ಪ್ರಾತಿನಿಧಿಕ ಚಿತ್ರ
ತುಮಕೂರು: ಪ್ರೀತಿಸಿ ಮದುವೆಯಾಗಿದ್ದ ತನ್ನ ಪತ್ನಿಯನ್ನು ಕೊಲೆಗೈದಿದ್ದ ಆರೋಪಿಗೆ 6 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿವಿ ಚಂದ್ರಶೇಖರ್ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮುಸುಕೊಂಡ್ಲಿ ಗ್ರಾಮದ ಗೋವಿಂದರಾಜು ಹಾಗೂ ದೊಡ್ಡ ಗುಣಿ ಗ್ರಾಮದ ತುಳಸಮ್ಮ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ತುಳಸಮ್ಮನ ನಡವಳಿಕೆ ಸರಿಯಿಲ್ಲ ಅಂತಾ ಪತಿ ಪದೇ ಪದೇ ಜಗಳವಾಡುತ್ತಿದ್ದ. ಹೀಗೆ ಜಗಳವಾಡುವಾಗ 2015 ರಲ್ಲಿ ಜಮೀನು ಕೆಲಸಕ್ಕೆಂದು ಹೋದಾಗ ತುಳಸಮ್ಮ ಹಸು ಹೊಡೆದುಕೊಳ್ಳಲಿಲ್ಲ ಅಂತಾ ಕುಡುಗೋಲಿನಿಂದ ಹೊಡೆದಿದ್ದಾನೆ.
ಬಳಿಕ ತೀವ್ರ ರಸ್ತಸ್ರಾವದಿಂದ ಒದ್ದಾಡುತ್ತಿದ್ದ ತುಳಸಮ್ಮಳಿಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಈ ಬಗ್ಗೆ ಚೇಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಕೊಲೆ ಆರೋಪ ಸಾಬೀತಾದ ಹಿನ್ನೆಲೆ ಆರೋಪಿ ಗೋವಿಂದರಾಜುಗೆ ಕೋರ್ಟ್ ಶಿಕ್ಷೆ ಪ್ರಕಟಿಸಿದೆ. ತುಮಕೂರು 6 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆದೇಶ ನೀಡಿದೆ. ನ್ಯಾಯಾದೀಶ ಜಿವಿ ಚಂದ್ರಶೇಖರ್ ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿದ್ದಾರೆ.
ಪಾಲಿಕೆ ಸಿಬ್ಬಂದಿಗೆ ನಾಯಿ ಕಡಿತ:
ತುಮಕೂರು ನಗರದಲ್ಲಿ ಎಲ್ಲೆಡೆ ಬೀದಿನಾಯಿಗಳ ಹಾವಳಿ ಹಾಗೂ ಹಂದಿಹಳ ಹಾವಳಿ ಹೆಚ್ಚಾಗಿದೆ, ಮಹಾನಗರ ಪಾಲಿಕೆಯಾಗಿರುವ ತುಮಕೂರು ನಗರದಲ್ಲಿ ನಾಯಿಗಳ ಹಾವಳಿ ಹೆಚ್ಚಿದ್ದು ನಗರವಾಸಿಗಳು ಎಷ್ಟೇ ಮನವಿ ಮಾಡಿದರೂ ಪಾಲಿಕೆ ಮಾತ್ರ ನಾಯಿಗಳನ್ನ ಹಂದಿಗಳಿಗೆ ಕಡಿವಾಣ ಹಾಕಿಲ್ಲ ಅಂತಾ ಆರೋಪ ಕೇಳಿಬಂದಿದೆ.
ಹೀಗಿರುವಾಗ ಮಹಾನಗರ ಪಾಲಿಕೆ ಆವರಣದಲ್ಲೇ ಬೀದಿ ನಾಯಿಯೊಂದು ಪಾಲಿಕೆ ಸಿಬ್ಬಂದಿಗೆ ಕಚ್ಚಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಕಳೆದ ಎರಡು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ವಿಚಾರ ಬಹಿರಂಗವಾದರೆ ಎಲ್ಲಿ ಪಾಲಿಕೆಗೆ ಮುಜುಗರವಾದಿತೋ ಅಂತಾ ವಿಚಾರ ಗೌಪ್ಯವಾಗಿರಿಸಲಾಗಿದೆ. ಆದರೆ ಏನೇ ಪ್ರಯತ್ನ ಪಟ್ಟರೂ ಕಳೆದ ಎರಡು ದಿನಗಳಿಂದ ಪಾಲಿಕೆ ಹೊರಗೆ ಹಾಗೂ ಒಳಗೆ ಬಹಿರಂಗವಾಗಿ ಚರ್ಚೆಗೆ ಗ್ರಾಸವಾಗಿದೆ. ಪಾಲಿಕೆ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಪ್ರಥಮ ದರ್ಜೆ ಸಹಾಯಕ ಭೋಜರಾಜ ಎಂಬುವರು ಕೆಲಸ ಮುಗಿಸಿ ಸಂಜೆ 5 ಗಂಟೆಗೆ ಹೊರಡಲು ಬೈಕ್ ಬಳಿ ಹೋಗುವಾದ ಧೀಡಿರನೇ ಬೀದಿ ನಾಯಿಯೊಂದು ಬಂದು ಕಾಲನ್ನ ಕಚ್ಚಿದೆ ಎನ್ನಲಾಗಿದೆ. ಸದ್ಯ ಸಿಬ್ಬಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಘಟನೆಯಿಂದ ಸಂಜೆ ವೇಳೆ ತಿರುಗಾಡಲು ಭಯಪಡುವಂತಾಗಿದೆ.
-ಮಹೇಶ್, ಟಿವಿ9, ತುಮಕೂರು