ಬೆಳಗಾವಿ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​ ಭಾರೀ ಇಳಿಕೆ ಕಂಡಿದೆ. ಜಿಲ್ಲಾಡಳಿತ ಒಂದು ವಾರದ ಕೊರೊನಾ ಅಂಕಿ ಸಂಖ್ಯೆ ಬಿಡುಗಡೆ ಮಾಡಿದೆ.

ಕಳೆದ ವಾರ 21.72ರಷ್ಟಿದ್ದ ಪಾಸಿಟಿವಿಟಿ ರೇಟ್ ಈಗ 8.91ಕ್ಕೆ ಇಳಿಕೆಯಾಗಿದೆ. ಆದ್ರೆ ಮರಣ ಪ್ರಮಾಣ ಶೇಕಡಾ 1.16ಕ್ಕೆ ಏರಿಕೆಯಾಘಿದ್ದು, ಕಳವಳ ಮೂಡಿಸಿದೆ. ಕಳೆದ ವಾರ 170 ಜನ ಮೃತಪಟ್ಟರೆ, ಈ ವಾರ 313 ಸೋಂಕಿತರ ಸಾವಾಗಿದೆ.

ಗುಣಮುಖರಾದವರ ಸಂಖ್ಯೆ ಕಳೆದ ವಾರ ಶೇ. 70.3 ಇತ್ತು. ಈ ವಾರ 86.68ಕ್ಕೆ ಏರಿಕೆಯಾಗಿದೆ.
ಸಕ್ರಿಯ ಕೋವಿಡ್​ ಪ್ರಕರಣಗಳ ಸಂಖ್ಯೆಯೂ ಇಳಿಕೆಯಾಗಿದ್ದು, ಕಳೆದ ವಾರ 17,908 ಇದ್ದ ಸಕ್ರಿಯ ಕೇಸ್​​ಗಳು ಈ ವಾರ 8,884ಕ್ಕೆ ಇಳಿಕೆಯಾಗಿದೆ.

The post ಗುಡ್​ ನ್ಯೂಸ್​: ಬೆಳಗಾವಿಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್​ ಭಾರೀ ಇಳಿಕೆ appeared first on News First Kannada.

Source: newsfirstlive.com

Source link