ಭಾರತೀಯ ಕ್ರಿಕೆಟ್ನಲ್ಲಿ ಹಿಟ್ಮ್ಯಾನ್ ರೋಹಿತ್ ಶರ್ಮಾ ನಾಯಕತ್ವದ ಶಕೆ ಆರಂಭವಾಗಿದೆ. ರೋಹಿತ್ ಕ್ಯಾಪ್ಟೆನ್ಸಿಯಲ್ಲಿ ಏಕದಿನ ಹಾಗೂ ಟಿ-20 ಸರಣಿಯಲ್ಲಿ ಕೆರಿಬಿಯನ್ ಪಡೆಗೆ ವೈಟ್ ವಾಶ್ ಮಾಡಿದ ಟೀಮ್ ಇಂಡಿಯಾ, ಐಸಿಸಿ ಟಿ-20 ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಆದ್ರೆ, ಇಷ್ಟಕ್ಕೆ ಈ ಗುರು- ಶಿಷ್ಯರ ಟಾಸ್ಕ್ ಮುಗಿದಿಲ್ಲ. ಮುಂದಿನ ದಿನಗಳಲ್ಲಿ ಇವ್ರಿಬ್ಬರಿಗೆ ಭಾರಿ ಸವಾಲುಗಳನ್ನ ಎದುರಿಸಬೇಕಿದೆ.
ವಿಶ್ವಕಪ್ ಬರ ನೀಗಿಸಬೇಕಿದೆ ರೋಹಿತ್-ರಾಹುಲ್..!
ಈ ವರ್ಷ ಟೀಮ್ ಇಂಡಿಯಾ ಸಾಲು ಸಾಲು ಸರಣಿಗಳನ್ನ ಆಡಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಟಿ-20 ವಿಶ್ವಕಪ್ ಯುದ್ಧವೂ ಇದೇ ವರ್ಷ ನಡೆಯಲಿದೆ. 2013ರ ಚಾಂಪಿಯನ್ಸ್ ಟ್ರೋಪಿ ನಂತರ ಟೀಮ್ ಇಂಡಿಯಾ, ಒಂದೇ ಒಂದು ಐಸಿಸಿ ಕಪ್ ಮುಡಿಗೇರಿಸಿಕೊಂಡಿಲ್ಲ. ಹೀಗಾಗಿ ಐಸಿಸಿ ಇವೆಂಟ್ಗಳೇ ರೋಹಿತ್-ರಾಹುಲ್ ಕಾಂಬಿನೇಷನ್ಗೆ ಬಿಗ್ ಚಾಲೆಂಜ್. 20-20 ವಿಶ್ವಕಪ್ ಜತೆಗೆ ಮುಂದಿನ ವರ್ಷ ನಡೆಯೋ ಏಕದಿನ ವಿಶ್ವಕಪ್ ಟೂರ್ನಿ, ಈ ಜೋಡಿಗೆ ಮತ್ತೊಂದು ಸವಾಲಾಗಲಿದೆ.
ಕೀ ಪ್ಲೇಯರ್ಸ್ ಸುರಕ್ಷತೆಗೆ ನೀಡಬೇಕಿದೆ ಆದ್ಯತೆ..!
ಯೆಸ್, ಇತ್ತೀಚಿನ ದಿನಗಳಲ್ಲಿ ಇಂಜುರಿ ಸಮಸ್ಯೆ ಟೀಮ್ ಇಂಡಿಯಾಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇಂಜುರಿಯಿಂದಾಗಿ ತಂಡದ ಸ್ಟಾರ್ ಪ್ಲೇಯರ್ಸ್, ತಂಡದಿಂದ ಹೊರಗುಳಿಯುತ್ತಿದ್ದಾರೆ. ಆಲ್ರೌಂಡರ್ ರವೀಂದ್ರ ಜಡೇಜಾ ಫಿಟ್ನೆಸ್ ಕಾರಣದಿಂದಾಗಿ ಎರಡು ತಿಂಗಳ ಕಾಲ ತಂಡದಿಂದ ದೂರ ಉಳಿದಿದ್ರು. ಕೆ.ಎಲ್ ರಾಹುಲ್ ಕೂಡ ಇದೇ ಕಾರಣಕ್ಕೆ ಲಂಕಾ ವಿರುದ್ಧದ ಟಿ-20 ಸರಣಿಗೆ ಅಲಭ್ಯರಾಗಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್, ವೇಗಿ ದೀಪಕ್ ಚಹರ್ ಸಹ ಸದ್ಯ ಇದೇ ಪ್ರಾಬ್ಲಮ್ ಪೇಸ್ ಮಾಡ್ತಿದ್ದಾರೆ.
ಟೀಮ್ ಇಂಡಿಯಾದ ಐಸಿಸಿ ಟೈಟಲ್ನ ಬರ ನೀಗಬೇಕಾದ್ರೆ, ಆಟಗಾರರು ಅದರಲ್ಲೂ ಸ್ಟಾರ್ ಆಟಗಾರರು ಫಿಟ್ನೆಸ್ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಕ್ಯಾಪ್ಟನ್ ರೋಹಿತ್ ಹಾಗೂ ಕೋಚ್ ದ್ರಾವಿಡ್ ಹೆಚ್ಚು ಫೋಕಸ್ ಮಾಡಬೇಕಿದೆ. ಅಷ್ಟೇನೂ ಮಹತ್ವವಲ್ಲದ ಟೂರ್ನಿಗಳಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಆಟಗಾರರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಚಾನ್ಸ್ ನೀಡಿ, ಸೀನಿಯರ್ಸ್ಗಳ ವರ್ಕ್ ಲೋಡ್ ಕಡಿಮೆ ಮಾಡಬೇಕಿದೆ.
ಕ್ಯಾಪ್ಟನ್ ರೋಹಿತ್ಗೂ ರೆಸ್ಟ್ ಅಗತ್ಯ..?
ರೋಹಿತ್ ಶರ್ಮಾ ಕ್ಯಾಪ್ಟೆನ್ಸಿ ಜತೆಗೂ ಬ್ಯಾಟಿಂಗ್ನಲ್ಲೂ ತಮ್ಮ ಖದರ್ ತೋರಿಸೋದು ತಂಡಕ್ಕೆ ಅಗತ್ಯ. ಮೂರು ಫಾರ್ಮೆಟ್ಗಳಿಗೂ ನಾಯಕರಾಗಿರೋದ್ರಿಂದ, ರೋಹಿತ್ ಹೆಚ್ಚಿನ ಪಂದ್ಯಗಳನ್ನ ಆಡಲಿದ್ದಾರೆ. ಇದರಿಂದ ಫಿಟ್ನೆಸ್ ಕೈ ಕೊಡೋ ಸಾಧ್ಯತೆ ಇರಲಿದೆ. ಇದರಿಂದಾಗಿ ರೋಹಿತ್ ಕೂಡ ಕೆಲ ಪಂದ್ಯಗಳಿಂದ ವಿಶ್ರಾಂತಿ ಪಡೆಯೋದು ಅನಿವಾರ್ಯ. ಅದೇನೆ ಇರಲಿ, ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕೋಚ್ ದ್ರಾವಿಡ್ ಈ ಸವಾಲುಗಳನ್ನ ಮೆಟ್ಟಿ ನಿಂತಲ್ಲಿ, ಭಾರತಕ್ಕೆ ಮತ್ತೊಂದು ವಿಶ್ವಕಪ್ಗೆ ಮುತ್ತಿಕ್ಕೋದ್ರಲ್ಲಿ ಅನುಮಾನವೇ ಇಲ್ಲ.
The post ಗುರು-ಶಿಷ್ಯರ ಮ್ಯಾಜಿಕ್ಗಾಗಿ ಕಾಯ್ತಿದ್ದಾರೆ ಫ್ಯಾನ್ಸ್.. ದ್ರಾವಿಡ್-ಶರ್ಮಾ ಮುಂದಿದೆ ಬಿಗ್ ಚಾಲೆಂಜ್..! appeared first on News First Kannada.