ಸೇಂಟ್‌ ಪೀಟರ್ಸ್‌ಬರ್ಗ್‌ (ರಶ್ಯ): ಒಲಿಂಪಿಕ್ಸ್‌ ಅರ್ಹತೆ ಪಡೆದಿರುವ ಅಮಿತ್‌ ಪಂಘಾಲ್‌ ಇಲ್ಲಿ ನಡೆಯುತ್ತಿರುವ “ಗವರ್ನರ್ ಕಪ್‌ ಬಾಕ್ಸಿಂಗ್‌ ಟೂರ್ನಿ’ಯಲ್ಲಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದ್ದಾರೆ. 52 ಕೆ.ಜಿ. ವಿಭಾಗದ ಸೆಮಿಫೈನಲ್‌ ಪಂದ್ಯದಲ್ಲಿ ಅವರು ಉಜ್ಬೆಕಿಸ್ಥಾನದ ವಿಶ್ವ ಚಾಂಪಿಯನ್‌ ಹಾಗೂ ಒಲಿಂಪಿಕ್‌ ಚಾಂಪಿಯನ್‌ ಖ್ಯಾತಿಯ ಶಖೋಬಿದಿನ್‌ ಜೊರೋವ್‌ ವಿರುದ್ಧ 5-0 ಅಂತರದಿಂದ ಪರಾಭವಗೊಂಡರು.

ಅಮಿತ್‌ ಪಂಘಾಲ್‌ ಈ ಕೂಟದ ಪದಕ ಸ್ಪರ್ಧೆಯಲ್ಲಿ ಉಳಿದಿದ್ದ ಏಕೈಕ ಭಾರತೀಯ ಬಾಕ್ಸರ್‌. ಆಶಿಷ್‌ ಕುಮಾರ್‌ (75 ಕೆ.ಜಿ.), ಸುಮಿತ್‌ ಸಂಗ್ವಾನ್‌ (81 ಕೆ.ಜಿ.) ಬೇಗನೇ ಪರಾಭವಗೊಂಡಿದ್ದರು.

ಇದನ್ನೂ ಓದಿ :ಲಸಿಕೆ ಸ್ವೀಕಾರಕ್ಕೆ ನೋಂದಣಿ ಕಡ್ಡಾಯ : ಮೇ 1ರಿಂದ ಮೂರನೇ ಹಂತದ ಲಸಿಕೆ ವಿತರಣೆ

ಇದು ಶಖೋಬಿದಿನ್‌ ವಿರುದ್ಧ ಅಮಿತ್‌ ಪಂಘಾಲ್‌ಗೆ ಎದುರಾದ ಎರಡನೇ ಆಘಾತ. 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಇವರೆದುರು ಪಂಘಾಲ್‌ ಪರಾಭವಗೊಂಡಿದ್ದರು. ಇವರಿಬ್ಬರೂ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಎದುರಾಗುವ ಎಲ್ಲ ಸಾಧ್ಯತೆ ಇದೆ

ಕ್ರೀಡೆ – Udayavani – ಉದಯವಾಣಿ
Read More