ವಿಕ್ಕಿ ಕೌಶಲ್, ಕತ್ರಿನಾ ಕೈಫ್
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ನಡುವೆ ಓಡಾಡುತ್ತಿರುವ ಸುದ್ದಿ ಒಂದೆರಡಲ್ಲ. ಇವರಿಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ದಂಪತಿ ಈ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎಂಬುದನ್ನು ಅಭಿಮಾನಿಗಳು ಬಲವಾಗಿ ನಂಬಿದ್ದಾರೆ. ಮದುವೆ ಬಗ್ಗೆ ಇಷ್ಟೆಲ್ಲ ಸುದ್ದಿ ಹರಿದಾಡುತ್ತಿದ್ದರೂ ಇಬ್ಬರೂ ಮೌನ ವಹಿಸಿರುವುದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಅಚ್ಚರಿ ಎಂದರೆ, ಈಗ ದೀಪಾವಳಿ ಹಬ್ಬದಂದು ಇವರ ರೋಕಾ ಕಾರ್ಯಕ್ರಮ ಪೂರ್ಣಗೊಂಡಿದೆ ಎನ್ನುವ ಮಾತು ಜೋರಾಗಿದೆ.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಒಟ್ಟಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಿದೆ. ಇವರ ನಡುವೆ ಪ್ರೀತಿ ಹುಟ್ಟಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ, ಇದನ್ನು ಇಬ್ಬರೂ ಅಲ್ಲಗಳೆದಿದ್ದರು. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಅಷ್ಟೇ ಎಂದು ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಆದರೆ, ನೆಟ್ಟಿಗರು ಸುಮ್ಮನೆ ಕೂತಿಲ್ಲ. ವಿಕ್ಕಿ ಹಾಗೂ ಕತ್ರಿನಾ ಸೈಲೆಂಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯನ್ನು ಇತ್ತೀಚೆಗೆ ಹರಿಬಿಟ್ಟಿದ್ದರು. ಇದರಲ್ಲಿ ಹುರುಳಿಲ್ಲ ಎಂದು ಕತ್ರಿನಾ ಕೈಫ್ ತಂಡದವರು ಸ್ಪಷ್ಟಪಡಿಸಿದ್ದರು. ಈಗ ರೋಕಾ ಕಾರ್ಯಕ್ರಮದ ಸುದ್ದಿ ಹರಿದಾಡಿದೆ.
ಕತ್ರಿನಾ ಹಾಗೂ ವಿಕ್ಕಿ ನಿರ್ದೇಶಕ ಕಬೀರ್ ಖಾನ್ ಮನೆಯಲ್ಲಿ ರೋಕಾ ಕಾರ್ಯಕ್ರಮ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇಬ್ಬರೂ ಒಂದೇ ಕಾರಿನಲ್ಲಿ ತೆರಳಿದರೆ ಅನುಮಾನ ಬರುತ್ತದೆ ಎನ್ನುವ ಕಾರಣಕ್ಕೆ ಇಬ್ಬರೂ ಬೇರೆಬೇರೆ ಕಾರಿನಲ್ಲಿ ತೆರಳಿದ್ದಾರೆ. ಈ ಮೂಲಕ ಯಾರಿಗೂ ಅನುಮಾನ ಬರದಂತೆ ಇವರು ನೋಡಿಕೊಂಡಿದ್ದಾರೆ. ಆದರೆ, ಈ ವಿಚಾರ ಮಾಧ್ಯಮಗಳ ಕಿವಿಗೆ ಬೀಳದೇ ಉಳಿದಿಲ್ಲ.ಈ ಬಗ್ಗೆ ಈ ಜೋಡಿಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ.
ಇನ್ನು, ಈ ಕಾರ್ಯಕ್ರಮಕ್ಕೆ ವಿಕ್ಕಿ ಹಾಗೂ ಕತ್ರಿನಾ ಆಪ್ತರು ಮಾತ್ರ ಆಗಮಿಸಿದ್ದರು. ಯಾವುದೇ ಫೋಟೋ ಲೀಕ್ ಆಗದಂತೆ ನೋಡಿಕೊಳ್ಳಲು ಆದ್ಯತೆ ನೀಡಲಾಗಿದೆ. ಈ ಮೂಲಕ ತುಂಬಾನೇ ಖಾಸಗಿತನ ಕಾಪಾಡಿಕೊಂಡಿದೆ ಈ ಜೋಡಿ. ಡಿಸೆಂಬರ್ ತಿಂಗಳಲ್ಲಿ ಇಬ್ಬರೂ ಅದ್ದೂರಿಯಾಗಿ ಮದುವೆ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಈ ವಿಚಾರವನ್ನು ಅವರು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಈ ಕುರಿತು ನಾನಾ ಸುದ್ದಿಗಳು ಬಿತ್ತರ ಆಗುತ್ತಿವೆ. ಈ ಕುರಿತು ಇವರಿಂದ ಸ್ಪಷ್ಟನೆ ಸಿಕ್ಕಿಲ್ಲ.
ಇದನ್ನೂ ಓದಿ: ‘ನಿನಗೆ ಏನಾಗಬಹುದು ಎಂದು ಯೋಚಿಸು’; ವಿಕ್ಕಿ ಮದುವೆ ಆಗಲು ಹೊರಟ ಕತ್ರಿನಾಗೆ ಸಲ್ಲು ಸಲಹೆ?