ಗಿಣಿರಾಮ ಖ್ಯಾತಿಯ ರಿತ್ವಿಕ್ ಮಡಿಕೇರಿ​ ಜಾಲಿ ಟ್ರಿಪ್​.. ಫುಲ್​​ ಎಂಜಾಯ್​​


ಗಿಣಿರಾಮ ಧಾರಾವಾಹಿಯಲ್ಲಿ ನಮ್ಮ​ ಮಹತಿ ಸ್ನಾತಕೋತ್ತರ ಪದವಿಯಲ್ಲಿ ರಾಜ್ಯಾಕ್ಕೆ ನಾಲ್ಕನೇ ಱಂಕ್​ ಬಂದಿದ್ದಾಳೆ. ಈ ಸುದ್ದಿ ಕೇಳಿ ಮನೆಯವ್ರು ಫುಲ್​ ಖುಷ್​ ಆಗಿದ್ದಾರೆ. ಅದರಲ್ಲೂ ನಮ್ಮ​ ಶಿವರಾಮ ಮಹತಿಗಿಂತ ಸಂತಸ ಪಟ್ಟಿದ್ದಾನೆ ಮಾತ್ರವಲ್ಲದೆ.. ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾನೆ..

ಇದೂ ಶಿವರಾಮನ ಸೀರಿಯಲ್​ ಕತೆ.. ಆದ್ರೇ ನಮ್ಮ​ ಶಿವರಾಮ ಅಲಿಯಾಸ್​ ರಿತ್ವಿಕ್​ ಇದೀಗ ರಿಯಲ್​ ಲೈಫ್​ನಲ್ಲೂ ಫುಲ್​ ಖುಷ್ ಆಗಿದ್ದಾರೆ.. ಕಾರಣ ಹೆಂಡತಿ ಜೊತೆಗೆ ಸದ್ಯ ರಿತ್ವಿಕ್​ ಟ್ರಿಪ್​ನಲ್ಲಿ ಬ್ಯುಸಿಯಾಗಿದ್ದಾರೆ..

ಬೆಂಗಳೂರಿನಿಂದ ಮೈಸೂರಿಗೆ ತೆರೆಳಿ ಇದೀಗ ಮಲೆನಾಡಿನ ಸೊಬಗನ್ನೂ ಸವಿಯುತ್ತಿದ್ದಾರೆ ರಿತ್ವಿಕ್​ ಜೋಡಿ.. ಸದ್ಯ ಇವರು ಕಾಫಿನಾಡು ಅಂದ್ರೆ ಮಡಿಕೇರಿಯಲ್ಲಿ ಬೀಡುಬಿಟ್ಟಿದ್ದಾರೆ..ಚಳಿಯ ವಾತವರಣ ಅದರಲ್ಲೂ ಜಿಟಿ ಜಿಟಿ ಮಳೆ ಹಾಗೂ ಮುಖ್ಯವಾಗಿ ಟ್ರೀ ಹೌಸ್​ನಲ್ಲಿ ತಂಪಾದ ವಾತಾವರಣವನ್ನು ಸಖತ್​ ಎಂಜಾಯ್​ ಮಾಡ್ತಾಯಿದ್ದಾರೆ.

ನಮ್ಮ​ ರಿತ್ವಿಕ್​ ಟ್ರಿಪ್​ ಹೋಗಿದ್ದಾರೆ ಅಂದ್ರೆ ಅದೂ ಒಂದು ಪಕ್ಷಿಗಳು ಹೆಚ್ಚಿರುವ ಸ್ಥಳ ಅಥವಾ ಪ್ರಾಣಿಗಳು ಇರುವ ಸ್ಥಳಕ್ಕೆ ಹೆಚ್ಚಾಗಿ ವಿಸಿಟ್​ ಮಾಡ್ತಾನೆ ಇರ್ತಾರೆ.. ಮೊದಲು ರಿತ್ವಿಕ್​ ಭೇಟಿ ನೀಡಿದ್ದು ಮೈಸೂರಿನ ರಂಗನ ತಿಟ್ಟಿಗೆ.. ರಿತ್ವಿಕೆ ವಿಶೇಷವಾಗಿ ಪಕ್ಷಿಗಳ ಮೇಲೆ ಆಸಕ್ತಿಯಿದೆ ಎಂಬುವುದು ತಿಳಿದ ವಿಚಾರ ಹಾಗಾಗಿ ಹೆಚ್ಚು ಬರ್ಡ್​ಸ್​ ಇರುವಂತಹ ರಂಗನತಿಟ್ಟಿಗೆ ವಿಸಿಟ್​ ಮಾಡಿ ಅಲ್ಲಿ ಬರ್ಡ್​ ವಾಚ್​ ಮಾಡಿದ್ದಾರೆ..

ಅದಾದ ಬಳಿಕ ಕಾವೇರಿ ಹುಟ್ಟಿದ ಸ್ಥಳ ಅಂದ್ರೆ ಮಡಿಕೇರಿಗೆ ವಿಸಿಟ್​ ಮಾಡಿರುವ ಇವ್ರು.. ದುಬಾರೆ ಫಾರೆಸ್ಟ್​ಗೆ ತೆರಳಿ ಅಲ್ಲಿ ಆನೆಗಳನ್ನು ನೋಡಿ ಅವುಗಳ ಜೊತೆ ಒಂದಿಷ್ಟು ಸಮಯ ಕಳೆದಿದ್ದಾರೆ.. ಹಾಗೂ ಈ ಚಳಿಯಲ್ಲಿ ಕೂರ್ಗ್​ನ ಫೇಮಸ್​ ಫಾಲ್ಸ್​ ಅಬ್ಬೆ ಫಾಲ್ಸ್​ಗೆ ಕೂಡ ತೆರಳಿದ್ದಾರೆ..ಇನ್ನು ಮಡಿಕೇರಿಯಲ್ಲಿ ಮತ್ತೊಂದು ಮುಖ್ಯ ಸ್ಥಳ ಅಂದ್ರೆ ನಿಸರ್ಗಧಾಮ ಅಲ್ಲಿಗೂ ಕೂಡಾ ರಿತ್ವಿಕ್​ ವಿಸಿಟ್​ ಮಾಡಿದ್ದಾರೆ..
ಶೂಟಿಂಗ್​ ಟ್ರಾವಲಿಂಗ್​ ಟ್ರಾಫಿಕ್​ ಡಸ್ಟ್​ ಅದೂ ಇದೂ ಅಂತಾ ಸಖತ್​ ಸ್ಟ್ರೆಸ್​ನಲ್ಲಿದ್ದ ರಿತ್ವಿಕ್ ಮೂರು ದಿನ ಬ್ರೇಕ್​ ತೆಗೆದುಕೊಂಡು​ ಸದ್ಯ ಮಲೆನಾಡಿಗೆ ತೆರಳಿ ಫುಲ್​ ರಿಲ್ಯಾಕ್ಸ್​ ಆಗಿದ್ದಾರೆ.

News First Live Kannada


Leave a Reply

Your email address will not be published. Required fields are marked *