ಗುಜರಾತ್​ನ ಮುಂದ್ರಾ ಬಂದರಿನಲ್ಲಿ ರೇಡಿಯೊಆ್ಯಕ್ಟೀವ್ ಕಂಟೇನರ್​ಗಳ ಜಪ್ತಿ | Radio Active Containers Seized from China Bound Ship in Mundra Port


ಗುಜರಾತ್​ನ ಮುಂದ್ರಾ ಬಂದರಿನಲ್ಲಿ ರೇಡಿಯೊಆ್ಯಕ್ಟೀವ್ ಕಂಟೇನರ್​ಗಳ ಜಪ್ತಿ

ಗುಜರಾತ್​ನ ಮುಂದ್ರಾ ಬಂದರು

ಅಹಮದಾಬಾದ್: ಪಾಕಿಸ್ತಾನದಿಂದ ಭಾರತದ ಜಲಪ್ರದೇಶದ ಮೂಲಕ ಚೀನಾದ ಶಾಂಘೈಗೆ ಹೋಗುತ್ತಿದ್ದ ರೇಡಿಯೊಆ್ಯಕ್ಟೀವ್ ಕಂಟೇನರ್​ಗಳನ್ನು ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಜಪ್ತಿ ಮಾಡಲಾಗಿದೆ. ಈ ರೇಡಿಯೋ ಆ್ಯಕ್ಟೀವ್ ಸಾಮಗ್ರಿ ಬಗ್ಗೆ ಈಗ ರೆವಿನ್ಯೂ ಇಂಟಲಿಜೆನ್ಸ್ ಹಾಗೂ ಅಟಾಮಿಕ್ ಎನರ್ಜಿ ಇಲಾಖೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರೇಡಿಯೊ ಆ್ಯಕ್ಟೀವ್ ಪ್ರಮಾಣ ಎಷ್ಟು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಈ ರೇಡಿಯೋ ಆ್ಯಕ್ಟೀವ್ ಸಾಮಗ್ರಿಗಳನ್ನು ಭಾರತದ ಬಂದರುಗಳಿಗೆ ಕಳಿಸುತ್ತಿರಲಿಲ್ಲ ಎಂದು ಕಂಪನಿಯು ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಕರಾಚಿಯಿಂದ ಗುಜರಾತ್‌ನ ಮುಂದ್ರಾ ಬಂದರಿನ ಮೂಲಕ ಚೀನಾಕ್ಕೆ ರವಾನಿಸುತ್ತಿದ್ದ ರೇಡಿಯೊಆ್ಯಕ್ಟೀವ್ ಸಾಮಗ್ರಿಗಳಿದ್ದ ಕಂಟೇನರ್‌ಗಳನ್ನು ಗುಜರಾತ್ ಕರಾವಳಿಯ ಮುಂದ್ರಾ ಬಂದರಿನಲ್ಲಿ ಜಪ್ತಿ ಮಾಡಲಾಗಿದೆ ಎಂದು ಕಸ್ಟಮ್ಸ್ ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ವಶಪಡಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದಿಂದ ಚೀನಾಕ್ಕೆ ಅಪಾಯಕಾರಿ ರೇಡಿಯೊಆ್ಯಕ್ಟೀವ್ ಸಾಮಗ್ರಿಗಳನ್ನು ಸಾಗಿಸುತ್ತಿರುವ ಕಂಟೇನರ್‌ಗಳ ಚಲನವಲನದ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಎರಡು ದಿನಗಳ ಕಾರ್ಯಾಚರಣೆಯ ನಂತರ ಚೀನಾದ ಶಾಂಘೈಗೆ ಹೊರಟಿದ್ದ ಸರಕುಗಳನ್ನು ಭಾರತದ ಜಲಪ್ರದೇಶದಲ್ಲಿ ತಡೆದು ಮುಂದ್ರಾ ಬಂದರಿಗೆ ಕೊಂಡೊಯ್ಯಲಾಯಿತು ಎಂದು ಮೂಲಗಳು ತಿಳಿಸಿವೆ.

ಸರಕುಗಳ ನಿಖರವಾದ ಸ್ವರೂಪವು ತಕ್ಷಣವೇ ತಿಳಿದಿಲ್ಲವಾದರೂ, ಅನಾಮಧೇಯತೆಯ ಷರತ್ತಿನ ಮೇಲೆ ವಿಷಯವನ್ನು ಅಪಾಯದ ವರ್ಗ 7 ಎಂದು ವರ್ಗೀಕರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಈ ನಿರ್ದಿಷ್ಟ ವರ್ಗವು ಸಂಸ್ಕರಿಸಿದ ಯುರೇನಿಯಂನಂತಹ ರೇಡಿಯೊಆ್ಯಕ್ಟೀವ್ ಸಾಮಗ್ರಿಗಳ ಜೊತೆಗೆ ವ್ಯವಹರಿಸುತ್ತದೆ. ಪರಮಾಣು ಶಕ್ತಿ ಇಲಾಖೆ (ಡಿಎಇ) ಪ್ರಸ್ತುತ ರೇಡಿಯೋ ಆ್ಯಕ್ಟೀವ್ ಪ್ರಮಾಣವನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿ ಹೇಳಿದರು. ಕರಾಚಿಯಿಂದ ಶಾಂಘೈಗೆ ಕಂಟೇನರ್‌ಗಳು ಹೋಗುತ್ತಿವೆ ಎಂಬ ಎಚ್ಚರಿಕೆಯನ್ನು ಗುಪ್ತಚರ ಸಂಸ್ಥೆಗಳಿಗೆ ಸಿಕ್ಕಿತ್ತು. ಕಂಟೇನರ್‌ ಅನ್ನು ಗುಜರಾತ್ ಕರಾವಳಿಯಲ್ಲಿ ಅಧಿಕಾರಿಗಳು ತಡೆದರು ಮತ್ತು ಮುಂದ್ರಾ ಬಂದರಿನ ಕಡೆಗೆ ತೆರಳಲು ಸೂಚಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಘೋಷಿತವಾದ ರೇಡಿಯೊಆ್ಯಕ್ಟೀವ್‌ ಸಾಮಗ್ರಿಗಳ ಬಗ್ಗೆಯೂ ಎಚ್ಚರಿಕೆಯು ಸುಳಿವು ನೀಡಿದೆ. ಈ ಏಳು ಕಂಟೇನರ್‌ಗಳಲ್ಲಿ ರವಾನೆಯಾಗಿರುವ ವಸ್ತುವನ್ನು ಅಧಿಕಾರಿಗಳು ಪ್ರಸ್ತುತ ವಿಶ್ಲೇಷಿಸುತ್ತಿದ್ದಾರೆ. ಅಗತ್ಯವಿದ್ದರೆ ವಿವಿಧ ಏಜೆನ್ಸಿಗಳ ತನಿಖಾಧಿಕಾರಿಗಳನ್ನು ತನಿಖೆಗೆ ಸೇರ್ಪಡೆ ಆಗಲು ಮನವಿ ಮಾಡಲಾಗುತ್ತೆ. ಒಂದು ಹೇಳಿಕೆಯಲ್ಲಿ, ಮುಂದ್ರಾ ಬಂದರನ್ನು ನಿರ್ವಹಿಸುವ ಅದಾನಿ ಪೋರ್ಟ್ಸ್ ಸರಕುಗಳನ್ನು ‘ಅಪಾಯಕಾರಿಯಲ್ಲ’ ಎಂದು ಪಟ್ಟಿ ಮಾಡಿದೆ. ಭಾರತದ ಯಾವುದೇ ಬಂದರಿಗೆ ಈ ರೇಡಿಯೋ ಆ್ಯಕ್ಟೀವ್‌ ಸಾಮಗ್ರಿ ಕಳಿಸುತ್ತಿರಲಿಲ್ಲ ಎಂದು ಹೇಳಿದೆ.

ನವೆಂಬರ್ 18, 2021ರಂದು, ಜಂಟಿ ಕಸ್ಟಮ್ಸ್ ಮತ್ತು ಡಿಆರ್​ಐ ತಂಡವು ಮುಂದ್ರಾ ಬಂದರಿನಲ್ಲಿ ವಿದೇಶಿ ಹಡಗಿನಿಂದ ಹಲವಾರು ಕಂಟೇನರ್‌ಗಳಲ್ಲಿ ಅಘೋಷಿತ ಅಪಾಯಕಾರಿ ಸರಕುಗಳನ್ನು ಹೊಂದಿದೆ ಎಂಬ ಕಳವಳದ ಮೇಲೆ ವಶಪಡಿಸಿಕೊಂಡಿತು. ಸರಕನ್ನು ಅಪಾಯಕಾರಿಯಲ್ಲ ಎಂದು ಪಟ್ಟಿಮಾಡಲಾಗಿದ್ದರೂ, ವಶಪಡಿಸಿಕೊಂಡ ಕಂಟೇನರ್‌ಗಳು ಅಪಾಯದ ವರ್ಗ 7 ಗುರುತು ಹೊಂದಿದ್ದವು (ಇದು ರೇಡಿಯೋಆ್ಯಕ್ಟೀವ್‌ ವಸ್ತುಗಳನ್ನು ಸೂಚಿಸುತ್ತದೆ). ಕಂಟೇನರ್‌ಗಳು ಮುಂದ್ರಾ ಬಂದರು ಅಥವಾ ಭಾರತದ ಯಾವುದೇ ಬಂದರಿಗೆ ಉದ್ದೇಶಿಸಿಲ್ಲವಾದರೂ, ಪಾಕಿಸ್ತಾನದ ಕರಾಚಿಯಿಂದ ಚೀನಾದ ಶಾಂಘೈಗೆ ಹೋಗುವ ಮಾರ್ಗದಲ್ಲಿದ್ದರೂ, ಹೆಚ್ಚಿನ ತಪಾಸಣೆಗಾಗಿ ಸರ್ಕಾರಿ ಅಧಿಕಾರಿಗಳು ಅವುಗಳನ್ನು ಮುಂದ್ರಾ ಬಂದರಿನಲ್ಲಿ ಆಫ್‌ಲೋಡ್ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ಗೃಹ ವ್ಯವಹಾರಗಳ ಸಚಿವಾಲಯವು ಡಿಆರ್‌ಐ ದಾಖಲಿಸಿದ ಇದೇ ರೀತಿಯ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವರ್ಗಾಯಿಸಿತ್ತು, ಇದರಲ್ಲಿ ಕರಾಚಿಗೆ ಕಳಿಸುತ್ತಿದ್ದ ‘ಡಾ ಕುಯಿ ಯುನ್’ ಎಂದು ಗುರುತಿಸಲಾದ ನೌಕೆಯು ಕ್ಷಿಪಣಿಗಳನ್ನು ಉಡಾಯಿಸಲು ಬಳಸುವ ಪ್ರೆಶರ್ ಚೇಂಬರ್ ಇತ್ತು. ಸಾಮೂಹಿಕ ವಿನಾಶ ಮತ್ತು ವಿತರಣಾ ವ್ಯವಸ್ಥೆಗಳ ಶಸ್ತ್ರಾಸ್ತ್ರಗಳ (ಕಾನೂನುಬಾಹಿರ ಚಟುವಟಿಕೆಗಳ ನಿಷೇಧ) ಕಾಯ್ದೆ ಅನ್ವಯ ಸಂಬಂಧಿತ ಸೆಕ್ಷನ್‌ಗಳ ಜೊತೆಗೆ ಇತರ ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: 2,990 ಕೆಜಿ ಹೆರಾಯಿನ್ ವಶ ಪ್ರಕರಣ; ಮುಂದ್ರಾ ಅದಾನಿ ಬಂದರು ಲಾಭ ಪಡೆದಿದೆಯೇ?: ತನಿಖೆಗೆ ಆದೇಶಿಸಿದ ಎನ್‌ಡಿಪಿಎಸ್ ನ್ಯಾಯಾಲಯ
ಇದನ್ನೂ ಓದಿ: ‘ಬೃಹತ್ ಪ್ರಮಾಣದ ಡ್ರಗ್ಸ್ ವಶ ಪಡಿಸಲು ನೆರವಾಯ್ತು ಮುಂದ್ರಾ ಬಂದರಿನಲ್ಲಿ ಜೂನ್ 9ರಂದು ನಡೆದ ಅಣಕು ಕಾರ್ಯಾಚರಣೆ’

TV9 Kannada


Leave a Reply

Your email address will not be published. Required fields are marked *