ಗಾನ ಕೋಗಿಲೆ ಲತಾ ಮಂಗೇಶ್ಕರ್​ಗೆ ಕ್ರಿಕೆಟಿಗರ ಕಣ್ಣೀರ ಬೀಳ್ಕೊಡುಗೆ


ಭಾರತದ ಗಾನ ಕೋಗಿಲೆ ಲತಾ ಮಂಗೇಶ್ಕರ್​ ಅವರು ಇಂದು ಮುಂಬೈನ ಬ್ರಿಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕೊರೊನಾದೊಂದಿಗೆ ನ್ಯೂಮೋನಿಯದಿಂದ ಬಳಲುತ್ತಿದ್ದ ಲತಾ ಮಂಗೇಶ್ಕರ್​ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಇಡೀ ದೇಶವೇ ಇವರನ್ನು ಪ್ರೀತಿಯಿಂದ ಲತಾ ದೀದಿ ಅಂತ ಕರೆದು ಗೌರವಿಸುತ್ತದೆ. ಅವರ ನಿಧನಕ್ಕೆ ಅನೇಕ ಗಣ್ಯರು ಟ್ವೀಟ್ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.

ಲತಾ ಮಂಗೇಶ್ಕರ್​ ಅಗಲಿಕೆಗೆ ಭಾರತೀಯ ಮಾಜಿ ಕ್ರಿಕೆಟ್​ ಆಟಗಾರ ವೀರೆಂದ್ರ ಸೆಹ್ವಾಗ್​ ಹಾಗು ವಿರಾಟ್​ ಕೊಹ್ಲಿ ಸಂತಾಪ ಸೂಚಿಸಿದ್ದಾರೆ. ಭಾರತದ ಕೋಗಿಲೆ, ಇಡೀ ವಿಶ್ವ ಪ್ರತಿಧ್ವನಿಸಿದ ಧ್ವನಿ, ಪ್ರಪಂಚದಾದ್ಯಂತ ಲಕ್ಷಾಂತರ ಹೃದಯಗಳಿಗೆ ಸಂತೋಷ ಕೊಟ್ಟಿರುವ ಧ್ವನಿಯನ್ನ ಇಂದು ಕಳೆದುಕೊಂಡಿದ್ದೇವೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು, ಓಂ ಶಾಂತಿ ಎಂದು ಸೆಹ್ವಾಗ್ ಟ್ವೀಟ್​ ಮಾಡಿದ್ದಾರೆ.

ಇನ್ನು ವಿರಾಟ್​ ಕೊಹ್ಲಿ, ಲತಾ ಜೀ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ. ಅವರ ಸುಮಧುರ ಹಾಡುಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಮಧುರವಾಗಿಸಿವೆ. ನೀವು ನೀಡಿದ ಸಂಗೀತ ಮತ್ತು ನೆನಪುಗಳಿಗೆ ನನ್ನ ಧನ್ಯವಾದಗಳು. ಕುಟುಂಬ ಮತ್ತು ಪ್ರೀತಿ ಪಾತ್ರರಿಗೆ ನನ್ನ ಸಂತಾಪಗಳು ಅಂತಾ ಟ್ವೀಟ್​ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಅವರು ಲತಾ ಮಂಗೇಶ್ಕರ್ ಅವರ ಬಗ್ಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ. ಮೇರಿ ಆವಾಜ್ ಹಿ ಪೆಹಚಾನ್ ಹೈ, ಗರ್ ಯಾದ್ ರಹೇ ಹಾಡು ಹಾಡಿರುವ ಧ್ವನಿಯನ್ನು ಮರೆಯಲು ಹೇಗೆ ಸಾಧ್ಯ, ಲತಾ ಮಂಗೇಶ್ಕರ್ ಅವರ ನಿಧನದಿಂದ ತೀವ್ರ ದುಃಖವಾಗಿದೆ ಎಂದು ಸಂತಾಪ ಸೂಚಿಸಿದರು.

ಕಂಗನಾ ರನೌತ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಲತಾ ಮಂಗೇಶ್ಕರ್ ಅವರ ಫೋಟೋವನ್ನು ಪೋಸ್ಟ್​ ಮಾಡಿ “ಜೀವನದಲ್ಲಿ ಅವರನ್ನು ಎಂದಿಗೂ ಭೇಟಿಯಾಗಲಿಲ್ಲ. ಆದರೆ ಇಂದು ಅವರ ನಿಧನದಿಂದ ನನ್ನ ದುಃಖವನ್ನು ತಡೆಹಿಡಿಯಲು ಸಾಧ್ಯವಾಗುತ್ತಿಲ್ಲ. ನಿಜವಾದ ಕಲಾವಿದನ ಸಾರವೆಂದರೆ ಅವರು ತಮ್ಮ ಕೆಲಸದ ಮೂಲಕ ನಮ್ಮ ರಕ್ತಪ್ರವಾಹದ ಭಾಗವಾಗಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published.