ವರದಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು. ಈ ನಡುವೆ 20 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.

ಗುಜರಾತ್ನ ಜಾಮ್ನಗರದ 36 ಕೊಠಡಿಗಳ ಹೋಟೆಲ್ನಲ್ಲಿ ಭಾರೀ ಅಗ್ನಿ ದುರಂತ: 25 ಮಂದಿ ಅಗ್ನಿಗಾಹುತಿ ಶಂಕೆ
ಗುಜರಾತ್: ಗುಜರಾತ್ನ ಜಾಮ್ನಗರದಲ್ಲಿರುವ (Jamnagar) 36 ಕೊಠಡಿಗಳ ಅಲೆಂಟೊ ಖಾಸಗಿ ಹೋಟೆಲ್ನಲ್ಲಿ (36 room Alento hotel) ಗುರುವಾರ ಸಂಜೆ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಸುಮಾರು 25 ಮಂದಿ ಬೆಂಕಿಯಲ್ಲಿ ಸಿಲುಕಿರುವ ಶಂಕೆ ಇದೆ ಎಂದು ಮೂಲಗಳು ತಿಳಿಸಿವೆ. ಹೋಟೆಲ್ ಜಾಮ್ನಗರ ನಗರ ಕೇಂದ್ರದಿಂದ ದ್ವಾರಕಾ (Dwarka) ಕಡೆಗೆ 25 ಕಿಮೀ ದೂರದಲ್ಲಿದೆ.
ವರದಿಗಳ ಪ್ರಕಾರ, ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು. ಈ ನಡುವೆ 20 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.