ಗುಣವಾಗದ ಕೊರೊನಾ ಸೋಂಕು; ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್​ ಪುತ್ರ ರಾಮು ಕಣಗಾಲ್​ ಸಾವು​

ಗುಣವಾಗದ ಕೊರೊನಾ ಸೋಂಕು; ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್​ ಪುತ್ರ ರಾಮು ಕಣಗಾಲ್​ ಸಾವು​

ಸ್ಯಾಂಡಲ್​ವುಡ್​ನ ಹಿರಿಯ ಹಾಗೂ ದಿಗ್ಗಜ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್​ ಪುತ್ರ ರಾಮು ಕಣಗಾಲ್​​ ಇಂದು ನಿಧನರಾಗಿದ್ದಾರೆ. ಕೊರೊನಾ ಸೋಂಕಿಗೆ ತುತ್ತಾಗಿದ್ದ ರಾಮು ಕಣಗಾಲ್​ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆದ ಐದು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೇ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

1967ರಲ್ಲಿ ಜನಿಸಿದ್ದ ರಾಮು ಅವರಿಗೆ 54 ವರ್ಷ ವಯಸ್ಸಾಗಿತ್ತು. ರಾಮು ಅವರು ಖ್ಯಾತ ನೃತ್ಯ ನಿರ್ದೇಶಕರಾಗಿದ್ದರು. ಬೆಂಗಳೂರಿನಲ್ಲಿ ಕಣಗಾಲ್​ ನೃತ್ಯಾಲಯ ಅನ್ನೋ ಹೆಸರಿನಲ್ಲಿ ನೃತ್ಯ ಶಿಕ್ಷಣ ನೀಡುತ್ತಿದ್ದರು.

ಪುಟ್ಟಣ್ಣ ಕಣಗಾಲ್ ಅವರಿಗೆ ಐದು ಜನ ಮಕ್ಕಳಲ್ಲಿ ರಾಮು ಕಣಗಾಲ್ ನಾಲ್ಕನೇ ಮಗ. ಸರ್ವತ್ತಮ, ಭುವನೇಶ್ವರಿ, ರಾಜೇಶ್ವರಿ, ರಾಮು ಹಾಗೂ ತ್ರಿವೇಣಿ ಐವರು ಮಕ್ಕಳು. ರಾಮು ಹಾಗೂ ತ್ರಿವೇಣಿ ಇಬ್ಬರು ಕ್ಲಾಸಿಕಲ್ ಡ್ಯಾನ್ಸರ್ಸ್​. ಪುಟ್ಟಣ್ಣ ಕಣಗಾಲ್ ಇದ್ದಾಗಲೇ ರಾಮು ಮತ್ತು ತ್ರಿವೇಣಿಯವರು ಕಣಗಾಲ್ ನೃತ್ಯಾಲಯ ಅನ್ನೋ ನೃತ್ಯ ಶಾಲೆ ಶುರು ಮಾಡಿದ್ರು. ಇಬ್ಬರೂ ಚೆನ್ನೈನಲ್ಲಿ ನೃತ್ಯ ಶಿಕ್ಷಣ ಪಡೆದುಕೊಂಡಿದ್ರು. ತಮ್ಮ ಕಡೆಯ ದಿನಗಳವರೆಗೂ ರಾಮು ಅವರು ನೃತ್ಯಕಲೆಯನ್ನೇ ನಂಬಿಕೊಂಡು ಬದುಕಿದ್ದವರು.

The post ಗುಣವಾಗದ ಕೊರೊನಾ ಸೋಂಕು; ದಿಗ್ಗಜ ನಿರ್ದೇಶಕ ಪುಟ್ಟಣ್ಣ ಕಣಗಾಲ್​ ಪುತ್ರ ರಾಮು ಕಣಗಾಲ್​ ಸಾವು​ appeared first on News First Kannada.

Source: newsfirstlive.com

Source link