ಗದಗನಲ್ಲಿ ನಡೆದ ಬಹಿರಂಗ ಸಭೆಯೊಂದರಲ್ಲಿ ಪ್ರಮೋದ್ ಮುತಾಲಿಕ್ ವಿವಾದಾತ್ಮಕ ಮಾತುಗಳನ್ನಾಡಿದರು | Pramod Muthalik again resorts to hate speech at a public meeting in Gadag ARB


ಗದಗ: ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಅವರು ಪ್ರಚೋದನಕಾರಿ (provocative) ಭಾಷಣ ಮಾಡುವುದನ್ನು ಮುಂದುವರಿಸಿದ್ದಾರೆ ಮಾರಾಯ್ರೇ. ಗದಗನಲ್ಲಿ (Gadag) ಗುರುವಾರ ಬಹಿರಂಗ ಸಭೆಯೊಂದರಲ್ಲಿ ಮಾತಾಡಿದ ಮುತಾಲಿಕ್ ಅವರು ಲವ್ ಜಿಹಾದ್ (Love Jihad) ಅಂದರೇನು ಅನ್ನೋದಿಕ್ಕೆ ವಿವರಣೆ ನೀಡಿದರು. ಕಾಲೇಜುಗಳಿಗೆ ಹೋಗುವ ಹಿಂದೂ ಹಿಂದೂ ಯುವತಿಯರನ್ನು ಪ್ರೇಮಪಾಶದಲ್ಲಿ ಸಿಲುಕಿಸಿ ಅವರನ್ನು ಮದುವೆಯಾಗಿ ಮತಾಂತರ ಮಾಡಿ ಬುರ್ಖಾ ತೊಡುವಂತ ಮಾಡುವುದೇ ಲವ್ ಜಿಹಾದ್ ಎಂದು ಅವರು ಹೇಳಿದರು. ಜಿಹಾದ್ ಅಂದಾಕ್ಷಣ ಬಾಂಬು, ಚಾಕು, ಚೂರಿ, ಮೊದಲಾದವಲ್ಲ. ಪ್ರತಿ ಮಹಿಳೆಯನ್ನು ತಾಯಿ ಸ್ವರೂಪದಲ್ಲಿ ಕಾಣುವುದೇ ನಮ್ಮ ದೇಶದ ಸಂಸ್ಕೃತಿ ಆಗಿರುವಾಗ ವ್ಯವಸ್ಥಿತವಾಗಿ ನಮ್ಮ ಮಹಿಳೆಯರನ್ನು ಜಾಲದಲ್ಲಿ ಸಿಲುಕಿಸಿ ಅವರನ್ನು ಮತಾಂತರ ಮಾಡುವ ಕೆಲಸ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ಕೆಲಸ ಪ್ರತಿನಿತ್ಯ ನಡೆಯುತ್ತಿದೆ, ತಮಗೆ ಈ ಕುರಿತು ದಿನವೊಂದಕ್ಕೆ ಹತ್ತಾರು ಫೋನ್ ಕರೆಗಳು ಬರುತ್ತವೆ, ಬೇರೆ ಬೇರೆ ಜಿಲ್ಲೆಗಳ ನಮ್ಮ ಅಧ್ಯಕ್ಷರಿಗೂ ಕರೆಗಳು ಹೋಗುತ್ತಿವೆ. ಫೋನ್ ಮಾಡಿದವದೆಲ್ಲ, ಹಿಂದೂ ಮಹಿಳೆಯರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಬಗ್ಗೆ ಹತಾಷೆ ಮತ್ತು ನೋವು ತೋಡಿಕೊಳ್ಳುತ್ತಾರೆ ಎಂದು ಹೇಳಿದ ಮುತಾಲಿಕ್ ಇದಕ್ಕೆ ಕೊನೆ ಹೇಳಲೇಬೇಕು ಎಂದರು.

ಇನ್ನು ಮುಂದೆ ಮುಸಲ್ಮಾನರು ಇಂಥ ಕೃತ್ಯಗಳನ್ನು ನಿಲ್ಲಿಸದೆ ಹೋದರೆ, ಅವರು ನಮ್ಮ ಒಬ್ಬ ಯುವತಿಯನ್ನು ಬಲೆಗೆ ಕೆಡವಿದರೆ, ಮುಸ್ಲಿಂ ಸಮುದಾಯದ ಹತ್ತು ಹುಡುಗಿಯರನ್ನು ನಾವು ಹಾರಿಸಿಕೊಂಡು ಹೋಗುತ್ತೇವೆ ಅಂತ ಮುತಾಲಿಕ್ ವಿವಾದಾತ್ಮಕ ಮಾತುಗಳನ್ನಾಡಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಕೋಮು ಗಲಭೆಗೆ ಪ್ರಚೋದನೆ ನೀಡುವ ಮಾತುಗಳನ್ನಾಡಬೇಡಿ, ಇನ್ನು ಸಾಕು, ಎಲ್ಲ ಧರ್ಮದವರು ಒಟ್ಟಾಗಿ ಅನ್ಯೋನ್ಯತೆಯಿಂದ ಬಾಳೋಣ ಅಂತ ಕಳಕಳಿ ವಿನಂತಿ ಮಾಡಿಕೊಂಡರೂ ಮುತಾಲಿಕ್ ಅವರಂಥ ಜನ ಪ್ರಚೋದನಕಾರಿ ಬಾಷಣ ಮಾಡುವುದನ್ನು ನಿಲ್ಲಿಸುತ್ತಿಲ್ಲ ಅನ್ನೋದೇ ಕನ್ನಡಿಗರ ಯೋಚನೆಯಾಗಿದೆ.

TV9 Kannada


Leave a Reply

Your email address will not be published.