ಗದುಗಿನ ರಾಚೋಟಿ ವೀರಭದ್ರೇಶ್ವರನನ್ನು ಭಕ್ತರು ಕಲಿಯುಗ ಕಾಮಧೇನು ಅಂತ ಕರೆಯುತ್ತಾರೆ | Gadag’s Rachoti Veerabhadreshwara Temple is unique because it was built after idol was installed


ಉತ್ತರ ಕರ್ನಾಟಕದಲ್ಲಿ ಗದಗಿನ ರಾಚೋಟಿ ವೀರಭದ್ರೇಶ್ವರ ದೇವಸ್ಥಾನ ಬಗ್ಗೆ ಕೇಳದವರು ಬಹಳ ಕಡಿಮೆ ಜನ ಇರಬಹುದು. ಈ ದೇವಸ್ಥಾನದ ಖ್ಯಾತಿಯೇ ಅಂಥದ್ದು. ಈ ಭಾಗದ ವೀರಶೈವ ಲಿಂಗಾಯಿತರಿಗೆ ರಾಚೋಟಿ ವೀರಭದ್ರೇಶ್ವರ ಮನೆ ದೇವರು. ದೇವಸ್ಥಾನದ ಪ್ರಸಿದ್ಧಿಗೆ ಒಂದು ಕಾರಣವೂ ಇದೆ. ಸಾಮಾನ್ಯವಾಗಿ ದೇವಸ್ಥಾನಗಳ ನಿರ್ಮಾಣಗೊಂಡ ನಂತರವೇ ದೇವರ ವಿಗ್ರಹವನ್ನು ತಂದು ಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಅದರೆ, ರಾಚೋಟಿ ವೀರಭದ್ರೇಶ್ವರ ದೇವಸ್ಥಾನ ಮಾತ್ರ ಈ ಪದ್ಧತಿಗೆ ತದ್ವಿರುದ್ಧವಾಗಿ ನಿರ್ಮಾಣವಾಗಿದೆ. ಮೊದಲು ವೀರಭದ್ರೇಶ್ವರನ ವಿಗ್ರಹವನನ್ನು ಪ್ರತಿಷ್ಠಾಪಿಸಿ ನಂತರ ದೇಗುಲವನ್ನು ನಿರ್ಮಿಸಲಾಗಿದೆ.

ಸುಮಾರು 150 ವರ್ಷಗಳ ಹಿಂದೆ, ಫಕೀರಮ್ಮಮತ್ತು ಭದ್ರಯ್ಯ ದಂಪತಿಗೆ ವೀರಭದ್ರೇಶ್ವರ ದೇವರು ಕನಸಲ್ಲಿ ಬಂದು ಗುಡಿಯನ್ನು ಯಾವ ಸ್ಥಳದಲ್ಲಿ ಕಟ್ಟಬೇಕು ಎಂದು ತಿಳಿಸಿದ ನಂತರ ಮರುದಿನ ನೀರಿನಲ್ಲಿ ತೇಲಿಬಂದ ವೀರಭದ್ರೇಶ್ವರನ ವಿಗ್ರಹವನ್ನು ಈ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು.

ರಾಚೋಟಿ ವೀರಭದ್ರೇಶ್ವರನನ್ನು ಭಕ್ತರು ಕಲಿಯುಗ ಕಾಮಧೇನು ಅಂತ ಕರೆಯುತ್ತಾರೆ. ಹರಕೆ ಹೊತ್ತು ಬರುವವರ ಇಷ್ಟಾರ್ಥಗಳೆಲ್ಲ ನೆರವೇರುತ್ತವೆ ಅಂತ ಅವರು ಹೇಳುತ್ತಾರೆ. ರಾಜಕೀಯ ಧುರೀಣರು, ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೊದಲು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ. ಹಾಗಯೇ, ರೈತರು ಬಿತ್ತನೆ ಕಾರ್ಯ ಕೈಗೊಳ್ಳುವ ಮೊದಲು ವೀರಭದ್ರೇಶ್ವರನಿಗೆ ಪೂಜೆ ಸಲ್ಲಿಸುತ್ತಾರೆ. ಹಾಗೆ ಮಾಡಿದರೆ ಎಂಥ ಬರಗಾಲ ಎದುರಾದರೂ ಉತ್ತಮ ಫಸಲು ಸಿಗುತ್ತಂತೆ.

ರಾಚೋಟಿ ವೀರಭದ್ರೇಶ್ವರ ದರ್ಶನಕ್ಕೆ ಬೇರೆ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ.

ಇದನ್ನೂ ಓದಿ:   ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್​ಗೆ ದೃಷ್ಟಿ ತೆಗೆದು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಜೋಗತಿ ಮಂಜಮ್ಮ; ವಿಡಿಯೋ ಫುಲ್ ವೈರಲ್

TV9 Kannada


Leave a Reply

Your email address will not be published. Required fields are marked *