ಗರ್ಲ್​ಫ್ರೆಂಡ್ ಸಬಾ ಜತೆ ವಾಸಿಸಲು 100 ಕೋಟಿ ಖರ್ಚು ಮಾಡಿದ ಹೃತಿಕ್ ರೋಷನ್ – Hrithik roshan and Saba azad to Move 100 crore Apartment


ಒಟ್ಟಾಗಿ ಇರಬೇಕು ಎಂಬುದು ಸಬಾ ಹಾಗೂ ಹೃತಿಕ್ ಆಲೋಚನೆ ಆಗಿತ್ತು. ಈಗ ಅದು ಸಾಧ್ಯವಾಗುತ್ತಿದೆ. 16 ಹಾಗೂ 17ನೇ ಫ್ಲೋರ್​ನ ಮನೆಯನ್ನು ರಿನೋವೇಟ್ ಮಾಡಲಾಗಿದೆ.

ಗರ್ಲ್​ಫ್ರೆಂಡ್ ಸಬಾ ಜತೆ ವಾಸಿಸಲು 100 ಕೋಟಿ ಖರ್ಚು ಮಾಡಿದ ಹೃತಿಕ್ ರೋಷನ್

ಸಬಾ-ಹೃತಿಕ್

ಹೃತಿಕ್ ರೋಷನ್ (Hrithik Roshan) ಹಾಗೂ ನಟಿ ಸಬಾ ಆಜಾದ್ ಡೇಟಿಂಗ್ ಮಾಡುತ್ತಿದ್ದಾರೆ. ಇವರು ಮುಂಬೈನಲ್ಲಿ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಿದೆ. ಮೊದಲ ಬಾರಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಾಗ ಎಲ್ಲರಿಗೂ ಅಚ್ಚರಿ ಆಗಿತ್ತು. ಈಗ ಇವರು ಒಟ್ಟಾಗಿ ಕಾಣಿಸಿಕೊಳ್ಳೋದು ಕಾಮನ್ ಆಗಿದೆ. ಸಬಾ ಜತೆ ಇರಲು ಹೃತಿಕ್ ಅವರು ಹೊಸ ಅಪಾರ್ಟ್​ಮೆಂಟ್ ಖರೀದಿಸಿದ್ದು, ಇದಕ್ಕಾಗಿ ಅವರು 100 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

ಮುಂಬೈನ ಜುಹು-ವರ್ಸೋವಾ ಲಿಂಕ್ ರೋಡ್​ನಲ್ಲಿ ಮನ್ನತ್ ಹೆಸರಿನ ಅಪಾರ್ಟ್​ಮೆಂಟ್ ಇದೆ. ಈ ಅಪಾರ್ಟ್​ಮೆಂಟ್​​ನ 2 ಫ್ಲೋರ್​ ಹಾಗೂ ಅಲ್ಲೇ ಪಕ್ಕದಲ್ಲಿರುವ ಮತ್ತೊಂದು ಅಪಾರ್ಟ್​​ಮೆಂಟ್​​ನ ಒಂದು ಫ್ಲೋರ್​ ಅನ್ನು ಹೃತಿಕ್ ಬರೋಬ್ಬರಿ 97.50 ಕೋಟಿ ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಇದರ ರಿನೋವೇಷನ್​ಗೆ ಹೆಚ್ಚುವರಿಯಾಗಿ 3 ಕೋಟಿ ರೂಪಾಯಿ ಖರ್ಚಾಗಿದೆ. ಒಟ್ಟಾರೆ ಅವರು 100 ಕೋಟಿ ರೂಪಾಯಿ ಅನ್ನು ಖಾಲಿ ಮಾಡಿದ್ದಾರೆ ಎಂದು ವರದಿ ಆಗಿದೆ.

ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಮುಂಬೈ ಸಮುದ್ರ ತೀರದಲ್ಲಿ ಮನೆ ಹೊಂದಿದ್ದಾರೆ. ಅದೇ ರೀತಿ ಹೃತಿಕ್ ಕೂಡ ಸಮುದ್ರದ ವೀವ್ ಇರುವ ಮನೆ ಖರೀದಿ ಮಾಡಿದ್ದಾರೆ. 15 ಹಾಗೂ 16ನೇ ಅಂತಸ್ತಿನಲ್ಲಿರುವ ಮನೆಗೆ 67.50 ಕೋಟಿ ರೂಪಾಯಿ ಹಾಗೂ ಮತ್ತೊಂದು ಅಪಾರ್ಟ್​​ಮೆಂಟ್ ಫ್ಲಾಟ್​ಗೆ 30 ಕೋಟಿ ರೂಪಾಯಿಗೆ ಖರ್ಚಾಗಿದೆ.

ಒಟ್ಟಾಗಿ ಇರಬೇಕು ಎಂಬುದು ಸಬಾ ಹಾಗೂ ಹೃತಿಕ್ ಆಲೋಚನೆ ಆಗಿತ್ತು. ಈಗ ಅದು ಸಾಧ್ಯವಾಗುತ್ತಿದೆ. 16 ಹಾಗೂ 17ನೇ ಫ್ಲೋರ್​ನ ಮನೆಯನ್ನು ರಿನೋವೇಟ್ ಮಾಡಲಾಗಿದೆ. ಈ ಜೋಡಿ ಶೀಘ್ರದಲ್ಲೇ ಇಲ್ಲಿಗೆ ಸ್ಥಳಾಂತರಗೊಳ್ಳಲಿದೆ ಎನ್ನಲಾಗಿದೆ.

ಸುಸ್ಸಾನೆ ಖಾನ್ ಹಾಗೂ ಹೃತಿಕ್ ಮದುವೆ ಆದರು. ಆದರೆ, ಕಾರಣಾಂತರಗಳಿಂದ ಇಬ್ಬರೂ ಬೇರೆ ಆಗಿದ್ದಾರೆ. ಆದರೆ ಸುಸ್ಸಾನೆ ಜತೆ ಹೃತಿಕ್ ಒಳ್ಳೆಯ ಗೆಳೆತನ ಇಟ್ಟುಕೊಂಡಿದ್ದಾರೆ. ಇಬ್ಬರೂ ಬೇರೆ ಆಗಿ ಹಲವು ವರ್ಷಗಳ ಬಳಿಕ ಹೃತಿಕ್​ಗೆ ಸಬಾ ಸಿಕ್ಕಿದ್ದಾರೆ. ಇತ್ತೀಚೆಗೆ ಇವರು ದೀಪಾವಳಿಯನ್ನು ಒಟ್ಟಾಗಿ ಆಚರಿಸಿದ್ದರು.

TV9 Kannada


Leave a Reply

Your email address will not be published. Required fields are marked *