ಗಾಯಗೊಂಡು ಬಿದ್ದಿದ್ದ ಜಿರಲೆಯನ್ನ ಆಸ್ಪತ್ರೆಗೆ ಹೊತ್ತೊಯ್ದು ಚಿಕಿತ್ಸೆ ಕೊಡಿಸಿದ ವ್ಯಕ್ತಿ

ಗಾಯಗೊಂಡು ಬಿದ್ದಿದ್ದ ಜಿರಲೆಯನ್ನ ಆಸ್ಪತ್ರೆಗೆ ಹೊತ್ತೊಯ್ದು ಚಿಕಿತ್ಸೆ ಕೊಡಿಸಿದ ವ್ಯಕ್ತಿ

ರಿಯಲ್ಲಿ ರೆಕ್ಕೆಯೊಂದನ್ನ ಮುರಿದುಕೊಂಡು ಬಿದ್ದಿದ್ದ ಜಿರಲೆಯನ್ನ ​ವ್ಯಕ್ತಿಯೊಬ್ಬರು ಪಶು ಆಸ್ಪತ್ರೆಗೆ ಕೊಂಡೊಯ್ದು ಚಿಕಿತ್ಸೆ ನೀಡಿ ಎಂದು ಕೇಳಿದ ಘಟನೆ ಥೈಲ್ಯಾಂಡ್​​​​ನಲ್ಲಿ ನಡೆದಿದೆ.

ಥಾನು ಲಿಂಪಪಟ್ಟ ನವನಿಚ್ ಎಂಬ ವೈದ್ಯರು ಫೇಸ್​ಬುಕ್​ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ಅದ್ರಲ್ಲಿ ವ್ಯಕ್ತಿಯೋರ್ವ ರಸ್ತೆಯಲ್ಲಿ ಕಾಲ್ತುಳಿತಕ್ಕೆ ಸಿಲುಕಿ ರೆಕ್ಕೆ ಮುರಿದುಕೊಂಡು ಬಿದ್ದಿದ್ದ ಜಿರಳೆಯೊಂದನ್ನ ಕಂಡು ಅದನ್ನ ಪಶುವೈದ್ಯಾಲಯದ ಎಮರ್ಜೆನ್ಸಿ ಕೇರ್​ಗೆ ತಂದಿದ್ದರು ಎಂದು ಬರೆದುಕೊಂಡಿದ್ದಾರೆ.

ಇದು ನಗುವ ವಿಚಾರವಲ್ಲ. ಬದಲಿಗೆ ಒಳ್ಳೆಯ ಗುಣ ಹೊಂದಿರುವ ವ್ಯಕ್ತಿಯ ಸಹಾನುಭೂತಿಗೆ ಇದು ಸಾಕ್ಷಿ ಎಂದು ಹೇಳಿದ್ದಾರೆ. ಪಶುವೈದ್ಯ ಆ ಜಿರಲೆಗೆ ಚಿಕಿತ್ಸೆ ನೀಡಿದ ನಂತರ ಆ ವ್ಯಕ್ತಿ ಅಲ್ಲಿಂದ ವಾಪಸ್ಸಾಗಿದ್ದಾರೆ ಎನ್ನಲಾಗಿದೆ.

The post ಗಾಯಗೊಂಡು ಬಿದ್ದಿದ್ದ ಜಿರಲೆಯನ್ನ ಆಸ್ಪತ್ರೆಗೆ ಹೊತ್ತೊಯ್ದು ಚಿಕಿತ್ಸೆ ಕೊಡಿಸಿದ ವ್ಯಕ್ತಿ appeared first on News First Kannada.

Source: newsfirstlive.com

Source link