ಗುಂಡ್ಲುಪೇಟೆ: ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ವಿರುದ್ಧ ಅರಣ್ಯಾಧಿಕಾರಿಗಳಿಗೆ ಬಿಜೆಪಿ ದೂರು | Chamarajanagar BJP leaders lodge complaint against Rahul Gandhi during Bharat Jodo Gundlupet


Chamarajanagar BJP: ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ತಮಿಳುನಾಡಿನಿಂದ ಆಗಮಿಸಿದ ರಾಹುಲ್ ಗಾಂಧಿ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಉದ್ಯಾನವನದ ಒಳಗಡೆ ಅರಣ್ಯ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ದೂರಿನ ಸಾರಾಂಶವಾಗಿದೆ.

ಗುಂಡ್ಲುಪೇಟೆ: ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ವಿರುದ್ಧ ಅರಣ್ಯಾಧಿಕಾರಿಗಳಿಗೆ ಬಿಜೆಪಿ ದೂರು

ಗುಂಡ್ಲುಪೇಟೆ: ರಾಹುಲ್ ಗಾಂಧಿ ವಿರುದ್ಧ ಅರಣ್ಯಾಧಿಕಾರಿಗಳಿಗೆ ಬಿಜೆಪಿ ದೂರು

ಚಾಮರಾಜನಗರ: ಕಾಂಗ್ರೆಸ್​ ಪಕ್ಷ ದೇಶಾದ್ಯಂತ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ (Bharat Jodo) ಕರ್ನಾಟಕಕ್ಕೂ ಪ್ರವೇಶಿಸಿದ್ದು, ನಿನ್ನೆ ಮೊದಲ ದಿನವೆ ಯಡವಟ್ಟು ಮಾಡಿದೆ. ಪಕ್ಷದ ಪ್ರಮುಖ ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದಲ್ಲಿ ನಡೆದಿರುವ ಕಾರ್ಯಕ್ರಮದಲ್ಲಿ ಪಕ್ಷದ ನಾಯಕನಿಂದ ಅಚಾತುರ್ಯ ನಡೆದಿದೆ ಎಂದು ರಾಹುಲ್ ಗಾಂಧಿ ವಿರುದ್ಧ ಅರಣ್ಯಾಧಿಕಾರಿಗಳಿಗೆ ಚಾಮರಾಜನಗರ ಬಿಜೆಪಿ ನಾಯಕರು (Chamarajanagar BJP) ದೂರು ಸಲ್ಲಿಸಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ತಮಿಳುನಾಡಿನಿಂದ ಆಗಮಿಸಿದ ರಾಹುಲ್ ಗಾಂಧಿ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಉದ್ಯಾನವನದ ಒಳಗಡೆ ಅರಣ್ಯ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ದೂರಿನ ಸಾರಾಂಶವಾಗಿದೆ. ಚಾಮರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ಡಿ.ಪಿ. ಜಗದೀಶ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳಿಗೆ ದೂರು ನೀಡೆಲಾಗಿದೆ. ಬಂಡೀಪುರದಿಂದ ಗುಂಡ್ಲುಪೇಟೆಗೆ ಬರುವ ಹುಣಸೆಮರದ ರಸ್ತೆಯ ಬಳಿ ಅರಣ್ಯದೊಳಗೆ ನಿಂತು ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಜೆ. ಜಾರ್ಜ್, ಎಚ್. ಸಿ. ಮಹದೇವಪ್ಪ, ರಾಹುಲ್ ಗಾಂಧಿ ಅರಣ್ಯ ನಿಯಮವನ್ನು ಗಾಳಿಗೆ ತೂರಿದ್ದಾರೆ ಎಂದು ದೂರಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.