ಗುಂಗಿಡಿಸಿದ ‘ಏಕ್​ ಲವ್​ ಯಾ’ ಟ್ರೈಲರ್​..ಬಾವ-ಮೈದುನನ ದರ್ಬಾರ ಶುರುವಾಗೋದು ಯಾವಾಗ..?


ಅಷ್ಟು ಸುಲಭವಾಗಿ ಸಿನಿಮಾ ಮಾಡೋ ಆಸಾಮಿ ಅಲ್ವೇ ಅಲ್ಲ ಬಿಡಿ ಜೋಗಿ ಪ್ರೇಮ್​.. ತಮ್ಮ ಸಿನಿಮಾಗಳ ಮೂಲಕ ಟ್ರೆಂಡ್ ಆದ್ರೂ ಸೆಟ್​ ಮಾಡ್ತಾರೆ ಇಲ್ಲಾ ಅಟ್​​ಲಿಸ್ಟ್​​​ ಸೌಂಡ್ ಆದ್ರು ಮಾಡೇ ಮಾಡ್ತಾರೇ. ಶೋ ಮ್ಯಾನ್ ತನ್ನ ಬಾವ ಮೈದುನನ್ನ ಹಾಕೊಂಡು ಎಂಥಹ ಸಿನಿಮಾ ಮಾಡ್ತಾರೇ ಅನ್ನೋರಿಗೆ ಕುತೂಹಲದ ಕಾವು ಹಗಲಿರುಳು ಕಾಡಬೇಕು ಅಂತ ಸಿನಿಮಾವನ್ನ ‘ಏಕ್ ಲವ್ ಯಾ’ ಮೂಲಕ ಮಾಡಿರೋ ಸೂಚನೆ ಸಿಕ್ತಾ ಇದೆ. ಏಕ್ ಲವ್ ಯಾ ಸಿನಿಮಾದ ಫೈನಲ್ ಝಲಕ್​​ ಜೊತೆ ಒಂದಷ್ಟು ಮಾಹಿತಿ ನಿಮಗಾಗಿ.

ಒಂದು ಸಿನಿಮಾ ಥಿಯೇಟರ್​ಗೆ ಬರೋಕ್ಕು ಮುಂಚೆನೆ ಪ್ರೇಕ್ಷಕರಿಗೆ ಆ ಸಿನಿಮಾದ ಬಗ್ಗೆ ಅರಿವು ಮತ್ತು ಒಲವು ಎರಡನ್ನು ತರಿಸೋದು ಇವತ್ತಿನ ಕಾಲಕ್ಕೆ ಕಷ್ಟ ಕಷ್ಟ. ಆದ್ರೆ ಶೋ ಮ್ಯಾನ್ ಡೈರೆಕ್ಟರ್ ಜೋಗಿ ಪ್ರೇಮ್ ಅವರಿಗೆ ನೀರು ಕುಡಿದಷ್ಟು ಸಲಿಸು. ಟೈಟಲ್​​ನಿಂದಲೇ ಪ್ರೇಕ್ಷಕರಿಗೆ ಇಂಪ್ರೆಷನ್ ಮೂಡಿಸಿ ಸಾಂಗ್ಸು, ಟೀಸರು, ಟ್ರೈಲರ್ ಅನ್ಕೊಂಡು ಪ್ರೇಕ್ಷಕ ಮಹಾ ಪ್ರಭು ಬೆರಗುಗಣ್ಣಿನಿಂದ ಸಿನಿಮಾವನ್ನ ನೋಡಬೇಕು, ಹಂಗೆ ಮಾಡಿಬಿಡ್ತಾರೆ ಜೋಗಿ ಪ್ರೇಮ್.

News First Live Kannada


Leave a Reply

Your email address will not be published.