ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಗುಜರಾತ್​​​ ಸೆಕೆಂಡರಿ ಮತ್ತು ಹೈಯರ್​ ಸೆಕೆಂಡರಿ ಎಜುಕೇಷನ್ ಬೊರ್ಡ್​(GSHSEB) ಈ ವರ್ಷದ 12ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಿದೆ. ಇಂದು ಗುಜರಾತ್​ ಶಿಕ್ಷಣ ಸಚಿವ ಭೂಪೇಂದ್ರ ಸಿನ್ಹಾ ಈ ಬಗ್ಗೆ ಘೋಷಣೆ ಮಾಡಿದ್ದಾರೆ.

ನಿನ್ನೆಯಷ್ಟೇ ಸೆಂಟ್ರಲ್ ಬೋರ್ಡ್​ ಆಫ್ ಸೆಕೆಂಡರಿ ಎಜುಕೇಷನ್(CBSE) ಹಾಗೂ ಕೌನ್ಸಿಲ್ ಫಾರ್​ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಷನ್ ಎಕ್ಸಾಮಿನೇಷನ್ಸ್​(CISCE) 12ನೇ ತರಗತಿ ಪರೀಕ್ಷೆಗಳನ್ನ ರದ್ದು ಮಾಡಿದ್ದವು. ಅದರ ಬೆನ್ನಲ್ಲೇ ಗುಜರಾತ್​ನಲ್ಲಿ ಈ ಆದೇಶ ಹೊರಬಿದ್ದಿದೆ.

ಜುಲೈ 1 ರಿಂದ 16ರವರೆಗೆ ಜಿಎಸ್‌ಇಬಿ ಮಂಡಳಿಯ ಪರೀಕ್ಷೆಗಳು ನಿಗದಿಯಾಗಿತ್ತು. ವಿಜ್ಞಾನ ವಿಭಾಗದ 1.40 ಲಕ್ಷ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಸ್ಟ್ರೀಮ್‌ನ 5.43 ಲಕ್ಷ ವಿದ್ಯಾರ್ಥಿಗಳು (ಕಲೆ ಮತ್ತು ವಾಣಿಜ್ಯ) ಸೇರಿ ಒಟ್ಟು 6 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಈ ಬಾರಿ 12ನೇ ತರಗತಿ ಪರೀಕ್ಷೆಯನ್ನು ಬರೆಯಲಿದ್ದಾರೆ ಎಂದು ಶಿಕ್ಷಣ ಸಚಿವ ಭೂಪೇಂದ್ರ ಈ ಹಿಂದೆ ಹೇಳಿದ್ದರು.

ಸದ್ಯ ಎಲ್ಲರ ಚಿತ್ತ ಕರ್ನಾಟಕದತ್ತ ನೆಟ್ಟಿದ್ದು ಕರ್ನಾಟಕದಲ್ಲೂ ಪರೀಕ್ಷೆಗಳು ರದ್ದಾಗುತ್ತವಾ? ಅಥವಾ ಪರೀಕ್ಷೆಗಳನ್ನು ಇಲ್ಲಿ ನಡೆಸಲಾಗುತ್ತಾ? ಅನ್ನೋ ಪ್ರಶ್ನೆಯನ್ನು ಹೊತ್ತು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

The post ಗುಜರಾತ್​​ನಲ್ಲಿಯೂ 12ನೇ ಕ್ಲಾಸ್​ PUC ಪರೀಕ್ಷೆ; ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ appeared first on News First Kannada.

Source: newsfirstlive.com

Source link