ಗದಗ್​ನ ಎಟಿಎಂನಲ್ಲಿ ಬರೀ ಹರಿದ ನೋಟುಗಳೇ ಪತ್ತೆ

ಗದಗ್​ನ ಎಟಿಎಂನಲ್ಲಿ ಬರೀ ಹರಿದ ನೋಟುಗಳೇ ಪತ್ತೆ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಎಟಿಎಂನಲ್ಲಿ ಹರಿದ ನೋಟುಗಳು ಪತ್ತೆಯಾಗಿವೆ.

ಗ್ರಾಮದ ಎಸ್​ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಂದ ಗ್ರಾಮಸ್ಥರಿಗೆ ಹರಿದ 500 ರೂಪಾಯಿ ಮುಖಬೆಲೆಯ ನೋಟುಗಳು ಸಿಕ್ಕಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.

ಕಳೆದ ಒಂದು ತಿಂಗಳಿಂದ ಗ್ರಾಮೀಣ ಪ್ರದೇಶದ ಎಟಿಎಂನಲ್ಲಿ ಹರಿದ ನೋಟುಗಳು ಸಿಗುತ್ತಿದ್ದು, ಈ ಬಗ್ಗೆ ಬ್ಯಾಂಕ್​ನವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗ್ತಿಲ್ಲ ಅಂತ ಗ್ರಾಹಕರು ಕಿಡಿಕಾರಿದ್ದಾರೆ.

The post ಗದಗ್​ನ ಎಟಿಎಂನಲ್ಲಿ ಬರೀ ಹರಿದ ನೋಟುಗಳೇ ಪತ್ತೆ appeared first on News First Kannada.

Source: newsfirstlive.com

Source link