ಸುನಿಲ್​ ಗವಾಸ್ಕರ್​​..! ವಿಶ್ವ ಕ್ರಿಕೆಟ್​ ಕಂಡ ದಿ ಗ್ರೇಟೆಸ್ಟ್​ ಬ್ಯಾಟ್ಸ್​ಮನ್​. ಅದೆಷ್ಟೋ ಜನರ ಆಲ್​ಟೈಮ್​ ಫೇವರಿಟ್​ ತಂಡದಲ್ಲಿ ಗವಾಸ್ಕರ್​ಗೆ, ಓಪನರ್​​ ಸ್ಥಾನ ನೀಡಿದ್ದಾರೆ. ನಿಜ..! ನಾಯಕನಾಗಿ, ಆರಂಭಿಕನಾಗಿ ಲಿಟಲ್​ ಮಾಸ್ಟರ್​​ ಸಾಧನೆ ಅಂತದ್ದು.!! ಟೆಸ್ಟ್​ ಕ್ರಿಕೆಟ್​ನಲ್ಲಿ 10 ಸಹಸ್ರ ರನ್​ ಸಿಡಿಸಿದ ಮೊದಲ ಬ್ಯಾಟ್ಸ್​​ಮನ್ ಎಂಬ ಹೆಗ್ಗಳಿಕೆ, ಸತತ 106 ಟೆಸ್ಟ್​ ಪಂದ್ಯಗಳನ್ನಾಡಿದ ಸಾಧನೆ, ಅಷ್ಟೇ ಯಾಕೆ..? ನಾಯಕನಾಗಿ ಟೀಮ್ ಇಂಡಿಯಾವನ್ನ ವಿದೇಶಿ ನೆಲದಲ್ಲಿ ಸಮರ್ಥವಾಗಿ ಮುನ್ನೆಡೆಸಿದ್ದು ಕೂಡ, ಸುನಿಲ್​ ಗವಾಸ್ಕರ್​..!

1971ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಗವಾಸ್ಕರ್,​ 1987ರಲ್ಲಿ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ರು..! ಸುದೀರ್ಘ ಕರಿಯರ್​​ನಲ್ಲಿ 125 ಟೆಸ್ಟ್​ ಪಂದ್ಯಗಳನ್ನಾಡಿದ್ದ ಲಿಟಲ್​ ಮಾಸ್ಟರ್​​, 51.12 ಸರಾಸರಿಯಲ್ಲಿ ರನ್​ ಕೊಳ್ಳೆಹೊಡೆದಿದ್ರು. ಏಕದಿನ ಮಾದರಿಯಲ್ಲೂ ಡಿಸೇಂಟ್​​ ಪರ್ಫಾಮೆನ್ಸ್​ ನೀಡಿದ್ರು.

ಆಟಗಾರನಾಗಿ, ನಾಯಕನಾಗಿ ಮುಂಬೈಕರ್​​​ ಸಕ್ಸಸ್​
ಆದ್ರೂ, ಕೋಚ್​ ರೇಸ್​ನಲ್ಲಿ ಯಾಕಿಲ್ಲ ಲಿಟಲ್​ ಮಾಸ್ಟರ್..?

ಆಟಗಾರನಾಗಿ ಹಲವು ದಾಖಲೆಗಳನ್ನ ತನ್ನ ಹೆಸರಿಗೆ ಬರೆದುಕೊಂಡ ಗವಾಸ್ಕರ್,​​​ ನಿವೃತ್ತಿ ಬಳಿಕ ಹಿಡಿದಿದ್ದು ಒಬ್ಬ ಕ್ರಿಕೆಟ್​​ ವಿಶ್ಲೇಷಕನಾಗುವ ದಾರಿಯನ್ನ..! ಮುಂಬೈಕರ್​ ಸಮಕಾಲೀನವರೇ ಆದ ಬಿಷನ್ ಸಿಂಗ್‌ ಬೇಡಿ, ಅಜಿತ್ ವಾಡೇಕರ್‌, ಸಂದೀಪ್ ಪಾಟಿಲ್, ಮದನ್ ಲಾಲ್, ಅನ್ಷುಮನ್ ಗಾಯಕ್ವಾಡ್‌, ಕಪಿಲ್ ದೇವ್ ಮೊದಲಾದವರು, ಭಾರತ ತಂಡದ ಕೋಚ್​​ ಆಗೋ ಪ್ರಯತ್ನ ನಡೆಸಿದ್ರು. ದಿಗ್ಗಜರು ಮಾತ್ರವಲ್ಲ..! ಇತ್ತೀಚಿನ ದಿನಗಳಲ್ಲಿ ಅತ್ಯಲ್ಪ ಪಂದ್ಯಗಳನ್ನಾಡಿದ ಹಲವರು ಕೂಡ, ಕೋಚ್​ ರೇಸ್​​ನಲ್ಲಿ ಕಾಣಿಸಿಕೊಂಡಿದ್ದನ್ನ ನೋಡಿದ್ದೇವೆ. ಆದ್ರೆ ಗವಾಸ್ಕರ್‌ ಮಾತ್ರ ಎಂದಿಗೂ ಕೂಡ, ಈ ಜವಾಬ್ದಾರಿ ಹೊರಲು ಮುಂದೆ ಬರಲಿಲ್ಲ.

ಕೋಚ್​​ ಹುದ್ದೆಯ ಬಗ್ಗೆ ಮನಬಿಚ್ಚಿ ಮಾತನಾಡಿದ ಸನ್ನಿ​​​​
ನಾ ಆ ಬಗ್ಗೆ ಎಂದೂ ಯೋಚಿಸಿಲ್ಲ ಎಂದ ಲೆಜೆಂಡ್

ಟೀಮ್​ ಇಂಡಿಯಾ ಪರ ಇಷ್ಟೇಲ್ಲಾ ಪಂದ್ಯಗಳನ್ನಾಡಿ, ವಿಶ್ವ ಕ್ರಿಕೆಟ್​ನ ಲೆಜೆಂಡ್​ ಎಂದೆನಿಸಿಕೊಂಡರೂ ಗವಾಸ್ಕರ್​,​ ಯಾಕೆ ಕೋಚ್​ ಆಗಲಿಲ್ಲ…? ಕೋಚ್​ ಆಗಿದ್ರೆ, ಭಾರತೀಯ ಕ್ರಿಕೆಟ್​ ಮತ್ತಷ್ಟು ಉತ್ತುಂಗಕ್ಕೆ ಏರುತ್ತಿತ್ತಲ್ಲವೇ..? ಅನ್ನೋದು ಹಲವರ ಕುತೂಹಲಭರಿತ ಪ್ರಶ್ನೆಯಾಗಿತ್ತು. ಈ ಇಂಟರೆಸ್ಟಿಂಗ್​ ಪ್ರಶ್ನೆಗೆ ಗವಾಸ್ಕರ್,​​ ಡೈರೆಕ್​ ಹಿಟ್​ ಆನ್ಸರ್​ ಮಾಡಿದ್ದಾರೆ.

ನಾನು ಆಡುತ್ತಿದ್ದ ದಿನಗಳಲ್ಲಿ ಔಟಾದ ಬಳಿಕ, ಮಧ್ಯ ಮಧ್ಯದಲ್ಲಿ ಮಾತ್ರ ಪಂದ್ಯವನ್ನು ವೀಕ್ಷಿಸುತ್ತಿದ್ದೆ. ಉಳಿದ ಸಮಯದಲ್ಲಿ, ಡ್ರೆಸಿಂಗ್‌ ರೂಮ್‌ಗೆ ತೆರಳಿ ಪುಸ್ತಕಗಳನ್ನ ಓದುತ್ತಿದ್ದೆ ಅಥವಾ ಬಂದಿರುವ ಪತ್ರಗಳಿಗೆ ಉತ್ತರ ಬರೆಯುತ್ತಿದ್ದೆ. ನಂತರ ಬಂದು ಮತ್ತೆ ಆಟವನ್ನು ವೀಕ್ಷಿಸುತ್ತಿದ್ದೆ. ಆದ್ರೆ ಜಿ.ಆರ್‌ ವಿಶ್ವನಾಥ್‌ರಂತೆ ಪ್ರತಿ ಎಸೆತಗಳನ್ನೂ ವೀಕ್ಷಿಸುತ್ತಿದ್ದ ವ್ಯಕ್ತಿ ನಾನಲ್ಲ.! ಜಿಆರ್‌ವಿ ಮತ್ತು ನಮ್ಮ ಅಂಕಲ್​ ಮಾಧವ್ ಮಂತ್ರಿ ಇಬ್ಬರೂ, ಪ್ರತಿ ಬಾಲ್​ವೀಕ್ಷಿಸುತ್ತಿದ್ದರು. ನಾನು ಕೋಚ್‌ ಅಥವಾ ಸೆಲೆಕ್ಟರ್‌ ಆಗಬೇಕಾದರೆ, ಪ್ರತಿ ಚೆಂಡನ್ನೂ ವೀಕ್ಷಿಸಬೇಕಾಗುತ್ತದೆ. ಇದು ನನ್ನಿಂದ ಸಾಧ್ಯವಿಲ್ಲವಾದ ಕಾರಣ, ಕೋಚಿಂಗ್‌ ಬಗ್ಗೆ ಎಂದಿಗೂ ಆಲೋಚಿಸಿಲ್ಲ
-ಸುನಿಲ್​ ಗವಾಸ್ಕರ್​, ಮಾಜಿ ಕ್ರಿಕೆಟಿಗ

ಯೆಸ್​​..! ಗವಾಸ್ಕರ್​​ ಉತ್ತರ ನೇರ ಮತ್ತು ಸ್ಪಷ್ಟ…! ಕ್ರಿಕೆಟ್​ನ ಪ್ರತಿ ಎಸೆತದಲ್ಲೂ ಹೊಸ ಕಲಿಕೆ ಇದ್ದೇ ಇರುತ್ತೆ ಅನ್ನೋದನ್ನ, ಸ್ಪಷ್ಟವಾಗಿಯೇ ಗವಾಸ್ಕರ್​ ಅರಿತಿದ್ದಾರೆ. ಒಬ್ಬ ಯಶಸ್ಸಿ ಆಟಗಾರನಾಗಿ, ತಂಡದ ನಾಯಕನಾಗಿದ್ದ ಗವಾಸ್ಕರ್​​ ಅನುಭವಕ್ಕೆ, ಇದು ಬರದೇ ಇರದು. ಜೊತೆಗೆ ಕೋಚ್​ ಹುದ್ದೆ.. ಅದರಲ್ಲೂ ಟೀಮ್​ ಇಂಡಿಯಾದ ಕೋಚ್​​ ಹುದ್ದೆ ಬೇಡುವ ಜವಾಬ್ಧಾರಿಯ ಕುರಿತು ಸನ್ನಿ, ಸ್ಪಷ್ಟವಾಗಿಯೇ ತಿಳಿದುಕೊಂಡಿದ್ದಾರೆ. ಹೀಗಾಗಿಯೇ ಕೋಚ್​​ ಆಗುವ ಬಗ್ಗೆ ಎಂದೂ ಗವಾಸ್ಕರ್​ ಯೋಚನೆ ಮಾಡದೇ ಇರೋದು.

ಕೋಚ್​ ಆಗದಿದ್ರೂ ನೀಡ್ತಿದ್ರು ತಂಡಕ್ಕೆ ಉಪಯುಕ್ತ ಸಲಹೆ

ಸುನಿಲ್​ ಗವಾಸ್ಕರ್​​ ನಿವೃತ್ತಿ ಬಳಿಕ ಕಾಣಿಸಿಕೊಂಡಿದ್ದು, ವಿಶ್ಲೇಷಕನ ಅವತಾರದಲ್ಲಿ..! ಕಾಲಂಮಿಸ್ಟ್​ ಆಗಿ, ಕಾಮೆಂಟೇಟರ್​​ ಆಗಿ ಇಂದಿಗೂ ಸಕ್ರಿಯವಾಗಿರುವ ಮುಂಬೈಕರ್​, ಅಂದು ಕೋಚ್​​ ಆಗದಿದ್ರೂ ತಂಡಕ್ಕೆ ಉಪಯುಕ್ತ ಸಲಹೆ ನೀಡುತ್ತಲೇ ಬಂದಿದ್ರು. ಅದರಲ್ಲೂ ಟೀಮ್​ ಇಂಡಿಯಾದ ಫ್ಯಾಬ್​-ಫೋರ್ ಜೋಡಿಯಾದ ಸಚಿನ್​, ದ್ರಾವಿಡ್​, ಗಂಗೂಲಿ, ಲಕ್ಷ್ಮಣ್​ ಯಶಸ್ಸಿನ ಹಿಂದೆ, ಗವಾಸ್ಕರ್ ಪಾತ್ರವಿದೆ. ಜೊತೆಗೆ 2004ರ ಆಸ್ಟ್ರೇಲಿಯಾ ಪ್ರವಾಸದ ವೇಳೆ, ಟೀಮ್ ಇಂಡಿಯಾ ಕನ್ಸಲ್​ಟಂಟ್​​ ಆಗಿ ಆಟಗಾರರಿಗೆ ಮಾರ್ಗದರ್ಶನ ನೀಡಿದ್ರು.

ಈ ಮೊದಲೇ ನಾನು ಹೇಳಿದ್ದೇನೆ. ನನ್ನ ಬಳಿ ಸಲಹೆ ಕೇಳಿ ಹಲವರು ಬಂದಿದ್ದಾರೆ. ಈಗಿನ ಆಟಗಾರರು ಹೆಚ್ಚಿನವರಲ್ಲ. ಆದರೆ, ಸಚಿನ್‌, ರಾಹುಲ್ ದ್ರಾವಿಡ್‌, ಗಂಗೂಲಿ, ಸೆಹ್ವಾಗ್ ಮತ್ತು ಲಕ್ಷ್ಮಣ್‌ ಸಲಹೆ ಪಡೆದಿದ್ದಾರೆ. ಈ ಆಟಗಾರರ ಜೊತೆಗೆ ಜ್ಞಾನ ಹಂಚಿಕೊಂಡಿರುವುದಕ್ಕೆ ಸಂತಸವಿದೆ. ನಾನು ಗಮನಿಸಿದ್ದ ಸಂಗತಿಗಳನ್ನ ತಿಳಿಸಿದ್ದೇನೆ. ಆದರೆ, ಪೂರ್ಣ ಸಮಯದಲ್ಲಿ ಕೋಚಿಂಗ್‌ ಮಾಡಲು ನನ್ನಿಂದ ಸಾಧ್ಯವಿಲ್ಲ –ಸುನಿಲ್​ ಗವಾಸ್ಕರ್​, ಮಾಜಿ ಕ್ರಿಕೆಟಿಗ

ಅದೇನೆ ಇರಲಿ.. ಕೋಚ್​ ಹುದ್ದೆಗೇರದೇ ಇದ್ರೂ ತಮ್ಮ ಬಳಿ ಸಲಹೆ ಕೇಳಿದ ಆಟಗಾರರಿಗೆ ಸನ್ನಿ, ಅಗತ್ಯ ವಿಚಾರಗಳ ಬಗ್ಗೆ ತಿಳಿಸಿದ್ದಾರೆ ಅನ್ನೋದಂತೂ ಸತ್ಯ. ಇದರ ಜೊತೆಗೆ ಟೀಮ್​ ಇಂಡಿಯಾ ಕಂಡ ಶ್ರೇಷ್ಠ ಬ್ಯಾಟ್ಸ್​ಮನ್​ ತಂಡದ ಕೋಚ್​ ಆಗಿದ್ರೆ, ಗವಾಸ್ಕರ್​ ಅನುಭವದಿಂದ ಭಾರತ ತಂಡ ಇನ್ನಷ್ಟು ಫ್ರಾಭಲ್ಯ ಸಾಧಿಸುತ್ತಿತ್ತು ಅನ್ನೋದನ್ನೂ, ಒಪ್ಪಿಕೊಳ್ಳಲೇಬೇಕು.

The post ಗವಾಸ್ಕರ್ ಭಾರತ ತಂಡದ ಕೋಚ್ ಆಗಲಿಲ್ಲ ಯಾಕೆ..? ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ..! appeared first on News First Kannada.

Source: newsfirstlive.com

Source link