ಸ್ಯಾಂಡಲ್ವುಡ್ ನಟ, ನಿರ್ದೇಶಕ ರಾಜ್.ಬಿ. ಶೆಟ್ಟಿ ಹಾಗೂ ರಿಷಭ್ ಶೆಟ್ಟಿ ನಟನೆಯ ‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಬಗ್ಗೆ ಇತ್ತೀಚಿಗಷ್ಟೇ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಅವರು ಕೂಡ ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.
ಚಿತ್ರಮಂದಿರದಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಯಶಸ್ವಿ ಪ್ರದರ್ಶನ ಕಂಡು ಸಕ್ಸಸ್ ಆದ ಬಳಿಕ ಜೀ5ನಲ್ಲಿ ಬಿಡುಗಡೆಯಾಗಿ ದಾಖಲೆ ಸೃಷ್ಟಿಸಿತ್ತು. ಜೀ5ನಲ್ಲಿ ಬಿಡುಗಡೆಗೊಂಡ ಮೂರು ದಿನಗಳಲ್ಲಿ ಈ ಚಿತ್ರ ಬರೋಬ್ಬರಿ 8 ಕೋಟಿ ನಿಮಿಷ ವೀಕ್ಷಣೆ ಕಂಡಿದೆ.
ಇನ್ನು ಈ ಸಿನಿಮಾವನ್ನು ಕೇವಲ ಕನ್ನಡ ಚಿತ್ರಪ್ರೇಮಿಗಳು ಮಾತ್ರವಲ್ಲದೇ ಬೇರೆ ಚಿತ್ರರಂಗದ ಪರಭಾಷಾ ಮಂದಿ ಕೂಡ ಮೆಚ್ಚಿಕೊಂಡಿದ್ದಾರೆ. ಪರಭಾಷ ಸಿನಿಪ್ರೇಮಿಯೊಬ್ಬರು ಟ್ವಿಟರ್ ಮೂಲಕ ಟಾಲಿವುಡ್ ನಟ ರಾಣ ದಗ್ಗುಬಾಟಿ ಅವರಿಗೆ ದಯವಿಟ್ಟು ಸ್ಪಲ್ಪ ಬಿಡುವು ಮಾಡಿಕೊಂಡು ‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ನೋಡಿ ಅದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಅಂತ ಹೇಳಿದ್ದರು.
It’s awesome loved it!! ❤️ https://t.co/8uRGHV8tqF
— Rana Daggubati (@RanaDaggubati) January 20, 2022
ಅಭಿಮಾನಿಯ ಟ್ವೀಟ್ಗೆ ಪ್ರತಿಕ್ರಿಯಿಸಿದ ರಾಣ ‘ಸಿನಿಮಾ ಬಹಳ ಚೆನ್ನಾಗಿದೆ.ನನಗೆ ತುಂಬಾ ಇಷ್ಟವಾಯಿತು’ ಅಂತ ರೀ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಪರಭಾಷ ಪ್ರೇಕ್ಷಕರು ಕನ್ನಡ ಸಿನಿಮಾಗಳ ಮೇಲೆ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ..