ಉಡುಪಿ: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿದೆ. ಹೀಗಾಗಿ ಆದಷ್ಟು ಕಾರ್ಯಕ್ರಮಗಳಿಂದ ದೂರ ಇರಿ ಅಂತ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಸೋಂಕಿತರನ್ನು ಭೇಟಿಯಾದ ಸಂದರ್ಭದಲ್ಲಿ ನಾನು ಮಾಹಿತಿ ಪಡೆದುಕೊಂಡಿದ್ದೇನೆ. ಮದುವೆಯಲ್ಲಿ ಭಾಗಿ ಆದವರಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದೆ. ಆದಷ್ಟು ಮದುವೆಗಳನ್ನು ಮುಂದೂಡಿದರೆ ಒಳಿತು ಎಂದು ಅವರು ಹೇಳಿದರು. ಮೆಹಂದಿ ಕಾರ್ಯಕ್ರಮ ಆಯೋಜಿಸಿದರೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗಿದೆ. ಮತ್ತೆ ಲಾಕ್​ಡೌನ್​ ಮುಂದುವರಿಯಲು ಅವಕಾಶ ಕೊಡಬೇಡಿ ಎಂದು ಜಿಲ್ಲೆಯ ಜನರಲ್ಲಿ ಕೈಮುಗಿದು ವಿನಂತಿಸಿದರು.

ಗುಂಪುಗೂಡಿ ಕ್ರಿಕೆಟ್​ ಆಡಿದ್ರೆ ಕೇಸ್​ ಹಾಕಲು ಸೂಚನೆ
ಕೊರೊನಾ ಕಷ್ಟದಲ್ಲೂ ಸಹ ಗ್ರೌಂಡ್​ನಲ್ಲಿ ಕೆಲವರು ಕ್ರಿಕೆಟ್ ಆಡುತ್ತಿದ್ದಾರೆ. ಹೀಗೆ ಗುಂಪು ಗೂಡಿ ಕ್ರಿಕೆಟ್ ಆಡುವುದನ್ನು ಜಿಲ್ಲೆಯಾದ್ಯಂತ ಗಮನಿಸಿದ್ದೇನೆ. ಈಗಾಗಲೇ ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಬಳಿ ಮಾತನಾಡಿದ್ದೇನೆ. ಈ ರೀತಿ ಗುಂಪುಗೂಡಿ ಕ್ರಿಕೆಟ್ ಆಡುವುದು ಕಂಡ ಬಂದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲು ಎಸ್​​ಪಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಎಚ್ಚರಿಕೆ ನೀಡಿದ್ರು. ದಯವಿಟ್ಟು ಯಾರೂ ಕೂಡ  ಕ್ರಿಕೆಟ್ ಆಡುವ ಮೂಲಕ ಕಾನೂನು ಉಲ್ಲಂಘನೆ ಮಾಡಬೇಡಿ ಎಂದು ಮನವಿ ಮಾಡಿದ್ರು.

The post ಗುಂಪುಗೂಡಿ ಕ್ರಿಕೆಟ್ ಆಡಿದ್ರೆ ಬೀಳುತ್ತೆ ಕೇಸ್​: ಉಡುಪಿ ಡಿ.ಸಿ ವಾರ್ನಿಂಗ್ appeared first on News First Kannada.

Source: newsfirstlive.com

Source link