಂಡಿದ್ವಿ. ಈಗ ಇಲ್ಲಿಗೆ ಬಂದಿದ್ದೇವೆ ಎಂದರು. ಅಪ್ಪು ಸಮಾಧಿ ಮುಂದೆ ಇತ್ತೀಚೆಗೆ ನವಜೋಡಿಯೊಂದು ಮದುವೆ ಆಗಲು ಮುಂದಾಗಿತ್ತು.