ಗನ್ ಹಿಡಿಯೋದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನು ಪ್ರಶ್ನಿಸುವ ಅಧಿಕಾರ ಸಿದ್ದರಾಮಯ್ಯನಿಗೆ ಇಲ್ಲ: ಬೋಪಯ್ಯ | Siddaramaiah is no one to question whether I held a gun, its my birthright: Bopaiah, MLA ARBಯಾವುದಾದರೂ ಹೇಳಿಕೆ ನೀಡುವ ಮೊದಲು ಸಿದ್ದರಾಮಯ್ಯ ತಾನೇನು ಹೇಳಲಿದ್ದೇನೆ ಅನ್ನೋದನ್ನ ಯೋಚಿಸಬೇಕು. ಅಷ್ಟಕ್ಕೂ ಗನ್ ಹಿಡಿಯುವುದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನು ಕೇಳಲು ಇವನ್ಯಾರು? ಅಂತ ಬೋಪಯ್ಯ ರೇಗಿದರು.

TV9kannada Web Team


| Edited By: Arun Belly

May 17, 2022 | 6:09 PM
Madikeri:  ಸಿದ್ದರಾಮಯ್ಯ ವರ್ಸಸ್ ಬೋಪಯ್ಯ ಮಾತಿನ ಕಾಳಗ ಅರಂಭವಾಗಿದೆ. ಅದು ಶುರುವಾಗಿದ್ದು ಹೇಗೆ ಅಂತ ಮೊದಲು ಹೇಳಿ ಬಿಡ್ತೀವಿ. ಮಡಿಕೇರಿಯ ಶಾಲಾ ಅವರಣವೊಂದರಲ್ಲಿ ಭಜರಂಗ ದಳದ ಕಾರ್ಯಕರ್ತರು ಶಸ್ತ್ರಾಭ್ಯಾಸ ಮಾಡುತ್ತಿರುವ ವಿಡಿಯೋ ವೈರಲ್ ಅಗಿದ್ದು ಅದರ ವಿರುದ್ಧ ಎಸ್ ಡಿ ಪಿ ಐ (SDPI) ದೂರು ಸಲ್ಲಿಸಿದೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿಷಯ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವಾಗ ವಿರಾಜಪೇಟೆಯ ಬಿಜೆಪಿ ಶಾಸಕ ಕೆ ಜಿ ಬೋಪಯ್ಯ (KG Bopaiah) ಅಲ್ಲಿಗೆ ಹೋಗಿದ್ದಾರೆ, ಗನ್ ಹಿಡಿದಿದ್ದಾರೆ ಅಂತೆಲ್ಲ ಕಾಮೆಂಟ್ ಮಾಡಿದ್ದಾರೆ. ಅದು ಮಾಜಿ ಸ್ಪೀಕರ್ ಬೋಪಯ್ಯನವರಿಗೆ ಸರಿಯೆನಿಸಿಲ್ಲ. ಹಾಗಾಗಿ, ಸೋಮವಾರದಂದು ಮಡಿಕೇರಿಯಲ್ಲಿ ಸಿದ್ದರಾಮಯ್ಯನವರ ಟೀಕೆಗೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಅವರು ‘ನನ್ನನ್ನು ಪ್ರಶ್ನಿಸಲು ಅವನ್ಯಾರು,’ ಅಂತ ಏಕವಚನದಲ್ಲಿ ದಾಳಿ ನಡೆಸಿದ್ದಾರೆ.

ತ್ರಿಶೂಲ ಅಭ್ಯಾಸ ಮಾಡಬಾರದು ಅಂತ ಎಲ್ಲೂ ಹೇಳಿಲ್ಲ, ಎಸ್ ಡಿ ಪಿ ಐ, ಪಿಎಫ್ ಐ ಮೊದಲಾದ ಸಂಘಟನೆಗಳ ಬಗ್ಗೆ ಕಾಮೆಂಟ್ ಅವುಗಳ ಬಗ್ಗೆ ಪ್ರತಿಕ್ರಿಯಿಸುವುದು ನನ್ನ ಜಾಯಮಾನವಲ್ಲ. ಅವೆಲ್ಲ ಹಾದಿ ಬೀದಿಯಲ್ಲಿ ಓಡಾಡಿಕೊಂಡಿರುವ ಮತ್ತು ದೇಶಕ್ಕೆ ಮಾರಕವಾಗಿರುವ ಸಂಘಟನೆಗಳು. ಹಾಗಾಗಿ ನನ್ನ ಪ್ರತಿಕ್ರಿಯೆಗೆ ಅವು ಅರ್ಹವಲ್ಲ. ಆದರೆ ನಮ್ಮ ಪರಿವಾರದ ಕಾರ್ಯಕ್ರಮಗಳಿಗೆ ನಾನು ಹೋಗುತ್ತೇನೆ. ಅವರ ಕುಂದುಕೊರತೆಗಳ ಬಗ್ಗೆ ವಿಚಾರಿಸುತ್ತೇನೆ, ಅದರಲ್ಲಿ ಸಿದ್ದರಾಮಯ್ಯ ಹೇಳುವಂಥ ತಪ್ಪೇನಿದೆ, ಎಂದು ಬೋಪಯ್ಯ ಹೇಳಿದರು.

ಭಜರಂಗ ದಳದ ಕಾರ್ಯಕರ್ತರಿಗೆ ನಾನು ಗನ್ ಹಿಡಿದು ಶಸ್ತ್ರಾಭ್ಯಾಸ ಮಾಡಿ ಎಂದು ಹೇಳಿಲ್ಲ. ಅಥವಾ ನಾನು ಗನ್ ಹಿಡಿದು ಶಿಬಿರಕ್ಕೆ ಹೋಗಿಲ್ಲ. ಯಾವುದಾದರೂ ಹೇಳಿಕೆ ನೀಡುವ ಮೊದಲು ಸಿದ್ದರಾಮಯ್ಯ ತಾನೇನು ಹೇಳಲಿದ್ದೇನೆ ಅನ್ನೋದನ್ನ ಯೋಚಿಸಬೇಕು. ಅಷ್ಟಕ್ಕೂ ಗನ್ ಹಿಡಿಯುವುದು ನಮ್ಮ ಜನ್ಮಸಿದ್ಧ ಹಕ್ಕು, ಅದನ್ನು ಕೇಳಲು ಇವನ್ಯಾರು? ಅಂತ ಬೋಪಯ್ಯ ರೇಗಿದರು.

TV9 Kannada


Leave a Reply

Your email address will not be published. Required fields are marked *