ಗಾಂಧಿನಗರದಲ್ಲಿ ಮತ್ತೆ ಸಿನಿಮಾಗಳ ಹಬ್ಬ -150 ಚಿತ್ರಮಂದಿರಗಳಲ್ಲಿ ‘ನಿನ್ನ ಸನಿಹಕೆ’ ಅದ್ದೂರಿ ರಿಲೀಸ್

ಬೆಂಗಳೂರು: ಕೊರೊನಾ ಎರಡನೇ ಬಳಿಕ ಮೊದಲ ಬಾರಿಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಸೀಟು ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದು, ಇಂದಿನಿಂದ ಗಾಂಧಿನಗರದಲ್ಲಿ ಮತ್ತೆ ಸಿನಿಮಾಗಳ ಹಬ್ಬ ಆರಂಭವಾಗಿದೆ.

ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯ ಅಂಶಗಳು ಅಕ್ಟೋಬರ್​ 2ರಿಂದಲೇ ಜಾರಿ ಆದರೂ ಕೂಡ ಬಿಗ್​ ಸಿನಿಮಾಗಳು ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಈ ನಡುವೆ ಇಂದು ವರನಟ ರಾಜ್​​ಕುಮಾರ್​​ ಮೊಮ್ಮಗಳು ಅಭಿನಯಿಸಿರುವ ಸೂರಜ್​ ಗೌಡ ಧನ್ಯರಾಮ್​ ಅಭಿನಯದ ‘ನಿನ್ನ ಸನಿಹಕೆ’ ಸಿನಿಮಾ ಇಂದು ಅದ್ದೂರಿಯಾಗಿ ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ದಸರಾ ಹಬ್ಬ ವಿಶೇಷವಾಗಿ ಥಿಯೇಟರ್​​ಗೆ ಕಾಲಿಡಲು ಸಾಲು ಸಾಲು ಸಿನಿಮಾಗಳು ಸ್ಯಾಂಡಲ್​ವುಡ್​​ನಲ್ಲಿ ಸಿದ್ಧವಾಗಿದೆ.

‘ನಿನ್ನ ಸನಿಹಕೆ’ ಎಂದ ದೊಡ್ಮನೆ ಮಂದಿ
ಚಂದನವನದ ದೊಡ್ಮನೆಯನ್ನ ಒಟ್ಟಿಗೆ ನೋಡೋದೇ ಚೆಂದ.. ವರನಟ ಡಾ.ರಾಜ್ ಕುಮಾರ್ ಅವರ ಮೊಮ್ಮಗಳು, ಧನ್ಯಾ ರಾಮ್ ಕುಮಾರ್ ಅಭಿನಯದ ಮೊದಲ ಸಿನಿಮಾ ನಿನ್ನ ಸನಿಹಕೆ ಇಂದು ರಿಲೀಸ್ ಆಗ್ತಿದೆ. ಈ ಸಿನಿಮಾದಲ್ಲಿ ನಟ ಸೂರಜ್ ಗೌಡ ಲೀಡ್ ರೋಲ್​ನಲ್ಲಿ ಆ್ಯಕ್ಟ್ ಮಾಡುವುದರ ಜೊತೆಗೆ ಆ್ಯಕ್ಷನ್ ಕಟ್ ಕೂಡ ಹೇಳಿದ್ದಾರೆ. ಇನ್ನು, ನಿನ್ನೆ ಸ್ಯಾಂಡಲ್​ವುಡ್​ ಗಣ್ಯರಿಗೆ ಸಿನಿಮಾದ ಪ್ರೀಮಿಯರ್‌ ಶೋ ಆಯೋಜಿಸಲಾಗಿತ್ತು. ಒಂದೇ ವೇದಿಕೆಯಲ್ಲಿ ದೊಡ್ಮನೆಯ ಅಷ್ಟು ಕಲಾವಿದರು ಕಾಣಿಸಿಕೊಂಡಿದ್ದು ಪ್ರೀಮಿಯರ್​ ಶೋನ ಇನ್ನೊಂದು ಹೈಲೈಟ್ ಆಗಿತ್ತು.

News First Live Kannada

Leave a comment

Your email address will not be published. Required fields are marked *