ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಅವ್ಯವಹಾರ ಪ್ರಕರಣ; ಇಡಿ ಅಧಿಕಾರಿಗಳಿಂದ ಬ್ಯಾಂಕ್ ಮ್ಯಾನೇಜರ್​ ಬಂಧನ | Guru Raghavendra Co Operative bank Manager arrested in Money Fraud Case Bengaluru Crime News


ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಅವ್ಯವಹಾರ ಪ್ರಕರಣ; ಇಡಿ ಅಧಿಕಾರಿಗಳಿಂದ ಬ್ಯಾಂಕ್ ಮ್ಯಾನೇಜರ್​ ಬಂಧನ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಗುರುರಾಘವೇಂದ್ರ ಕೋ-ಆಪರೇಟಿವ್​ ಬ್ಯಾಂಕ್ ಮ್ಯಾನೇಜರ್ ಬಂಧನ ಮಾಡಲಾಗಿದೆ. ಇಡಿ ಅಧಿಕಾರಿಗಳಿಂದ ಬ್ಯಾಂಕ್ ಮ್ಯಾನೇಜರ್​ ಕೆ. ರಾಮಕೃಷ್ಣ ಬಂಧಿಸಲಾಗಿದೆ. ಸುಮಾರು ₹892.85 ಕೋಟಿ ವಂಚಿಸಿರುವ ಆರೋಪದಡಿ ಅರೆಸ್ಟ್​ ಮಾಡಲಾಗಿದೆ, ನಕಲಿ ದಾಖಲೆ ಸೃಷ್ಟಿಸಿ 800 ಕೋಟಿಗೂ ಅಧಿಕ ಸಾಲ ನೀಡಲಾಗಿತ್ತು. ಪ್ರಕರಣ ಸಂಬಂಧ ಬ್ಯಾಂಕ್ ಮ್ಯಾನೇಜರ್ ಬಂಧಿಸಲಾಗಿದೆ.

ಶ್ರೀ ಗುರು ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಬಹುಕೋಟಿ ಅವ್ಯವಹಾರ ಎದುರಿಸುತ್ತಿತ್ತು. ಇಡಿ ತನಿಖೆ ವೇಳೆ ಹೆಚ್ಚಿನ ಮಾಹಿತಿ ಬೆಳಕಿಗೆ ಬಂದಿತ್ತು. ನಕಲಿ ದಾಖಲೆಗಳ ಅಧಾರದ ಮೇಲೆ 892.85 ಕೋಟಿ ರೂ. ಸಾಲ ಕೊಟ್ಟಿರುವುದು ತನಿಖೆಯಲ್ಲಿ ಹೊರಬಿದ್ದಿತ್ತು. ಬ್ಯಾಂಕ್‌ನ ಅಧ್ಯಕ್ಷ ಕೆ.ರಾಮಕೃಷ್ಣ ಫೆಬ್ರವರಿ 18 ರ ವರೆಗೆ ಇಡಿ ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ 1,544.43 ಕೋಟಿ ರೂ.ಗಳಷ್ಟು ಸಾಲಗಳನ್ನು ನೀಡಿರುವ ಬ್ಯಾಂಕ್, ನಕಲಿ ದಾಖಲೆಗಳ ಅಧಾರದ ಮೇಲೆ 892.85 ಕೋಟಿ ರೂಪಾಯಿ ಸಾಲ ನೀಡಿರುವುದು ಇಡಿ ತನಿಖೆ ವೇಳೆ ಪತ್ತೆಯಾಗಿದೆ.

ಭ್ರಷ್ಟಾಚಾರದ ಬಗ್ಗೆ ಡಿಸಿಗೆ ದೂರು ನೀಡಿದ್ದಕ್ಕೆ ಗೂಂಡಾಗಿರಿ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಬೋಡಕೇನಟ್ಟಿ ಗ್ರಾಮದಲ್ಲಿ ನಡೆದಿದೆ. ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಮನೆಯ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಶೆಟ್ಟು ಕಾಳಪ್ಪ ನಾಯಕ್ ಹಾಗೂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಲಾಗಿದೆ. ಗ್ರಾ.ಪಂ ಅಧ್ಯಕ್ಷ ಸುರೇಶ್ ಜಾಧವ್, ಬೆಂಬಲಿಗರಿಂದ ಹಲ್ಲೆ ಮಾಡಲಾಗಿದೆ.

ನೂರಕ್ಕೂ ಹೆಚ್ಚು ಜನರು ಮನೆಗೆ ನುಗ್ಗಿ ಹಲ್ಲೆಗೈದ ಆರೋಪ ಕೇಳಿಬಂದಿದೆ. ನೆರೆ ಸಂತ್ರಸ್ತರ ವಸತಿ ಯೋಜನೆಯಲ್ಲಿ ಗೋಲ್‌ಮಾಲ್‌ ಮಾಡಲಾಗಿದ್ದು, ಹಣ ಪಡೆದು ಮನೆಗಳನ್ನ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ನಿನ್ನೆ ಶೆಟ್ಟು ಕಾಳಪ್ಪ ನಾಯಕ್ ಡಿಸಿಗೆ ದೂರು ನೀಡಿದ್ದರು. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇತರ ಅಪರಾಧ ಸುದ್ದಿಗಳು

ಬೆಂಗಳೂರು: ಬ್ರೆಜಿಲ್‌ನಿಂದ ಕೊಕೇನ್ ತಂದು ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಚಿಬುಯಿಜ್ ಚಿನೋಸೋ ಎಂಬಾತನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 1 ಕೋಟಿ ಮೌಲ್ಯದ 910 ಗ್ರಾಂ ಕೊಕೇನ್, ತೂಕ ಮಾಡುವ ಯಂತ್ರ, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಬೆಂಗಳೂರು: ಸಿಸಿಬಿ ಪೊಲೀಸರಿಂದ ಗೂಂಡಾ ಕಾಯ್ದೆಯಡಿ ಕುಖ್ಯಾತ ರೌಡಿಶೀಟರ್ ಶಿವರಾಜ ಅಲಿಯಾಸ್ ಕುಳ್ಳ ಶಿವನ ಬಂಧನ ಮಾಡಲಾಗಿದೆ. ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ನಿರಂತರವಾಗಿ ಕೊಲೆ, ಕೊಲೆಯತ್ನ ಪ್ರಕರಣಗಳಲ್ಲಿ ಭಾಗಿ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

ನೆಲಮಂಗಲ: ನೆಲಮಂಗಲ ತಾಲೂಕಿನ ಮಾದೇನಹಳ್ಳಿಯಲ್ಲಿ ಹುಲ್ಲಿನ ಬಣವೆಗೆ ಬೆಂಕಿ ಹಚ್ಚಿ ಪರಾರಿಯಾಗುತ್ತಿದ್ದ ರುದ್ರೇಶ್​ ಎಂಬುವವನಿಗೆ ಗ್ರಾಮಸ್ಥರಿಂದ ಧರ್ಮದೇಟು ಸಿಕ್ಕ ಘಟನೆ ನಡೆದಿದೆ. ಮಹದೇವಯ್ಯ ಎಂಬುವವರ ₹2 ಲಕ್ಷ ಬೆಲೆಬಾಳುವ ಬಣವೆ ಭಸ್ಮ ಮಾಡಲಾಗಿದೆ. ಆರೋಪಿ ರುದ್ರೇಶ್​​ನನ್ನ ದಾಬಸ್​ಪೇಟೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ರಾಹುತ್ತನಹಳ್ಳಿ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬೋರ್​ವೆಲ್​ ಲಾರಿ ರಸ್ತೆಗುಂಡಿಗೆ ಉರುಳಿದ ಘಟನೆ ನಡೆದಿದೆ. ಗಾಯಗೊಂಡಿರುವ ಲಾರಿ ಚಾಲಕ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಾದನಾಯಕ‌ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ಅಕ್ಕಮಹಾದೇವಿ ಲೇಔಟ್​ನಲ್ಲಿ ನೇಣು ಬಿಗಿದುಕೊಂಡು ಅಂಬಾರಾಯ (30) ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಗ್​​ ಬಜಾರ್​ನಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅಂಬಾರಾಯ ಸಾವನ್ನಪ್ಪಿದ್ದಾರೆ. ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

TV9 Kannada


Leave a Reply

Your email address will not be published. Required fields are marked *