ಬೆಂಗಳೂರು: ರಾಜ್ಯ ಸರ್ಕಾರ ಮಾರ್ಚ್​​​ನಲ್ಲಿನ ಬಜೆಟ್​​ನಲ್ಲಿ ಘೋಷಣೆ ಮಾಡಿದ್ದ ಮಹತ್ವಾಕಾಂಕ್ಷಿ “ವನಿತಾ ಸಂಗಾತಿ” ಯೋಜನೆ ನಾಲ್ಕು ತಿಂಗಳಾದರೂ ಇನ್ನೂ ಜಾರಿಗೆ ಬಂದಿಲ್ಲ ಎಂದು ಕರ್ನಾಟಕ ಕಾರ್ಮಿಕ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಪ್ರಸನ್ನ ಗೌಡ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಪ್ರಸನ್ನ ಗೌಡ ಅವರು, ಸರ್ಕಾರದಿಂದ ಇನ್ನೂ “ವನಿತಾ ಸಂಗಾತಿ” ಯೋಜನೆ ಜಾರಿಯಾಗಿಲ್ಲ. ಈ ಯೋಜನೆ ಅಡಿಯಲ್ಲಿ ಗಾರ್ಮೆಂಟ್ಸ್ ಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡಲು ಘೋಷಣೆ ಮಾಡಲಾಗಿತ್ತು. ಈ ಪಾಸ್ ಪಡೆದು ಬಿಎಂಟಿಸಿ ಬಸ್ಸುಗಳಲ್ಲಿ ದುಡಿಯುವ ಮಹಿಳೆಯರು ಪ್ರಯಾಣ ಮಾಡಬಹುದಿತ್ತು. ಆದರೆ ಘೋಷಣೆಯಾಗಿ 4 ತಿಂಗಳೇ ಕಳೆದರು ಇನ್ನೂ ಬಿಎಂಟಿಸಿಗೆ ಆದೇಶನೂ ಬಂದಿಲ್ಲ, ದುಡ್ಡು ಬಂದಿಲ್ಲ ಎಂದಿದ್ದಾರೆ.

ಮೊದಲೇ ಕೊರೊನಾ ಲಾಕ್​​ಡೌನ್​ನಿಂದ ಗಾರ್ಮೆಂಟ್ಸ್ ಕಾರ್ಮಿಕರು ಕಷ್ಟಕ್ಕೆ ಸಿಲುಕಿದ್ದಾರೆ. ಬಿಎಂಟಿಸಿಯಲ್ಲಿ ಟಿಕೆಟ್ ಪಡೆದು ಪ್ರಯಾಣ ಮಾಡುವ ಶಕ್ತಿ ಕೂಡಾ ಕಾರ್ಮಿಕರಿಗೆ ಇಲ್ಲ. ಈ ಯೋಜನೆ ಜಾರಿ ಮಾಡಲು ಬೇಕಾಗಿರುವುದು ಕೇವಲ 25 ಕೋಟಿ ರೂಪಾಯಿ. ನಗರದಲ್ಲಿ 5 ಲಕ್ಷಕ್ಕೂ ಹೆಚ್ಚು ಗಾರ್ಮೆಂಟ್ಸ್ ಗಳಿಗೆ ಹೋಗುವ ಮಹಿಳೆಯಾರಿದ್ದಾರೆ. ಸರ್ಕಾರಕ್ಕೆ ಈ ಯೋಜನೆ ಜಾರಿಗೆ ತರುವುದು ದೊಡ್ಡ ಕಷ್ಟವಲ್ಲ. ಕೂಡಲೇ ಬಸ್ ಪಾಸ್ ನೀಡದಿದ್ದರೆ, ಎಲ್ಲಾ ಮಹಿಳಾ ಕಾರ್ಮಿಕರನ್ನ ರಸ್ತೆಗೆ ಇಳಿಸಿ ಪ್ರತಿಭಟನೆ ಮಾಡಲಾಗುವುದು ಅಂತ ಪ್ರಸನ್ನ ಗೌಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

The post ಗಾರ್ಮೆಂಟ್ಸ್​ನಲ್ಲಿ ದುಡಿಯೋ​ ಮಹಿಳೆಯರಿಗೆ ನಿರಾಸೆ; ಜಾರಿಯಾಗದ ‘ವನಿತಾ ಸಂಗಾತಿ’ ಯೋಜನೆ appeared first on News First Kannada.

Source: newsfirstlive.com

Source link