ತನಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ವಿಡಿಯೋ ರಿಲೀಸ್ ಮಾಡಿರುವ ನಿಶಾ ದಹಿಯಾ, ಇದು ಶುದ್ದ ಸುಳ್ಳು ಎಂದಿದ್ದಾರೆ.
ಇತ್ತೀಚೆಗೆ ಸೆರ್ಬಿಯಾದಲ್ಲಿ ನಡೆದ ವರ್ಲ್ಡ್ ಯು-23 ಚಾಂಪಿಯನ್ಶೀಪ್ ಟೂರ್ನಿಯಲ್ಲಿ 65 ಕೆಜಿ ಮಹಿಳಾ ಕುಸ್ತಿಪಟು ವಿಭಾಗದಲ್ಲಿ ನಿಶಾ ಕಂಚಿನ ಪದಕ ಗೆದ್ದಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಕ್ಷೇತ್ರಗಳ ಗಣ್ಯರು ನಿಶಾಗೆ ಫೋನಾಯಿಸಿ ವಿಶ್ ಮಾಡಿದ್ದರು.
ಇನ್ನು, ಸುಳ್ಳು ಸುದ್ದಿ ಹಬ್ಬಿಸಿದವರಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ. ಇದುವರೆಗೂ ಈ ಸಂಬಂಧ ಯಾವುದೇ ಮಾಹಿತಿ ಲಭ್ಯವಾಗಿಲ್ಲ.