ಚೆನ್ನೈ: ದೇಶದಲ್ಲಿ ಇಷ್ಟು ದಿನ ಅಬ್ಬರಿಸುತ್ತಿದ್ದ ಕೊರೊನಾ ಸೋಂಕಿನ ಎರಡನೇ ಅಲೆ ಈಗ ಕಡಿಮೆಯಾಗುತ್ತಿರುವ ಸೂಚನೆ ಸಿಕ್ಕಿದೆ. ಕೊರೊನಾದ ಪರಿಣಾಮಕಾರಿ ಸಂತಾನೋತ್ಪತ್ತಿ ಸಂಖ್ಯೆ ಅಥವಾ ಆರ್​ ವ್ಯಾಲ್ಯೂ ಭಾರೀ ಕುಸಿತ ಕಂಡಿದೆ.

ಹೌದು. ಸದ್ಯ ದೇಶದ  R-0/ R ವ್ಯಾಲ್ಯೂ  0.98ರಿಂದ 0.82ಕ್ಕೆ ಇಳಿಕೆಯಾಗಿದೆ. ಇದು ಕಳೆದ ವರ್ಷ ಕೊರೊನಾ ಶುರುವಾದಾಗಿನಿಂದ ಈವರೆಗೆ ದಾಖಲಾಗಿರೋ ಅತೀ ಕಡಿಮೆ ಆರ್​​ ವ್ಯಾಲ್ಯೂ.  ಕರ್ನಾಟಕದಲ್ಲೂ ಕೂಡ ಸಮಾಧಾನಕರ ಬೆಳವಣಿಗೆ ಕಂಡುಬಂದಿದ್ದು, 0.82ಕ್ಕೆ R ವ್ಯಾಲ್ಯೂ ಕುಸಿತ ಕಂಡಿದೆ. ಬೆಂಗಳೂರಿನಲ್ಲಿ 0.72ಕ್ಕೆ R ವ್ಯಾಲ್ಯೂ ತಲುಪಿದೆ. ಮುಂಬೈಗಿಂತಲೂ ಬೆಂಗಳೂರಿನಲ್ಲಿ R ವ್ಯಾಲ್ಯೂ ಕಡಿಮೆ ಆಗಿದೆ. ಮುಂಬೈನಲ್ಲಿ 1ರ ಆಸುಪಾಸಿನಲ್ಲಿ R ವ್ಯಾಲ್ಯೂ ಇದೆ ಅಂತ ಚೆನ್ನೈನ ಇನ್​ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ಮಾಹಿತಿ ನೀಡಿದೆ.

ಏನಿದು ಆರ್​ ವ್ಯಾಲ್ಯೂ?
ಕೋವಿಡ್​ನ ಪರಿಣಾಮಕಾರಿ ಸಂತಾನೋತ್ಪತ್ತಿ ಸಂಖ್ಯೆಯ ಸೂಚಕವೇ ಆರ್​​ ವ್ಯಾಲ್ಯೂ. ಅಂದ್ರೆ ಎಷ್ಟು ವೇಗವಾಗಿ ಸೋಂಕು ಹರಡುತ್ತಿದೆ ಎಂಬುದನ್ನ ಸೂಚಿಸುವ ಇಂಡಿಕೇಟರ್ ಇದಾಗಿದೆ. ಆರ್​ ವ್ಯಾಲ್ಯೂ ಲೆಕ್ಕಾಚಾರ, ದೇಶದಲ್ಲಿ ವರದಿಯಾಗುತ್ತಿರುವ ಸಕ್ರಿಯ ಪ್ರಕರಣಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ ಅನ್ನೋದನ್ನ ಗಮನಿಸುವುದು ಮುಖ್ಯ. ಸಾಂಕ್ರಾಮಿಕ ಶುರುವಾದಾಗಿನಿಂದ ಮಹಾರಾಷ್ಟ್ರದಲ್ಲಿ ಹೆಚ್ಚಿನ ಕೇಸ್​ ವರದಿಯಾಗ್ತಿದ್ದರಿಂದ ಅಲ್ಲಿನ ಆರ್​​ ವ್ಯಾಲ್ಯೂವೇ ದೇಶದ ಆರ್​ ವ್ಯಾಲ್ಯೂ ಆಗಿ ಪ್ರತಿಬಿಂಬಿತವಾಗ್ತಿತ್ತು.

ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯ ಸಂಶೋಧಕ ಸೀತಭ್ರಾ ಸಿನ್ಹಾ ಅವರ ಪ್ರಕಾರ, ಭಾರತದ ಆರ್ ವ್ಯಾಲ್ಯೂ ಮೇ 11ರ ವೇಳೆಗೆ 0.98ಕ್ಕೆ ಇಳಿದಿತ್ತು. ಹಾಗಂತ ನಾವು ಮೈಮರೆಯೋ ಹಾಗಿಲ್ಲ. ಹೆಚ್ಚಿನ ಆರ್​​ ವ್ಯಾಲ್ಯೂ ಇರೋ ಕೆಲ ರಾಜ್ಯಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಮತ್ತೆ ಉಲ್ಭಣವಾದ್ರೆ ಮತ್ತೆ ಈ​ ವ್ಯಾಲ್ಯೂ 1ಕ್ಕಿಂತ ಜಾಸ್ತಿಯಾಗಬಹುದು ಎಂದು ಅವರು ಹೇಳಿದ್ದರು.

 

The post ಗುಡ್​ನ್ಯೂಸ್​​: ದೇಶದಲ್ಲಿ ಕೊರೊನಾ ಶುರುವಾದಾಗಿಂದ ಅತೀ ಕಡಿಮೆಗೆ ಕುಸಿದ ‘R ವ್ಯಾಲ್ಯೂ’ appeared first on News First Kannada.

Source: newsfirstlive.com

Source link