ಗರ್ಭಗೀತೆ: ತಾಯಿಯ ಗರ್ಭದಲ್ಲಿರುವಾಗಲೇ ಮಗುವನ್ನು ಮಾನಸಿಕ ಹಾಗೂ ದೈಹಿಕವಾಗಿ ಸದೃಢಗೊಳಿಸುವುದು ಹೇಗೆ? | Garbhageete How to make stronger Your Baby Mentally and Physically when its in womb; Know the tips by Yoga Expert Kamala Bharadwaj


Garbhageete: ತಮಗೆ ಹುಟ್ಟುವ ಮಗುವು ಕೇವಲ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸದೃಢವಾಗಿರಬೇಕು, ಆರೋಗ್ಯವಾಗಿರಬೇಕು ಎಂಬುದು ಎಲ್ಲಾ ಪೋಷಕರ ಆಸೆ.

ತಮಗೆ ಹುಟ್ಟುವ ಮಗುವು ಕೇವಲ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಸದೃಢವಾಗಿರಬೇಕು, ಆರೋಗ್ಯವಾಗಿರಬೇಕು ಎಂಬುದು ಎಲ್ಲಾ ಪೋಷಕರ ಆಸೆ. ಹಾಗೆಯೇ ಗರ್ಭಧಾರಣೆಗೂ ಮುನ್ನ ಹಾಗೂ ಗರ್ಭಧರಿಸುವ ಸಮಯದಲ್ಲಿ ದಂಪತಿಯ ಮಾನಸಿಕ ಸ್ಥಿತಿಯೂ ಮುಖ್ಯ ಪಾತ್ರವನ್ನು ವಹಿಸುತ್ತದೆ. ತಾಯಿ ದೈಹಿಕ ಹಾಗೂ ಮಾನಸಿಕವಾಗಿ ಎಷ್ಟು ಆರೋಗ್ಯವಾಗಿರುತ್ತಾಳೋ ಮಗುವು ಅಷ್ಟೇ ಆರೋಗ್ಯದಿಂದ ಬೆಳೆಯುತ್ತದೆ.

ಗರ್ಭಧಾರಣೆ ಸಂದರ್ಭದಲ್ಲಿ ಮಹಿಳೆಯು ಸೇವಿಸಬೇಕಾದ ಆಹಾರ, ಆಕೆಯ ಜೀವನಶೈಲಿ ಹೇಗಿರಬೇಕು, ಸಂಗೀತ, ಸಾಹಿತ್ಯ ಸೇರಿದಂತೆ ಆಕೆಯ ಹವ್ಯಾಸಗಳು ಹೇಗಿರಬೇಕು, ಪ್ರಾಣಾಯಾಮ, ಮನಸ್ಸಿನ ಭಾವೋದ್ವೇಗದ ನಿಯಂತ್ರಣಗಳು ಇವೆಲ್ಲವುಗಳಿಂದ ಮಗುವಿನ ಆರೋಗ್ಯವನ್ನು ಹೇಗೆ ಕಾಪಾಡಬಹುದು ಎಂಬುದರ ಬಗ್ಗೆ ಯೋಗ ತಜ್ಞೆ ಕಮಲಾ ಭಾರಧ್ವಾಜ್ ನೀಡಿರುವ ಲೇಖನ ಇಲ್ಲಿದೆ.

 • ಮಗುವಿನ ಮೆದುಳು ಬೆಳೆಯುವುದು ಮೊದಲ 5 ವರ್ಷ ಮಾತ್ರ
  ತುಂಬಾ ಮಗುವಿನ ಮೆದುಳು ಬೆಳೆಯುವುದು ಮೊದಲ 5 ವರ್ಷ ಮಾತ್ರ, ಮಗು ತಾಯಿಯ ಹೊಟ್ಟೆಯಲ್ಲಿದ್ದಾಗ ಮಗುವಿನ ಬೆಳವಣಿಗೆ ತುಂಬಾ ಪ್ರಮುಖವಾದದ್ದು.
  ಆ ಸಂದರ್ಭದಲ್ಲಿ ಬೇಡವಾದ ಆಲೋಚನೆಗಳನ್ನು ತಾಯಿ ಮಾಡಿದರೆ, ಆ ಮಗುವಿನ ಪೂರಕವಾಗಿ ತಂದೆ ತಾಯಂದಿರುವ ನಡೆದುಕೊಳ್ಳದೇ ಇದ್ದರೆ, ಮಗುವಿನ ಮೆದುಳಿನ ಮೇಲೆ ದುಷ್ಪರಿಣಾಮ ಉಂಟಾಗಿ ಮಗುವಿನ ಐಕ್ಯೂ ಲೆವೆಲ್ ಕಡಿಮೆಯಾಗುತ್ತಾ ಹೋಗುತ್ತದೆ.
 • ಗರ್ಭದಲ್ಲಿದ್ದಾಗ ಮಗುವಿನ ಮೆದುಳು ರಚನೆ ಯಾವಾಗ ಆರಂಭ
  ಮೆದುಳಿನ ರಚನೆ ಗರ್ಭಧಾರಣೆಯ ಆನಂತರ ಮೂರನೇ ವಾರದ ಬಳಿಕ ಆರಂಭವಾಗುತ್ತದೆ. ತಂದೆ ತಾಯಿಯರ ಜನಿಕ ಅಂಶಗಳಲ್ಲಿರುವ ನೀಲ ನಕ್ಷೆಯ ಆಧಾರದ ಮೇಲೆ ಪ್ರೋಟೀನ್, ವಿಟಮಿನ್​ಗಳು, ಖನಿಜ ಲವಣಾಂಶಗಳನ್ನು ಬಳಸಿಕೊಂಡು ಮೆದುಳಿನ ರಚನೆ ಪ್ರಗತಿಗೊಳ್ಳುತ್ತದೆ.

ನವಮಾಸ ತುಂಬಿ ಜನಿಸಿದ ಮಗುವಿನ ಮೆದುಳು ಶೇ. 60ರಷ್ಟು ಮಾತ್ರ ಬೆಳೆದಿರುತ್ತದೆ. ಆದ್ದರಿಂದ, ಯಾವುದೇ ಕಾಯಿಲೆಗಳು ಬಾರದಂತೆ ನೋಡಿಕೊಂಡಲ್ಲಿ, ಮೆದುಳಿನ ಆರೋಗ್ಯಕ್ಕಾಲಿ, ಮಾನಸಿಕ ಆರೋಗ್ಯಕ್ಕಾಗಲಿ ಯಾವುದೇ ತೊಂದರೆಯುಂಟಾಗುವುದಿಲ್ಲ

ಮಗುವಿನ ಆರೋಗ್ಯದ ಮೇಲೆ ಮೊದಲ 5 ವರ್ಷ ಯಾವುದೇ ತೊಂದರೆಯು ಆಗದಂತೆ, ಗರ್ಭಾವಸ್ಥೆಯಿಂದಲೇ ಹೆಚ್ಚು ಜಾಗ್ರತೆವಗಿಸಬೇಕು.

 • ವೈದ್ಯಕೀಯ ಜಾತಕವೆಂದರೇನು?
  ಮನುಷ್ಯನ ಬೆಳವಣಿಗೆ ಈ ಮೂರು ಅವಶ್ಯಕ
  ದಿನಚರ್ಯ
  ಋತುಚರ್ಯ
  ಗರ್ಭಿಣಿಚರ್ಯ

ಮಗುವಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಷ್ಟೇ ಅಲ್ಲದ ಮಗುವಿನ ಸಮಗ್ರ ಬೆಳವಣಿಗೆಗೂ ಸಹಕಾರಿ. ಇತ್ತೀಚೆಗೆ ಒಂದು ಗಂಡು ಮತ್ತು ಹೆಣ್ಣಿನ ಮದುವೆ ಮಾಡಬೇಕೆಂದಾದರೆ ಅವರು ಹೇಗಿರುತ್ತಾರೆ ಅವರ ಮುಂದಿನ ಜೀವನ ಹೇಗಿರುತ್ತೆ ಎಂದು ನೋಡುವುದಕ್ಕೆ ಅವರ ಜಾತಕವನ್ನು ನೋಡುತ್ತೇವೆ.
ಹಾಗೆಯೇ ನಮ್ಮ ಕುಟುಂಬದಲ್ಲಿರುವ ಎಲ್ಲರ ಆರೋಗ್ಯ ಹೇಗಿದೆ ಎಂಬುದಕ್ಕೆ ನಾವು ವೈದ್ಯಕೀಯ ಜಾತಕವನ್ನು ಕೂಡ ನೋಡಬಹುದಾಗಿದೆ. Astroyoga.co.in ಅಲ್ಲಿ ನಾವು ವೈದ್ಯಕೀಯ ಜಾತಕವನ್ನು ನೋಡಬಹುದಾಗಿದೆ.

ಮತ್ತಷ್ಟು ಓದಿ..

ಮಗುವನ್ನು ಪಡೆಯಬೇಕು ಎಂದು ದಂಪತಿ ನಿರ್ಧರಿಸಿದ ಬಳಿಕ, ಅವರ ಅಣ್ಣ ತಮ್ಮ ಅಕ್ಕ ತಂಗಿ ಅವರ ಆರೋಗ್ಯ ಹೇಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು.
ಕುಟುಂಬದಲ್ಲಿ ಯಾರಿಗಾದರೂ ಅಂಗವಿಕಲತೆ, ಬುದ್ಧಿಮಾಂದ್ಯತೆ ಇದೆಯೇ ಗರ್ಭಪಾತ ಪ್ರಕರಣವಿದೆಯೇ, ಮಕ್ಕಳು ಆಗದ ಸಮಸ್ಯೆಯಿದೆಯೋ, ವೀರ್ಯಾಣು ಸಮಸ್ಯೆಯಿದೆಯೇ ಎಂಬುದನ್ನು ತಿಳಿಯಲು ಕುಟುಂಬದ ವೈದ್ಯರ ಬಳಿ ಹೋಗಬೇಕು.
ದಂಪತಿ ರಕ್ತದ ಗುಂಪು, ಆರ್​ಎಚ್ ಫ್ಯಾಕ್ಟರ್ ಹಾಗೂ ಅವರಿಗಿರುವ ಕಾಯಿಲೆಗಳ ಬಗ್ಗೆ ವಿವರಣೆಯನ್ನು ಪಡೆದು ವೈದ್ಯರ ಬಳಿ ಇವೆಲ್ಲಾ ಮಾಹಿತಿಯನ್ನು ಕೊಡಬೇಕು.

 • 30 ವರ್ಷದೊಳಗೆ ಮಗುವಿಗೆ ಜನ್ಮ ನೀಡಿದರೆ ಉತ್ತಮ
  30 ವರ್ಷದೊಳಗೆ ಮಗುವಿಗೆ ಜನ್ಮ ನೀಡಬೇಕು ಎಂಬುದು ವೈದ್ಯಕೀಯ ದೃಷ್ಟಿಯಿಂದ ಉತ್ತಮ ಸಲಹೆಯಾಗಿದೆ. ಒಂದೇ ಮಗು ಸಾಕು ಎನ್ನುವವರು, ಎರಡು ಮಗು ಬೇಕು ಎನ್ನುವವರು ಯಾರೇ ಇರಲಿ 30 ವರ್ಷದೊಳಗೆ ಮಗುವನ್ನು ಹೆರುವುದು ಉತ್ತಮ.
  30ವರ್ಷದ ಬಳಿಕ ಮಹಿಳೆಯರ ದೇಹದಲ್ಲಿ ಮೆಟಾಬಾಲಿಸಂ ಕಡಿಮೆಯಾಗಿ, ಕ್ಯಾಲ್ಶಿಯಂ ಡಿಫಿಶಿಯನ್ಸಿ ಸಮಸ್ಯೆ ಅವರನ್ನು ಕಾಡುತ್ತದೆ. ಹೀಗಿರುವಾಗ ಮಗುವಿಗೆ ಜನ್ಮ ನೀಡಿದರೆ ಅವರ ಲಾಲನೆ ಪಾಲನೆ, ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯವನ್ನು ಕಾಪಾಡುವುದು ತಾಯಿಗೆ ಕಷ್ಟವಾಗಬಹುದು. ಹೀಗಾಗಿ 30ವರ್ಷದೊಳಗೆ ಮಗುವನ್ನು ಪಡೆಯುವುದು ಒಳಿತು.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ  ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ.  ಗರ್ಭಧಾರಣೆ, ಗರ್ಭಿಣಿಯರ ಆರೈಕೆ, ಗರ್ಭಿಣಿಯರು ಎಂತಹ ಆಹಾರ ಸೇವಿಸಬೇಕು, ನ್ಯಾಚ್ಯುರಲ್ ಬರ್ಥಿಂಗ್ ಕುರಿತ   ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published.