‘ಗಿಡ ಮರ ಬೆಳೆಸಿ, ಕಾಡು ಉಳಿಸಿ’- ದೇಶದ ಜನತೆಗೆ ಧೋನಿ ಸಂದೇಶ

‘ಗಿಡ ಮರ ಬೆಳೆಸಿ, ಕಾಡು ಉಳಿಸಿ’- ದೇಶದ ಜನತೆಗೆ ಧೋನಿ ಸಂದೇಶ

ಕುಟುಂಬ ಸದಸ್ಯರ ಜೊತೆ ಶಿಮ್ಲಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿ, ಹಿಮಾಚಲ ಪ್ರದೇಶದಲ್ಲಿ ಕಾಡುಗುಡ್ಡಗಳಲ್ಲಿ ಸಮಯ ಕಳೆಯುತ್ತಿದ್ದಾರೆ. 2ನೇ ಹಂತದ ಐಪಿಎಲ್ ಆರಂಭಕ್ಕೂ ಮುನ್ನ ಕುಟುಂಬದ ಜೊತೆ ಟೈಮ್​ಪಾಸ್ ಮಾಡುತ್ತಿರುವ ಮಾಜಿ ನಾಯಕ, ಸಮಾಜಮುಖಿ ಸಂದೇಶವೊಂದನ್ನ ರವಾನಿಸಿದ್ದಾರೆ. ಪರಿಸರದ ಮೇಲಿನ ಕಾಳಜಿಯನ್ನ ವ್ಯಕ್ತಪಡಿಸಿದ್ದಾರೆ. ‘ಗಿಡ, ಮರಗಳು ಬೆಳೆಸಿ, ಕಾಡನ್ನ ಉಳಿಸಿ’ ಎಂಬ ವಾಕ್ಯವನ್ನ ಮರದ ಹಲಗೆ ಮೇಲೆ ತನ್ನ ಕೈಯಾರೆ ಬರೆದಿರುವ ಧೋನಿ, ಪರಿಸರ ಸಂರಕ್ಷಣೆ ಕುರಿತು ದೇಶದ ಜನತೆಗೆ ಸಂದೇಶ ಸಾರಿದ್ದಾರೆ.

The post ‘ಗಿಡ ಮರ ಬೆಳೆಸಿ, ಕಾಡು ಉಳಿಸಿ’- ದೇಶದ ಜನತೆಗೆ ಧೋನಿ ಸಂದೇಶ appeared first on News First Kannada.

Source: newsfirstlive.com

Source link