ಕಳೆದ ಮೂರು ವರ್ಷಗಳಿಂದ ಭಾರತ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡ್ತಿರುವ ಸಿನಿಮಾ ಕೆಜಿಎಫ್​. 2018ರ ಡಿಸೆಂಬರ್​ 21ರಂದು ಕೆಜಿಎಫ್​ ಚಾಪ್ಟರ್​ 1 ರಿಲೀಸ್​ ಆಗಿದ್ದೇ ತಡ, ಅದ್ಯಾವಾಗ ಚಾಪ್ಟರ್​​ 2 ಬಿಡುಗಡೆಯಾಗುತ್ತೋ ಅಂತ ಜನ ಕಾಯುವಂತಾಗಿದೆ. ಸದ್ಯ ಈ ವೇಯ್ಟ್​​ಗೆ ಮತ್ತೊಂದು ವಿಚಾರ ಪುಷ್ಟಿ ನೀಡುತ್ತಿದೆ. ಕೆಜಿಎಫ್​ ಚಾಪ್ಟರ್​ 2ನಲ್ಲಿ ಬಾಲಿವುಡ್​ ನಟಿಯೊಬ್ಬರು ಹೆಜ್ಜೆ ಹಾಕಲಿದ್ದಾರೆ ಅನ್ನೋ ಸುದ್ದಿ ಸದ್ಯ ಓಡಾಡ್ತಿದೆ.

ಹೌದು.. ಕೆಜಿಎಫ್​ ಅಂದಾಕ್ಷಣ ಡೈರೆಕ್ಷನ್​, ಮೇಕಿಂಗ್​, ​ ಯರಾಕಿಂಗ್​ ಸ್ಟಾರ್ಶ್​ ಜೊತೆಗೆ ನೆನಪಾಗೋದು ಜೋಕೆ ಹಾಡು. ಕನ್ನಡದಲ್ಲಿ ಈ ಹಾಡಿಗೆ ತಮನ್ನಾ ಭಾಟಿಯಾ ಹೆಜ್ಜೆ ಹಾಕಿದ್ದು, ಹಿಂದಿಯಲ್ಲಿ ಮೌನಿ ರಾಯ್​ ಕುಣಿದು, ಪಡ್ಡೆ ಹುಡುಗರ ಬೆವರಿಳಿಸಿದ್ದರು. ಇದೀಗ ಕೆಜಿಎಫ್​ ಚಾಪ್ಟರ್​ 2ನ ಹಾಡೊಂದಕ್ಕೆ ಬಾಲಿವುಡ್​ ನಟಿಯೊಬ್ಬರೇ ಎಂಟ್ರಿ ಕೊಡ್ತಿದ್ದಾರೆ. ಯೆಸ್​.. ಈಗಾಗಲೇ ಬಹಳಷ್ಟು ಐಟಂ ನಂಬರ್​ಗಳಲ್ಲಿ ಕಾಣಿಸಿಕೊಂಡು ತಮ್ಮ ಡ್ಯಾನ್ಸ್​ ಮೂಲಕವೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನ ಸಂಪಾದಿಸಿರುವ ನೋರಾ ಫತೇಹಿ, ಯಶ್​ ಜೊತೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗ್ತಿದೆ.

ಬಾಲಿವುಡ್​ನ ದಿಲ್​ಬರ್​, ಹಾಯ್​ ಗರ್​ಮಿ, ಓ ಸಾಕಿ ಸಾಕಿ, ಮುಖ್ಖಬುಲಾ ಹೀಗೆ ಬಹಳಷ್ಟು ಹಾಡುಗಳಲ್ಲಿ ಹೆಜ್ಜೆ ಹಾಕಿರುವ ನೋರಾ, ಇದೀಗ ಮತ್ತೊಂದು ಐಟಂ ನಂಬರ್​ಗೆ ರೆಡಿಯಾಗ್ತಿದ್ದಾರೆ ಅಂತ ಹೇಳಲಾಗ್ತಿದೆ. ಈ ಬಗ್ಗೆ ಕೆಜಿಎಫ್​ ತಂಡ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದ್ರೆ ಈ ಬಾರಿ ಈ ಹಾಡು ಕೇವಲ ಹಿಂದಿಗೆ ಸೀಮಿತವಾಗಿರುತ್ತಾ ಅಥವಾ ಕೆಜಿಎಫ್​ ಚಾಪ್ಟರ್​ 2ನ ಎಲ್ಲಾ ಭಾಷೆಗಳಲ್ಲೂ ಇರುತ್ತಾ ಅನ್ನೋದು ಇನ್ನಷ್ಟೆ ಗೊತ್ತಾಗಬೇಕು. ಸದ್ಯ ಕೆಜಿಎಫ್​ ಚಾಪ್ಟರ್​-2 ಪೋಸ್ಟ್​ ಪ್ರೊಡಕ್ಷನ್​​ ಹಂತದಲ್ಲಿದೆ.

The post ಗರಂ ಯಶ್​ಗೆ ಐಸ್​ಕ್ರೀಂನಂಥ ನೋರಾ ಜೋಡಿ; ಕೆಜಿಎಫ್​-2ನಲ್ಲಿ ಹೆಜ್ಜೆ ಹಾಕ್ತಾರಾ ನೋರಾ ಫತೇಹಿ?! appeared first on News First Kannada.

Source: newsfirstlive.com

Source link