ಗದಗ: ಸಾಮಾನ್ಯವಾಗಿ ಗರ್ಭಿಣಿ ಮಹಿಳೆಯರಿಗೆ ನಾವು ಸೀಮಂತ ಮಾಡುವದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ.. ಆದರೆ ಇಲ್ಲೊಬ್ಬರು ಗೋವಿಗೆ ಸೀಮಂತ ಕಾರ್ಯ ಮಾಡೋ ಮೂಲಕ ಗೋ ಪ್ರೇಮ ಮೆರೆದಿದ್ದಾರೆ. ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಗ್ರಾಮದ ಶ್ರೀಕಾಂತ್ ಗೂರಮ್ಮಣ್ಣವರ್ ಎಂಬವರು ಮನೆಯಲ್ಲಿ ಗೌರಿ ಎಂಬ ಹೆಸರಿನ ಗೋವಿಗೆ ಅದ್ಧೂರಿ ಸೀಮಂತ ಕಾರ್ಯ ನೆರವೇರಿಸಿದ್ದಾರೆ.

ಬರೊಬ್ಬರಿ 7 ವರ್ಷದ ನಂತರ ಗೌರಿ ಹೆಸರಿನ ಗೋವು ಗರ್ಭ ಧರಿಸಿರುವುದು ಮನೆ ಮಂದಿಗೆಲ್ಲಾ ಹುರುಪು ತಂದಿದೆ. ಗರ್ಭಿಣಿಯರಿಗೆ ನಡೆಸುವ ಸೀಮಂತ ಕಾರ್ಯದಂತೆ ಈ ಗೋವಿಗೂ ರೇಷ್ಮೆ ಸೀರೆ ತೊಡಿಸಿ, ಕೊರಳಿಗೆ ಹೂ ಮಾಲೆಹಾಕಿ, ಕಾಲಿಗೆ ಕಾಲ್ಗೆಜ್ಜೆ ಹಾಕಿ ಶೃಂಗಾರ ಮಾಡಿ ತಮ್ಮ ಮನೆಯ ಮಗಳಂತೆ ಶಾಸ್ತ್ರೋಕ್ತವಾಗಿ ಸೀಮಂತ ಕಾರ್ಯಮಾಡಿದ್ದಾರೆ.

ಕಾರ್ಯಕ್ಕೆ ಮಾಡಿದ್ದ ರುಚಿ ರುಚಿ ಅಡುಗೆಯನ್ನ ತಾವೂ ಉಂಡು ಗೋವಿಗೂ ಉಣಬಡಿಸಿದ್ದಾರೆ. ಗೋ ಸಂತತಿ ಉಳಿಯಲಿ, ಬೆಳೆಯಲಿ ಎಂಬ ಉದ್ದೇಶದಿಂದ ಈ ಕಾರ್ಯ ಕೈಗೊಂಡಿದ್ದಾಗಿ ರೈತರು ಹರ್ಷ ವ್ಯಕ್ತಪಡಿಸಿದ್ದು, ಗ್ರಾಮದ ಅನೇಕ ಮುತ್ತೈದೆಯರ ಗೌರಿಯ ಸೀಮಂತಕ್ಕೆ ಸಾಕ್ಷಿಯಾಗಿದ್ದಾರೆ.

The post ಗರ್ಭಿಣಿ ಹಸುವಿಗೆ ರೇಷ್ಮೆ ಸೀರೆ ತೊಡಿಸಿ ಸೀಮಂತ ಮಾಡಿದ ರೈತ ಕುಟುಂಬ appeared first on News First Kannada.

Source: newsfirstlive.com

Source link