ಲಖನೌ: ಹೆರಿಗೆ ಶಸ್ತ್ರಚಿಕಿತ್ಸೆ ಸಮಯದಲ್ಲಿ ಮಹಿಳೆಯ ಹೊಟ್ಟೆಯೊಳಗೆ ಬಟ್ಟೆಯೊಂದನ್ನೇ ಮರೆತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಶಹಜಹಾನ್ಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಮಹಿಳೆಯ ಹೊಟ್ಟೆಯೊಳಗೆ ಬಟ್ಟೆಯನ್ನ ಮರೆತಿದ್ದು, ಮಹಿಳೆಯ ಸ್ಥಿತಿ ಗಂಭೀರವಾಗಿದೆ.

ಕಿಂಗ್ ಜಾರ್ಜ್​ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಾಗಿರುವ ಮಹಿಳೆಯನ್ನು ವೆಂಟಿಲೇಟರ್​ನಲ್ಲಿ ಇಡಲಾಗಿದೆ. ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮಪುರ ಉತ್ತರದ ನಿವಾಸಿ ಮನೋಜ್ ದೂರು ನೀಡಿದ್ದಾರೆ. ತನ್ನ 30 ರ ಹರೆಯದ ಪತ್ನಿ ನೀಲಂ ಜನವರಿ 6 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಈ ಸಂದರ್ಭದಲ್ಲಿ ಹೊಟ್ಟೆಯಲ್ಲಿ ಬಟ್ಟೆಯೊಂದನ್ನು ಬಿಡಲಾಗಿದೆ ಎಂದು ಆರೋಪಿಸಿದ್ದಾರೆ. ಹೆರಿಗೆ ನಂತರ ಮಹಿಳೆ ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದಳು. ವೈದ್ಯರ ಚಿಕಿತ್ಸೆಯಿಂದ ಯಾವುದೇ ಪರಿಹಾರ ಸಿಗದಾಗ ಪತ್ನಿಯನ್ನು ಶಹಜಹಾನ್ಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಯಿತು. ಅಲ್ಲಿ ಸಿಟಿ ಸ್ಕ್ಯಾನ್ ಮೂಲಕ ಆಕೆಯ ಹೊಟ್ಟೆಯಲ್ಲಿ ಬಟ್ಟೆಯೊಂದನ್ನು ಬಿಟ್ಟಿರುವುದು ಪತ್ತೆ ಹಚ್ಚಲಾಗಿದೆ. ಅದನ್ನು ಆಪರೇಷನ್ ಮೂಲಕ ತೆಗೆದು ಹಾಕಲಾಗಿದೆ ಎಂದು ಹೇಳಿದರು.

ಈ ಸಂಬಂಧ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಮೂವರು ಸದಸ್ಯರ ವಿಚಾರಣಾ ತಂಡವನ್ನು ರಚಿಸಿ ಶೀಘ್ರ ವರದಿ ನೀಡುವಂತೆ ಸೂಚಿಸಿದ್ದಾರೆ.

The post ಗರ್ಭಿಣಿ ಮಹಿಳೆಗೆ ಹೆರಿಗೆ ಮಾಡಿಸಿ ಹೊಟ್ಟೆಯೊಳಗೆ ಬಟ್ಟೆ ಮರೆತ ವೈದ್ಯರು.. ಸಿಟಿ ಸ್ಕ್ಯಾನ್​ನಲ್ಲಿ ಪತ್ತೆ appeared first on News First Kannada.

Source: newsfirstlive.com

Source link