ಗಾಯತ್ರಿ ಮಂತ್ರ ಪಠಿಸಿದ ಶಿಲ್ಪಾ ಶೆಟ್ಟಿ ಪುತ್ರಿಯ ಮುಗ್ಧತನಕ್ಕೆ ನೆಟ್ಟಿಗರು ಫಿದಾ -ಪೆಟಾಗೆ ನಟಿ ಧನ್ಯವಾದ


ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಕಿರಿಯ ಪುತ್ರಿ ಸಮಿಶಾಳ ಕ್ಯೂಟ್​ ವಿಡಿಯೋವೊಂದನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಆಗಿರುವ ​ಶಿಲ್ಪಾ ಶೆಟ್ಟಿ ಆಗಾಗ ತಮ್ಮ ಇಬ್ಬರು ಮಕ್ಕಳ ವಿಡಿಯೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಳುತ್ತಿರುತ್ತಾರೆ. ಆದರಂತೇ ಈ ಬಾರಿ ತಮ್ಮ ಪುತ್ರಿ ಸಮೀಶಾಳ ವಿಡಿಯೋವನ್ನು ಶಿಲ್ಪಾ ಹಂಚಿಕೊಂಡಿದ್ದು ಸಮಿಶಾಳ ಮುಗ್ಧತನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

ಶಿಲ್ಪಾ ಅವರ ಮನೆಯ ಗಾರ್ಡನ್​ನಲ್ಲಿ ಪಕ್ಷಿಯೊಂದು ಗಾಯಗೊಂಡು ಬಿದ್ದಿತ್ತು. ಅದನ್ನು ನೋಡಿದ ಸಮಿಶಾ ಪಕ್ಷಿ ಬೇಗ ಗುಣಮುಖವಾಗುವಂತೆ ದೇವರ ಬಳಿ ಕೈ ಜೋಡಿಸಿ ಪ್ರಾರ್ಥಿಸಿದ್ದಾಳೆ. ಇದನ್ನು ಗಮನಿಸದ ಶಿಲ್ಪಾ ಶೆಟ್ಟಿ, ಸಮಿಶಾ ಬಳಿ ಆ ಪಕ್ಷಿ ಮತ್ತೆ ಹಾರುವಂತಾಗಲ್ಲಿ ಅಂತ ನೀನು ಪ್ರಾರ್ಥಿಸುತ್ತಿದ್ದೀಯಾ? ಎಂದು ಕೇಳಿದ್ದಾರೆ. ಪಕ್ಷಿಯನ್ನು ನೋಡಿ ಸಮಿಶಾ ಅದು ಸತ್ತು ಹೋಗಿರಬೇಕು ಅಂತ ಭಾವಿಸಿ ‘‘ಬರ್ಡಿ ಡೈ’’ ಎಂದಿದ್ದಾಳೆ. ಆಗ ಶಿಲ್ಪಾ ಇಲ್ಲಾ ಮಗಳೇ ಆ ಪಕ್ಷಿ ಇನ್ನೂ ಸತ್ತಿಲ್ಲ ಅದು ಗುಣಮುಖವಾಗಿ ಮತ್ತೆ ಹಾರುವಂತೆ ನಾವು ಪ್ರಾರ್ಥಿಸೋಣ ಎಂದು ಹೇಳುತ್ತಾರೆ.

ಪಕ್ಷಿ ಗುಣಮುಖವಾಗಲಿ ಅಂತ ಸಮಿಶಾ ಬಳಿ ಗಾಯತ್ರಿ ಮಂತ್ರ ಹೇಳುವಂತೆ ಶಿಲ್ಪಾ ಹೇಳುತ್ತಾರೆ. ನಂತರ ಮಗಳೇ ಓಂ ಸಾಯಿ ರಾಮ್​ ಎಂದು ಹೇಳು ಅಂತಾ ಶಿಲ್ಪಾ,ಸಮೀಶಾಗೆ ಹೇಳುತ್ತಾರೆ. ಆಗ ಸಮಿಶಾ ಸ್ವಲ್ಪ ಹಿಂದೆ ಸರಿದು ಒಂದೆಡೆ ಕುಳಿತುಕೊಂಡು ಕೈ ಮುಗಿದು ಗಾಯತ್ರಿ ಮಂತ್ರ ಹೇಳುತ್ತಾ ಪಕ್ಷಿ ಗುಣಮುಖವಾಗಲಿ ಅಂತ ಪ್ರಾರ್ಥಿಸಿದ್ದಾಳೆ.

ಈ ಮುದ್ದಾದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡ ಶಿಲ್ಪಾ ಶೆಟ್ಟಿ “ಮಕ್ಕಳು ನಿಜವಾಗಿಯೂ ಪರಿಶುದ್ಧ ಮನಸನ್ನು ಹೊಂದಿದ್ದಾರೆ. ಇನ್ನೂ ಎರಡು ವರ್ಷ ಕೂಡ ಪೂರೈಸಿದ ಸಮಿಶಾಳ ಈ ನಡೆಯನ್ನು ನೋಡಿ ನನಗೆ ಬಹಳ ಸಂತೋಷವಾಯಿತ್ತು. ಬೇರೆಯವರಿಗಾಗಿ ಮಿಡಿಯುವ, ಪ್ರಾರ್ಥಿಸುವ ಮಕ್ಕಳ ಗುಣವನ್ನು ಎಲ್ಲರೂ ಅನುಸರಿಸಿದರೆ ಜಗತ್ತು ಎಷ್ಟು ಸುಂದರವಾಗತ್ತದೆ. ಇದನ್ನು ನಾವೆಲ್ಲಾ ಬೆಳೆದ ಮೇಲೂ ನೆನಪಿಟ್ಟುಕೊಳ್ಳಬೇಕು’’. ಗಾಯಗೊಂಡಿದ ಪಕ್ಷಿಯನ್ನು ರಕ್ಷಿಸಿದಕ್ಕಾಗಿ ಪೆಟಾ ಇಂಡಿಯಾಗೆ ಧನ್ಯವಾದಗಳು ಎಂದು ಶಿಲ್ಪಾ ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಸಮಿಶಾಳ ಮುಗ್ಧತನಕ್ಕೆ ನೆಟ್ಟಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

News First Live Kannada


Leave a Reply

Your email address will not be published. Required fields are marked *