ಗುಂಡಿ ಮುಚ್ಚದ BBMP ತಿಥಿಕಾರ್ಯ ಮಾಡಿದ ಸಾರ್ವಜನಿಕರು..!


ಬೆಂಗಳೂರು: ರಸ್ತೆಗುಂಡಿ ಮುಚ್ಚದ ಬಿಬಿಎಂಪಿ ವಿರುದ್ಧ ವಿನೂತನ ಪ್ರತಿಭಟನೆ ಕೈಗೊಂಡ ಸಾರ್ವಜನಿಕರು ಪಾಲಿಕೆ ಫೋಟೋಗೆ ತಿಥಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

ಕಳೆದ ತಿಂಗಳ 26 ರಂದು ಸುಂಕದಕಟ್ಟೆ ರಸ್ತೆ ಗುಂಡಿಯಲ್ಲಿ ಬಿಬಿಎಂಪಿ ಪ್ರತಿಕೃತಿಯ ಅಂತ್ಯ ಸಂಸ್ಕಾರ ಮಾಡಿ ಪ್ರತಿಭಟನೆ ಮಾಡಲಾಗಿತ್ತು. ಆ ಬಳಿಕ ರಸ್ತೆ ಗುಂಡಿ ಮುಚ್ಚುವಂತೆ ಪಾಲಿಕೆಗೆ ಮನವಿ ಮಾಡಿ 11 ದಿನಗಳ ಗಡುವನ್ನ ಕೂಡ ನೀಡಲಾಗಿತ್ತು. ಆದ್ರೆ ಸಾರ್ವಜನಿಕರ ಮನವಿಗೆ ಕ್ಯಾರೆ ಎನ್ನದ ಪಾಲಿಕೆ ಸೈಲೆಂಟ್​ ಆಗಿತ್ತು.

ಇದರಿಂದ ಗರಂ ಆದ ಸಾರ್ವಜನಿಕರು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟ ನೇತೃತ್ವದಲ್ಲಿ  ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲೇ ಪ್ರತಿಭಟನೆಗೆ ನಿಂತಿದ್ದಾರೆ. ಈ ವೇಳೆ ಪಾಲಿಕೆ ಪೋಟೋ ಇಟ್ಟು, ಹೂ ಹಾಕಿ, ಹಣ್ಣು, ಚಕ್ಕುಲಿ, ನಿಪ್ಪಟ್ಟು, ವಡೆ, ಪಾಯಸ ಎಡೆ ಇಟ್ಟಿದ್ದಾರೆ . ಅಷ್ಟೇ ಅಲ್ಲದೆ ತಲೆ ಬೊಳಿಸಿಕೊಂಡು, 11ನೇ ದಿನದ ತಿಥಿ ಮಾಡಿ ಪಾಲಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

News First Live Kannada


Leave a Reply

Your email address will not be published. Required fields are marked *