ಉಡುಪಿ: ಸದ್ಯ ಕೊರೊನಾ ಕಾರಣದಿಂದ ರಾಜ್ಯವೇ ಲಾಕ್ಡೌನ್ ಆಗಿದೆ.. ಕೆಲ್ಸ ಇಲ್ಲ ಅಂತ ಅನೇಕ ಮಂದಿ ಯುವಕರು ಮನೆ ಸೇರಿದ್ದಾರೆ.. ಈ ನಡುವೆ ಜಿಲ್ಲೆಯ ಯುವಕರ ತಂಡವೊಂದು ಲಾಕ್​ಡೌನ್​ ಸಮಯವನ್ನೇ ಸದುಪಯೋಗಪಡಿಸಿಕೊಂಡು, ಬಡ ಮಹಿಳೆಯರೊಬ್ಬರಿಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ.

ಮಲ್ಪೆ ಪಡುಕೆರೆಯ ಜಲಜಕ್ಕ ಎಂಬುವವರ ಮುರುಕಲು ಗುಡಿಸಲು ಮಳೆ ನೀರು ಸೋರುತ್ತಿತ್ತು. ಹೀಗಾಗಿ ಟಾರ್ಪಲ್ ಹಾಕಲಾಗಿತ್ತು. ಅದೂ ಕೂಡ ಹರಿದು ಹೋಗಿತ್ತು. ಇಂದೋ.. ಇಂಥ ಪುಟ್ಟ ಗುಡಿಸಲಲ್ಲೇ ಜಲಜಾ ಕಳೆದ ಇಪ್ಪತ್ತು ವರುಷಗಳಿಂದ ತಮ್ಮ ಪತಿ ಜೊತೆ ವಾಸ ಮಾಡುತ್ತಿದ್ರು. ಅನಾರೋಗ್ಯದ ಕಾರಣದಿಂದ ಜಲಜಕ್ಕನ‌ ಪತಿ ದುಡಿಮೆ ಮಾಡುವಂತಿರಲಿಲ್ಲ. ಮೀನು ವ್ಯಾಪಾರ ಮಾಡಿ ಜಲಜಕ್ಕ ಬದುಕು ಸಾಗಿಸುತ್ತಿದ್ದರು. ಇದೀಗ, ಈ ಸ್ಥಿತಿಗೆ ಮನಕರಗಿದ ಸತ್ಯದ ತುಳುವೆರ್ ಎನ್ನುವ ಸಂಘಟನೆಯ ಯುವಕರೆಲ್ಲರೂ ಒಟ್ಟಾಗಿ ಜಲಜಕ್ಕನಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ಸದ್ಯ, ಜಲಜಕ್ಕ ಹೊಸ ಮನೆಗೆ ಕಾಲಿಟ್ಟಿದ್ದು, ಲಾಕ್ ಡೌನ್ ಸಮಯದಲ್ಲಿ ಸಾಮಾಜಿಕ ಕಾರ್ಯವನ್ನು ಮಾಡಿದ ಸತ್ಯದ ತುಳುವೆರ್ ತಂಡಕ್ಕೆ ತಮ್ಮ ಧನ್ಯವಾದ ಹೇಳಿದ್ದಾರೆ.

The post ಗುಡಿಸಲು ಹೋಯ್ತು.. ಹೊಸಮನೆ ಬಂತು: ಬಡ ಕುಟುಂಬಕ್ಕೆ ಸೂರು ನಿರ್ಮಿಸಿಕೊಟ್ಟ ಯುವಕರ ತಂಡ appeared first on News First Kannada.

Source: newsfirstlive.com

Source link