ಕೊಪ್ಪಳದ ಸಹಸ್ರಾರು ಹೃದಯಗಳ ಪೂಜ್ಯನಿಯ ಗವಿಸಿದ್ದೇಶ್ವರ ಸ್ವಾಮಿಗಳು ವಿಭಿನ್ನತೆಗೆ ಹೆಸರಾದವರು. ಮಠದ ಅರ್ಥವನ್ನೇ ಬದಲಾಯಿಸಿ ಸೂಕ್ತ ಅರ್ಥವನ್ನು ಕಲ್ಪಿಸಿದವರು, ಸಮಾಜಮುಖಿ, ಮೂಢನಂಬಿಕೆ ಹೋಗಲಾಡಿಸುವ ಕಾಯಕದಲ್ಲಿ ತೊಡಗಿರುವ ಸ್ವಾಮಿಗಳು.. ಕೋವಿಡ್ ಎರಡನೇ ಅಲೆಯ ಗಂಭೀರ ಸಂದರ್ಭದಲ್ಲಿ ಮಠದ ಆವರಣದಲ್ಲಿರುವ ವೃದ್ಧಾಶ್ರಮ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಕೋವಿಡ್ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಸೆಂಟರ್​​ಗಾಗಿ ಜಿಲ್ಲಾಡಳಿತಕ್ಕೆ ಬಿಟ್ಟುಕೊಟ್ಟಿದ್ದಾರೆ.

ಮಠದ ವತಿಯಿಂದ ಊಟದ ವ್ಯವಸ್ಥೆ ಉಚಿತ
ಅಷ್ಟೇ ಅಲ್ಲದೇ ಸೋಂಕಿತರಿಗೆ ಹಾಸಿಗೆ ಹಾಗೂ ಊಟದ ಸಂಪೂರ್ಣ ವ್ಯವಸ್ಥೆಯನ್ನು ಉಚಿತವಾಗಿ ಮಠದಿಂದ ಪೂರೈಸುತ್ತಿದ್ದಾರೆ. ಮಾತ್ರವಲ್ಲದೇ ದಾನಿಗಳನ್ನು ಹುಡುಕಿ ಅವರಿಂದ ವೆಂಟಿಲೇಟರ್, ಆಕ್ಸಿಜನ್ ಸಿಲಿಂಡರ್, ಕಾನ್ಸಾಟ್ರೇಟರ್ ಗಳನ್ನು ಸೋಂಕಿತರಿಗಾಗಿ ದಾನ ಮಾಡಿಸುತ್ತಿದ್ದಾರೆ. ಇನ್ನ ಸ್ವಯಂಪ್ರೇರಿತರಾಗಿ ಎಷ್ಟೋ ಜನರು ಕೋವಿಡ್ ಆಸ್ಪತ್ರೆಯ ಸೇವೆಗಾಗಿ ಧಾವಿಸುತ್ತಿದ್ದಾರೆ.

300 ಹಾಸಿಗೆಗಳ ಆರೈಕೆ ಕೇಂದ್ರ
ಮಠದ ವತಿಯಿಂದ ಬಡವರಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲದೆ ಮಠದ ಬಿಎಎಂಎಸ್ ವೈದ್ಯರ ತಂಡ ಹಾಗೂ ವಿದ್ಯಾರ್ಥಿಗಳ ಸೇವೆಯೂ ಉಚಿತವಾಗಿ ನಡೆಯುತ್ತಿದೆ. ಪದವಿ ಕಾಲೇಜಿನ ಪ್ರಾಧ್ಯಾಪಕರು ಉಪನ್ಯಾಸಕರು ಕೋವಿಡ್ ಆಸ್ಪತ್ರೆಯ ಸೇವೆಯಲ್ಲಿ ತೊಡಗಿದ್ದಾರೆ. ಕೋವಿಡ್ ಆಸ್ಪತ್ರೆಯಲ್ಲಿ 100 ಹಾಸಿಗೆ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯದ ಕೋವಿಡ್ ಕೇಂದ್ರದಲ್ಲಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.

ಸೋಂಕಿತರಿಗೆ ನಿತ್ಯ ವಿವಿಧ ಚಟುವಟಿಕೆ
ನಿತ್ಯ ಸೋಂಕಿತರಿಗೆ ಮಾನಸಿಕವಾಗಿ ಸದೃಢವಾಗಿರಲು, ಯೋಗ ಮಾಡಿಸಲಾಗುತ್ತದೆ. ವಾಲಿಬಾಲ್, ಕ್ರಿಕೆಟ್, ಕೆರಮ್, ಚೆಸ್ ಇನ್ನಿತರ ಆಟಗಳನ್ನು ಆಡಿಸಲಾಗುತ್ತಿದೆ. ಕಷಾಯ, ರಾಗಿ ಗಂಜಿಯನ್ನು ನೀಡಲಾಗುತ್ತಿದ್ದು, ನಿತ್ಯ ಆನ್​ಲೈನ್ ಸಂಭಾಷಣೆ ಮಾಡುವ ಮೂಲಕ‌ ಸೋಂಕಿತರ ಮಾನಸಿಕ ಸ್ಥೈರ್ಯ ವನ್ನು ಹೆಚ್ಚಿಸಲಾಗುತ್ತಿದೆ.

ವೈದ್ಯರಿಂದ 24 ಗಂಟೆಗಳ ಸೇವೆ
ಸೋಂಕಿರ ಮನೆಯವರೊಂದಿಗೆ ಸಮಾಲೋಚನೆ ಮಾಡಿಸಲಾಗುತ್ತಿದೆ. ಸೋಂಕಿತರು ಗುಣಮುಖರಾಗಿ ಸಂತೋಷದಿಂದ ಹೋಗುತ್ತಿದ್ದಾರೆ. ಇನ್ನು ವೈದ್ಯರು ಮನೆಗೆ ತೆರಳದೆ ಶ್ರೀಗಳ ಕಾಯಕವನ್ನು ಮೆಚ್ಚಿ 24 ಗಂಟೆಗಳ ನಿರಂತರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

The post ಗವಿಸಿದ್ದೇಶ್ವರ ಸ್ವಾಮೀಜಿಯಿಂದ ಅಸಾಧಾರಣ ಸಹಕಾರ.. ವೃದ್ಧಾಶ್ರಮ, ಹಾಸ್ಟೆಲ್​ ಈಗ ಕೋವಿಡ್ ಆರೈಕೆಯ ಕೇಂದ್ರ appeared first on News First Kannada.

Source: newsfirstlive.com

Source link