ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್; 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಬರೆದಿದ್ದ ಪತ್ರ ಲಭ್ಯ | Contractor Santosh Patil suicide case; A letter from Asha Aihole with a list of 108 works found


ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್; 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಬರೆದಿದ್ದ ಪತ್ರ ಲಭ್ಯ

ಆಶಾ ಐಹೊಳೆ

ಬೆಳಗಾವಿ: ಜಿಲ್ಲೆಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಕೇಸ್‌ಗೆ ದಿನಕ್ಕೊಂದು ತಿರುವು ಸಿಗ್ತಿದೆ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಳಗಾವಿಯಲ್ಲೇ ಠಿಕಾಣಿ ಹೂಡಿರೋ ಉಡುಪಿ ಪೊಲೀಸ್‌ ತಂಡ, ಏಪ್ರಿಲ್ 20ರಂದು ಹಿಂಡಲಗಾ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾಗೇಶ್‌ನನ್ನ ವಿಚಾರಣೆ ನಡೆಸಿತ್ತು. ಈ ವೇಳೆ ಕೆಲ ದಾಖಲೆ ವಶಪಡಿಸಿಕೊಂಡಿದ್ದು ಈ ಪೈಕಿ ಸಿಕ್ಕಿರೋ ಅದೊಂದು ದಾಖಲೆ ಕೇಸ್‌ಗೆ ತಿರುವು ನೀಡಿದೆ. ಸಂತೋಷ್‌ ಪಾಟೀಲ್‌ಗೆ ಹಣ ನೀಡಿರೋ ನಾಗೇಶ್‌ ಅದಕ್ಕೆ ಪ್ರತಿಯಾಗಿ ಸಂತೋಷ್‌ ಪಾಟೀಲ್‌ನ ಮನೆಯನ್ನ 32 ಲಕ್ಷ ರೂಪಾಯಿಗೆ ಜಿಪಿಎ ಮಾಡಿಕೊಂಡಿದ್ದಾರೆ. ಒಂದ್ಕಡೆ ಮನೆ ಜಿಪಿಎ ಮತ್ತೊಂದ್ಕಡೆ ಕಾಮಗಾರಿಯ ಬಿಲ್‌ ಆಗದೇ ಇರೋದು. ಹೀಗೆ ಒತ್ತದಲ್ಲಿದ್ದ ಸಂತೋಷ್‌ ಆತ್ಮಹತ್ಯೆ ಮಾಡಿಕೊಂಡನಾ ಅನ್ನೋ ಅನುಮಾನ ಶುರುವಾಗಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ನಾಗೇಶ್‌, ಜಿಪಿಎಗೂ ಕಾಮಗಾರಿಗೂ ಯಾವ ಸಂಬಂಧ ಇಲ್ಲ ಅಂತಿದ್ದಾರೆ. ಇನ್ನು ಮತ್ತೊಂದು ಕಡೆ 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಬರೆದಿದ್ದ ಅನುಮೋದನೆಗಾಗಿ ಆದೇಶಿಸಲಾಗಿದೆ ಎನ್ನಲಾದ ಸಹಿ ಪತ್ರ ಲಭ್ಯವಾಗಿದೆ.

ಗ್ರಾಮೀಣಾಭಿವೃದ್ಧಿ & ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅಂದಿನ ಜಿ.ಪಂ.ಅಧ್ಯಕ್ಷೆ ಬರೆದಿದ್ದ ಪತ್ರ ಪೊಲೀಸರಿಗೆ ಲಭ್ಯವಾಗಿದೆ. 2021ರ ಫೆಬ್ರವರಿ 15ರಂದು ಆಗಿನ ಬೆಳಗಾವಿ ಜಿ.ಪಂ.ಅಧ್ಯಕ್ಷೆ ಆಶಾ ಐಹೊಳೆ ಹಿಂಡಲಗಾ ಗ್ರಾಮದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿಗೆ ವಿಶೇಷ ಅನುದಾನ ಮಂಜೂರು ಮಾಡುವಂತೆ ಪತ್ರ ಬರೆದಿದ್ದರು. 2021ರ ಫೆ.15ರಂದು 108 ಕಾಮಗಾರಿಗಳ ಪಟ್ಟಿ ಸಮೇತ ಆಶಾ ಐಹೊಳೆ ಪತ್ರ ಬರೆದಿದ್ದರು. ಅನುಮೋದನೆಗಾಗಿ ಆದೇಶಿಸಲಾಗಿದೆ ಎಂದು 2022ರ ಫೆಬ್ರವರಿ 26ರಂದು ಸಹಿ ಮಾಡಿರುವ ಲೆಟರ್ ಲಭ್ಯವಾಗಿದೆ. ಮಾ.5ರಂದು ಆದೇಶದ ಪ್ರತಿ ನೀಡಲಾಗುವುದು ಎಂದು ಕೈಬರಹದಲ್ಲಿ ಬರೆದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಸೀಲ್ ಹಾಕಲಾಗಿದೆ.

TV9 Kannada


Leave a Reply

Your email address will not be published.