ಗರ್ಭಿಣಿಯರು ಈ ಪ್ರೋಟೀನ್ ಭರಿತ ಆಹಾರಗಳನ್ನು ಸೇವನೆ ಮಾಡಬೇಕು, ಆದರೆ….. | Pregnant women should consume these protein rich foods


ಗರ್ಭಿಣಿಯರು ಈ ಪ್ರೋಟೀನ್ ಭರಿತ ಆಹಾರಗಳನ್ನು ಸೇವನೆ ಮಾಡಬೇಕು, ಆದರೆ.....

ಸಾಂದರ್ಭಿಕ ಚಿತ್ರ

ಗರ್ಭಿಣಿಯರು ಗರ್ಭಾವಸ್ಥೆಯಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಬಲವಾಗಿರಬೇಕು ಎಂಬುದು ವೈದ್ಯರ ಮಾತು, ಅದಕ್ಕಾಗಿ ಹೆಚ್ಚು ಶಕ್ತಿಯುತ ಮತ್ತು ಪೌಷ್ಟಿಕಾಂಶತಯತ ಆಹಾರವನ್ನು ಸೇವನೆ ಮಾಡುವುದರಿಂದ ಗರ್ಭಿಣಿಯರು ತಮ್ಮ ಮಗುವಿನ ಬೆಳವಣಿಗೆ ಹಾಗೂ ಆರೋಗ್ಯದಲ್ಲಿ ಅಭಿವೃದ್ಧಿಯನ್ನು ಕಾಣಬಹುದು, ಇದರ ಜೊತೆಗೆ ಯಾವ ಆಹಾರಗಳನ್ನು ಸೇವನೆ ಮಾಡಬೇಕು ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು. ಅದಕ್ಕಾಗಿ ಕೆಲವೊಂದು ವೈದರು ಗರ್ಭಿಣಿಯರಿಗೆ ಆಹಾರ ಸಲಹೆಗಳನ್ನು ನೀಡಿದ್ದಾರೆ.  ಗರ್ಭಿಣಿಯರಿಗೆ ತಮ್ಮ ಚೊಚ್ಚಲ ಅಥವ ಎರಡನೇ ಗರ್ಭಾವಸ್ಥೆ ಸಮಯದಲ್ಲಿ ಹೆಚ್ಚು ಜಾಗೃತೆಯನ್ನು ವಹಿಸಬೇಕಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಗರ್ಭಿಣಿಯರಿಗೆ ಮಧುಮೇಹ, ರಕ್ತದೊತ್ತಡ, ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಅದಕ್ಕಾಗಿ ವೈದ್ಯರ ಸಲಹೆಗಳು ಅತೀ ಮುಖ್ಯವಾಗಿರುತ್ತದೆ.  ಸ್ಥೂಲಕಾಯತೆ ಮತ್ತು ಕಳಪೆ ಜೀವನಶೈಲಿಯ ಆಯ್ಕೆಗಳು ಗರ್ಭಾವಸ್ಥೆಯನ್ನು ಹೆಚ್ಚಿನ ಅಪಾಯದ ಕಾರಣವಾಗಬಹುದು. ಇದರರ್ಥ ಕಡಿಮೆ-ಅಪಾಯದ ಮಹಿಳೆಗಿಂತ ತಾಯಿ ಮತ್ತು ಆಕೆಯ ಮಗು ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ ತೊಡಕುಗಳನ್ನು ಉಂಟುಮಾಡುವ ಸಾಧ್ಯತೆ ಹೆಚ್ಚು.

ಆಹಾರದ ಕಾರಣದಿಂದ ಭಾರತದಲ್ಲಿ ಸುಮಾರು 20-30% ಗರ್ಭಿಣಿಯರು  ಅಪಾಯಕ್ಕೆ ಒಳಗಾಗಿದ್ದಾರೆ. ಆರಂಭಿಕ ಪತ್ತೆ, ಮುನ್ನೆಚ್ಚರಿಕೆಗಳು, ಆರೋಗ್ಯಕರ ಜೀವನಶೈಲಿ ಮತ್ತು ಆಹಾರಕ್ರಮವನ್ನು ನಿರ್ವಹಿಸುವುದು ಮತ್ತು ನಿಯಮಿತ ಪ್ರಸವಪೂರ್ವ ಆರೈಕೆಯು ತಾಯಿಯ ಮತ್ತು ಭ್ರೂಣದ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತಾಯಂದಿರು ಮತ್ತು ಅವರ ಶಿಶುಗಳಲ್ಲಿ ಹೆಚ್ಚಿನ ಅಪಾಯದ ಗರ್ಭಧಾರಣೆಯ ತೊಡಕುಗಳನ್ನು ತಡೆಗಟ್ಟುವಲ್ಲಿ ಪೌಷ್ಠಿಕಾಂಶವು ಪ್ರಮುಖ ಪಾತ್ರ ವಹಿಸುತ್ತದೆ.  ಪ್ರೆಗ್ನೆನ್ಸಿ ಡಯಟ್ ಟಿಪ್ಸ್ ಗಳನ್ನು  ಇಲ್ಲಿ ನೀಡಲಾಗಿದೆ.

ಧಾನ್ಯಗಳು

ಗರ್ಭಾವಸ್ಥೆಯಲ್ಲಿ  ಗರ್ಭಿಣಿಯರು ತಮ್ಮ ಆಹಾರದಲ್ಲಿ ಈ ಪತ್ತೆಗಳನ್ನು ಮಾಡಬೇಕು, ಧಾನ್ಯ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ  ಗರ್ಭಿಣಿಯರ ಆರೋಗ್ಯ ಮತ್ತು ಹೊಟ್ಟೆಯಲ್ಲಿರುವ ಮಗು ಕೂಡ ಒಳ್ಳೆಯ ಆರೋಗ್ಯವನ್ನು ಪಡೆದುಕೊಳ್ಳುತ್ತದೆ.  ಧಾನ್ಯದ ಖನಿಜಗಳು ವಿಟಮಿನ್ ಬಿಯನ್ನು ಸಮೃದ್ಧಿ  ಮಾಡುತ್ತಾದೆ. ಇದು ಭ್ರೂಣ ಬೆಳವಣಿಗೆಗೆ ಸಹಾಯಕವಾಗಿದೆ.  ಗರ್ಭಾವಸ್ಥೆಯಲ್ಲಿ ಬಿಳಿ ಬ್ರೆಡ್, ಜಂಕ್ ಫುಡ್ ಮತ್ತು ಸಂಸ್ಕರಿಸಿದ ಸಿಹಿತಿಂಡಿಗಳಲ್ಲಿ ಕಂಡುಬರುವ ಮೈದಾ ಮುಂತಾದ ಸಂಸ್ಕರಿಸಿದ ಧಾನ್ಯಗಳನ್ನು  ಗರ್ಭಿಣಿಯರು ಸೇವನೆ ಮಾಡಬಾರದು .  ಗೋಧಿ ಹಿಟ್ಟು, ಬಾರ್ಲಿ, ಓಟ್ಸ್, ಜೋಳ ಮತ್ತು ಖನಿಜಗಳು ಮತ್ತು ಫೈಬರ್ಗಳಿಂದ ತುಂಬಿರುವ ಬ್ರೌನ್ ರೈಸ್ ಅನ್ನು ತಿನ್ನಬಹುದು. ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಮತ್ತು ಮೂಲವ್ಯಾಧಿಯ ಅಪಾಯವನ್ನು ಕಡಿಮೆ ಮಾಡಲು ಈ ಧಾನ್ಯಗಳು ಅತ್ಯಂತ ಪ್ರಯೋಜನಕಾರಿ.

ಪ್ರೋಟೀನ್ ಭರಿತ ಆಹಾರಗಳು

ಗರ್ಭಿಣಿ ಮಹಿಳೆಯರು ಪ್ರೋಟೀನ್ ಭರಿತ ಆಹಾರಗಳನ್ನು ಸೇವನೆ ಮಾಡುವುದು ಉತ್ತಮ ಅದಕ್ಕಾಗಿ, ಯಾವ ಆಹಾರದಲ್ಲಿ ಹೆಚ್ಚು ಪ್ರೋಟೀನ್ ಇದೆ ಅಂತಹ ಆಹಾರಗಲನ್ನು ಸೇವನೆ ಮಾಡಬೇಕು.  ಮಗುವಿನ ಬೆಳವಣಿಗೆ ಮತ್ತು  ಗರ್ಭಾವಸ್ಥೆಯಲ್ಲಿ ಕಡಿಮೆ ಪ್ರೋಟೀನ್ ಸೇವನೆಯು ಪ್ರೋಟೀನ್ ಕೊರತೆಯನ್ನು ಉಂಟುಮಾಡಬಹುದು ಮತ್ತು ಭ್ರೂಣದ ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ. ಗರ್ಭಾವಸ್ಥೆಯಲ್ಲಿ ಪ್ರೋಟೀನ್‌ನ ನೈಸರ್ಗಿಕ ಮತ್ತು ಆರೋಗ್ಯಕರ ಮೂಲಗಳಾದ ಮೊಟ್ಟೆ, ಸೋಯಾಬೀನ್, ಮಸೂರ,  ಮಾಂಸ, ಕಡಲೆ, ಉಪ್ಪುರಹಿತ ಬೀಜಗಳು ಸೇವನೆ ಮಾಡುವುದರಿಂದ ಗರ್ಭಿಣಿಯರ ದೇಹದಲ್ಲಿ ಹೆಚ್ಚು ಪ್ರೋಟೀನ್ ಉತ್ಪಾದನೆ ಆಗುವುದು.

ಹಾಲಿನ ಉತ್ಪನ್ನಗಳು

ಗರ್ಭಿಣಿಯರಲ್ಲಿ  ಹಾಲಿ ಅಂಶಗಳು ಉತ್ಪಾದನೆ ಆಗುವ ಸಲುವಾಗಿ ಹಾಲಿ ಉತ್ಪನ್ನಗಳನ್ನು ಸೇವನೆ ಮಾಡಬೇಕು. ಹೆರಿಗೆಯ ಸಮಯದಲ್ಲಿ ಮತ್ತು ಅದರ ನಂತರವು ಹಾಲಿ ಅಂಶಗಳನ್ನು ಸೇವನೆ ಮಾಡಬೇಕು.  ಹಾಲು, ಮೊಸರು ಮತ್ತು ಕಾಟೇಜ್ ಚೀಸ್ ನಂತಹ ಡೈರಿ ಆಹಾರಗಳಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ, ಇದು ಮಗುವಿನ ಮೂಳೆಗಳು ಮತ್ತು ಹಲ್ಲುಗಳು ಬರಲು ಸಹಾಯ ಮಾಡುತ್ತದೆ. ಕ್ಯಾಲ್ಸಿಯಂ ಸೇವನೆಯು ಪ್ರಿಕ್ಲಾಂಪ್ಸಿಯಾದ ಅಪಾಯವನ್ನು ಕಡಿಮೆ ಮಾಡುತ್ತದೆ, ಇದು ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳಕ್ಕೆ ಕಾರಣವಾಗುತ್ತದೆ. ಗರ್ಭಿಣಿಯರು ಕಡಿಮೆ ಕೊಬ್ಬು ಮತ್ತು ಕಡಿಮೆ ಸಕ್ಕರೆಯ ಡೈರಿ ಉತ್ಪನ್ನಗಳನ್ನು ಆಯ್ಕೆ ಮಾಡಬೇಕು. ಹಾಲು ಅಥವಾ ಡೈರಿ ಅಲರ್ಜಿ ಇರುವವರು ಸೋಯಾ ಹಾಲು ಮತ್ತು ಮೊಸರು ಸಿಹಿಗೊಳಿಸದ ಮತ್ತು ಕ್ಯಾಲ್ಸಿಯಂ-ಬಲವರ್ಧಿತ ಡೈರಿ ಪರ್ಯಾಯಗಳನ್ನು ಆಯ್ಕೆ ಮಾಡಬಹುದು.

ಕಾರ್ಬೋಹೈಡ್ರೇಟ್‌ಗಳು 

ಕಾರ್ಬೋಹೈಡ್ರೇಟ್‌ಗಳು ಅಥವಾ ಪಿಷ್ಟಯುಕ್ತ ಆಹಾರಗಳು ಶಕ್ತಿ, ವಿಟಮಿನ್‌ಗಳು ಗರ್ಭಿಣಿಯ ಆರೋಗ್ಯ ಬೆಳವಣಿಯ  ಸಮೃದ್ಧ ಮೂಲವಾಗಿದೆ. ಪಿಷ್ಟಯುಕ್ತ ಆಹಾರವನ್ನು ಸೇವಿಸುವುದರಿಂದ ಗರ್ಭಿಣಿಯರು ಹೆಚ್ಚಿನ ಕ್ಯಾಲೊರಿಗಳನ್ನು ಹೊಂದಿರದೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಆಲೂಗಡ್ಡೆಗಳು, ಉಪಹಾರ ಧಾನ್ಯಗಳು, ಬ್ರೆಡ್, ಅಕ್ಕಿ, ಜೋಳ, ರಾಗಿ, ಗೆಣಸು ಮತ್ತು ಜೋಳದ ಹಿಟ್ಟು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲಗಳಾಗಿವೆ. ಹೆಚ್ಚಿನ ಅಪಾಯದ ಗರ್ಭಾವಸ್ಥೆಯಲ್ಲಿ, ಮಹಿಳೆಯರು ಹೆಚ್ಚಿನ ಫೈಬರ್, ಕಡಿಮೆ ಕೊಬ್ಬು, ಕಡಿಮೆ ಸಕ್ಕರೆ ಮತ್ತು ಕಡಿಮೆ ಉಪ್ಪು ಪಿಷ್ಟ ಆಹಾರಗಳಾದ  ಗೋಧಿ ಬ್ರೆಡ್, ಬ್ರೌನ್ ರೈಸ್,  ಆಲೂಗಡ್ಡೆಗಳನ್ನು ಆಯ್ಕೆ ಮಾಡಲು ನೆನಪಿನಲ್ಲಿಟ್ಟುಕೊಳ್ಳಬೇಕು.

ತಾಜಾ ಹಣ್ಣುಗಳು ಮತ್ತು ತರಕಾರಿಗಳು

ಗರ್ಭಿಣಿಯರು ತಮ್ಮ ಗರ್ಭಧಾರಣೆಯ ಸಮಯದಲ್ಲಿ  ಪ್ರತಿದಿನ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಬೇಕು. ಜೀವಸತ್ವಗಳು, ಖನಿಜಗಳು ಮತ್ತು ಫೈಬರ್‌ಗಳಿಂದ ತುಂಬಿರುವ ಅವು ಜೀರ್ಣಕ್ರಿಯೆ, ಜಲಸಂಚಯನ ಮತ್ತು ಮಲಬದ್ಧತೆಯನ್ನು ತಡೆಯಲು ಉತ್ತಮವಾಗಿದೆ.  ತಾಜಾ ತರಕಾರಿಗಳಲ್ಲಿ ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ಸಿ, ಡಿ ಮತ್ತು ಇ ಸಮೃದ್ಧವಾಗಿದೆ, ಇದು ಮಗುವಿನ ಬೆಳವಣಿಗೆಗೆ ಪ್ರಮುಖವಾಗಿದೆ. ಕಿತ್ತಳೆ, ನೆಲ್ಲಿಕಾಯಿ ಮೊದಲಾದ ಹಣ್ಣುಗಳು ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ದೇಹದಲ್ಲಿ ಕಬ್ಬಿಣದ ಅಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕಡು ಹಸಿರು ಎಲೆಗಳ ತರಕಾರಿಗಳಾದ ಪಾಲಕ್, ಬ್ರೊಕೊಲಿ ಮತ್ತು ಟರ್ನಿಪ್ ಗ್ರೀನ್ಸ್ ಫೋಲಿಕ್ ಆಮ್ಲದಿಂದ ತುಂಬಿರುತ್ತದೆ, ಇದು ಕೆಲವು ಜನ್ಮಜಾತ ಅಸಾಮರ್ಥ್ಯಗಳನ್ನು ತಡೆಯಲು ಸಹಾಯ ಮಾಡುತ್ತದೆ. ಗರ್ಭಿಣಿಯರು ತಮ್ಮ ತಟ್ಟೆಗಳಲ್ಲಿ ವಿವಿಧ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳುವುದು ಉತ್ತಮ .

TV9 Kannada


Leave a Reply

Your email address will not be published. Required fields are marked *