ನವದೆಹಲಿ: ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಬಹುತೇಕರು ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಲು ಪರದಾಡುವಂತಾಗಿದೆ. ಕೊರೊನೇತರ ಕಾಯಿಲೆಗಳಿಂದ ಬಳಲುತ್ತಿರುವವರು ಆಸ್ಪತ್ರೆಗಳಿಗೆ ಹೋಗಲು ಹಿಂದೇಟು ಹಾಕ್ತಿದ್ದಾರೆ. ಕಾರಣ ನಮಗೂ ಎಲ್ಲಿ ಕೊರೊನಾ ಸೋಂಕು ಬಂದುಬಿಡುತ್ತೋ ಅನ್ನೋ ಆತಂಕ. ಇನ್ನು ಗರ್ಭಿಣಿಯರ ಪಾಡು ಹೇಳತೀರದು.

ಇಂಥ ಸಂದರ್ಭದಲ್ಲಿ ಗರ್ಭಿಣಿಯರಿಗೆ ತುರ್ತು ವೈದ್ಯಕೀಯ ನೆರವು ಪಡೆಯಬೇಕಾದಲ್ಲಿ ಏನು ಮಾಡಬೇಕು ಅಂತ ಗೊತ್ತಾಗದೇ ಗೊಂದಲ ಪಡುವಂತಾಗಿದೆ. ಇದನ್ನ ಮನಗಂಡ ರಾಷ್ಟ್ರೀಯ ಮಹಿಳಾ ಆಯೋಗ, ವಾಟ್ಸ್​ ಆ್ಯಪ್ ನಂಬರ್​ವೊಂದನ್ನು ಬಿಡುಗಡೆ ಮಾಡಿದೆ.

ಮಹಿಳಾ ಆಯೋಗ ಬಿಡುಗಡೆ ಮಾಡಿರೋ (9354954224) ಈ ನಂಬರ್​ಗೆ ಗರ್ಭಿಣಿಯರು ವಾಟ್ಸ್​ಆ್ಯಪ್ ಮಾಡುವ ಮೂಲಕ ತಮಗೆ ಅಗತ್ಯವಿರೋ ತುರ್ತು ವೈದ್ಯಕೀಯ ನೆರವನ್ನು ಪಡೆಯಬಹುದು ಅಂತಾ ರಾಷ್ಟ್ರೀಯ ಮಹಿಳಾ ಆಯೋಗ ಹೇಳಿದೆ.

ವಿ.ಸೂ: ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post ಗರ್ಭಿಣಿಯರೇ.. ತುರ್ತು ವೈದ್ಯಕೀಯ ನೆರವಿಗೆ ಈ ನಂಬರ್​ಗೆ ವಾಟ್ಸ್​ಆ್ಯಪ್​ ಮಾಡಿ appeared first on News First Kannada.

Source: newsfirstlive.com

Source link