ಗದಗನಲ್ಲಿ ಹಸಿವಿನಿಂದ ಕಂಗಾಲಾಗಿದ್ದ ಬೆಕ್ಕಿನ ಮರಿಗೆ ಮಾಲೀಕನನ್ನು ಕಂಡಾಕ್ಷಣ ಹಸಿವು ಮರೆತೇಹೋಯ್ತು! | A desperately hungry kitten in Gadag forgets it empty stomach after seeing its master ARBಇತ್ತ ಮನೆಯಲ್ಲಿ ಒಂಟಿ ಬೆಕ್ಕಿನ ಮರಿ ಮನೆ ಯಜಮಾನರನ್ನು ಕಾಯುತ್ತಾ ಕುಳಿತಿದೆ. ಆದರೆ ಸಮಯ ಮೀರುತ್ತಿದ್ದಂತೆ ಅದಕ್ಕೆ ಹೊಟ್ಟೆ ಹಸಿಯಲಾರಂಭಿಸಿದೆ. ತಡವಾದಂತೆಲ್ಲ ಹೊಟ್ಟೆ ತಾಳ ಹಾಕುವುದು ಸಹ ಹೆಚ್ಚಾಗಿದೆ. ಅದಕ್ಕೆ ಎಟಗುವಂತೆ ಹಾಲಾಗಲೀ ಬೇರೆ ಯಾವುದೇ ಪದಾರ್ಥವಾಗಲೀ ಕುಟುಂಬದರು ಇಟ್ಟುಹೋಗಿಲ್ಲ.

TV9kannada Web Team


| Edited By: Arun Belly

May 20, 2022 | 6:50 PM
Gadag:  ಅನಾಹುತಕಾರಿ ಮಳೆ ಮಾನವರಿಗಷ್ಟೇ ಅಲ್ಲದೆ ಪಶು ಪಕ್ಷಿಗಳನ್ನು ದಯನೀಯ ಸ್ಥಿತಿಗೆ ತಳ್ಳುತ್ತಿದೆ. ಮತ್ತೊಂದು ವಿಡಿಯೋನಲ್ಲಿ ನಾವು ಒಂದು ನಾಯಿ ಮತ್ತು ಅದರ 5 ಮರಿಗಳನ್ನು ದಯನೀಯ ಸ್ಥಿತಿಯಿಂದ ಪಾರು ಮಾಡಿ ತೆಪ್ಪವೊಂದರಲ್ಲಿ ಸುರಕ್ಷಿತ ಸ್ಥಳಕ್ಕೆ ಕರೆತಂದ ದೃಶ್ಯವನ್ನು ತೋರಿಸಿದ್ದೇವೆ. ಅದು ದಾವಣಗೆರೆ ಕತೆಯಾದರೆ, ಗದಗನಲ್ಲಿ (Gadag) ಹಸಿದು ಕಂಗಾಲಾಗಿದ್ದ ಬೆಕ್ಕಿನ ಮರಿಯ (kitten) ವಿಡಿಯೋವನ್ನು ನಿಮಗೆ ತೋರಿಸುತ್ತಿದ್ದೇವೆ. ಗದಗ ಜಿಲ್ಲೆಯಲ್ಲೂ ಮಳೆ ಧಾರಾಕಾರವಾಗಿ ಸುರಿಯುತ್ತಿದೆ (heavy downpour). ಗದಗ ನಗರದ ಗಂಗಿಮಡಿ ಬಡಾವಣೆಯಲ್ಲಿ ವಾಸಿಸುವ ಕುಟುಂಬ ಬೆಕ್ಕನ್ನು ಸಾಕಿದೆ. ಇಲ್ಲಿ ಕಂಗಾಲಾಗಿ ಮಿಯಾಂವ್ ಮಿಯಾಂವ್ ಅಂತ ಕೂಗುತ್ತಿರುವುದೇ ಅವರು ಸಾಕಿರುವ ಬೆಕ್ಕಿನ ಮರಿ.

ಯಾವುದೋ ಕಾರ್ಯನಿಮಿತ್ತ ಇಡೀ ಕುಟುಂಬ ಬೆಕ್ಕನ್ನು ಮನೆಯಲ್ಲೇ ಬಿಟ್ಟು ಆಚೆ ಹೋಗಿದೆ. ಪ್ರಾಯಶ: ಬೇಗ ವಾಪಸ್ಸಾಗುವ ದೃಷ್ಟಿಯಿಂದ ಹೋಗಿರಬಹುದು. ಅವರು ಮನೆಯಿಂದ ಹೊರಬಿದ್ದ ಬಳಿಕ ಮಳೆ ಸುರಿಯುವುದು ಶುರುವಾಗಿದೆ ಮತ್ತು ಬಹಳ ಸಮಯದವರೆಗೆ ಸುರಿಯುವುದು ನಿಂತಿಲ್ಲ. ಮಳೆ ನಿಲ್ಲದ ಹೊರತು ಅವರು ಮನೆಗೆ ವಾಪಸ್ಸಾಗುವಂತಿರಲಿಲ್ಲ.

ಇತ್ತ ಮನೆಯಲ್ಲಿ ಒಂಟಿ ಬೆಕ್ಕಿನ ಮರಿ ಮನೆ ಯಜಮಾನರನ್ನು ಕಾಯುತ್ತಾ ಕುಳಿತಿದೆ. ಆದರೆ ಸಮಯ ಮೀರುತ್ತಿದ್ದಂತೆ ಅದಕ್ಕೆ ಹೊಟ್ಟೆ ಹಸಿಯಲಾರಂಭಿಸಿದೆ. ತಡವಾದಂತೆಲ್ಲ ಹೊಟ್ಟೆ ತಾಳ ಹಾಕುವುದು ಸಹ ಹೆಚ್ಚಾಗಿದೆ. ಅದಕ್ಕೆ ಎಟಗುವಂತೆ ಹಾಲಾಗಲೀ ಬೇರೆ ಯಾವುದೇ ಪದಾರ್ಥವಾಗಲೀ ಕುಟುಂಬದರು ಇಟ್ಟುಹೋಗಿಲ್ಲ. ಹಾಗಾಗಿ ಅದು ಹಸಿವು ತಾಳಲಾರದೆ ಕಂಗಾಲಾಗಿ ಅರಚುತ್ತಿದೆ.

ಅದೇ ಸಮಯಕ್ಕೆ ಕುಟುಂಬ ವಾಪಸ್ಸಾಗಿದೆ. ಅವರನ್ನು ನೋಡಿ ಅದರ ಮುಖದಲ್ಲಿ ಸಂತೃಪ್ತಿಯ ಭಾವ. ತನ್ನ ಸಂತಸ ಮತ್ತು ನಿರಾಳತೆಯನ್ನು ಅದು ಹೇಗೆ ಪ್ರದರ್ಶಿಸುತ್ತಿದೆ ಅಂತ ಗಮನಿಸಿ. ಮಾಲೀಕನ ಹೆಗಲೇರಿ ಯಾಕೆ ನನ್ನನ್ನು ಬಿಟ್ಟು ಹೋಗಿದ್ದು ಅನ್ನುವಂತಿದೆ ಅದರ ವರ್ತನೆ.

ಸಾಕು ಪ್ರಾಣಿಗಳೇ ಹಾಗೆ ಮಾರಾಯ್ರೇ, ತಮ್ಮನ್ನು ಸಾಕಿದವರನ್ನು ತುಂಬಾ ಹಚ್ಚಿಕೊಂಡು ಬಿಡುತ್ತವೆ.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ


TV9 Kannada


Leave a Reply

Your email address will not be published. Required fields are marked *