ಪಾಟ್ನಾ: ತನ್ನ ಗೆಳತಿಗೆ ಮದುವೆ ನಿಗದಿಯಾಗಿರುವುದನ್ನು ತಡೆಯಲು ಬಿಹಾರದಲ್ಲಿ ಕೊರೊನಾ ಮುನ್ನೆಚ್ಚರಿಕೆಯಾಗಿ ಮದುವೆ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸುವಂತೆ ಯುವಕನೋರ್ವ ಸಾಮಾಜಿಕ ಜಾಲತಾಣದ ಮೂಲಕ ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಮನವಿ ಮಾಡಿಕೊಂಡು ಸುದ್ದಿಯಾಗಿದ್ದಾನೆ.

ಬಿಹಾರದ ಮುಖ್ಯಮಂತ್ರಿ ನಿತೇಶ್ ಕುಮಾರ್ ಅವರು, ಕೆಲದಿನಗಳ ಹಿಂದೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದಾಗಿ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ. ಮುಂದಿನ 10 ದಿನ ಅಂದರೆ ಮೇ 16 ರಿಂದ ಮೇ 25ರ ವರೆಗೆ ರಾಜ್ಯದಲ್ಲಿ ಲಾಕ್‍ಡೌನ್ ಇರಲಿದೆ ಎಂದು ಟ್ವಿಟ್ಟರ್ ಮೂಲಕ ತಿಳಿಸಿದ್ದರು. ಈ ಟ್ವೀಟ್‍ಗೆ ಮರು ಟ್ವೀಟ್ ಮಾಡಿರುವ ಪಂಕಜ್ ಕುಮಾರ್ ಗುಪ್ತ ಎಂಬಾತ, ಸರ್ ರಾಜ್ಯದಲ್ಲಿ ಮದುವೆ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿ. ಆಗ ಮೇ 19ಕ್ಕೆ ನಿಗದಿಯಾಗಿರುವ ನನ್ನ ಗೆಳತಿಯ ಮದುವೆ ಕೂಡ ರದ್ದಾಗುತ್ತದೆ. ಹೀಗೆನಾದರು ಮಾಡಿದರೆ ನಾನು ಯಾವತ್ತು ನಿಮಗೆ ಆಭಾರಿಯಾಗಿರುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾನೆ.

ಪಂಕಜ್ ಕುಮಾರ್ ಗುಪ್ತ ಈ ರೀತಿಯಾಗಿ ಮುಖ್ಯಮಂತ್ರಿಗಳೊಂದಿಗೆ ಮನವಿ ಮಾಡಿಕೊಂಡಿರುವ ಟ್ವೀಟ್ ಕ್ಷಣ ಮಾತ್ರದಲ್ಲಿ ವೈರಲ್ ಆಗ ತೊಡಗಿದೆ. ಬಳಿಕ ನೆಟ್ಟಿಗರು ಹಲವು ರೀತಿಯ ಕಮೆಂಟ್‍ಗಳನ್ನು ಮಾಡುವ ಮೂಲಕ ಈ ಟ್ವೀಟ್‍ನ್ನು ವೈರಲ್ ಮಾಡಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2.59 ಲಕ್ಷ ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 4,200ಕ್ಕೂ ಅಧಿಕ ಸಾವು ಸಂಭವಿಸಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

The post ಗರ್ಲ್ ಫ್ರೆಂಡ್ ಮ್ಯಾರೇಜ್ ತಡೆಯಲು ಪ್ಲಾನ್- ಮದ್ವೆಗಳಿಗೆ ನಿರ್ಬಂಧ ವಿಧಿಸುವಂತೆ ಸಿಎಂಗೆ ಯುವಕ ಮನವಿ appeared first on Public TV.

Source: publictv.in

Source link