ಗುಲಾಬಿ, ಮಲ್ಲಿಗೆ, ಸೇವಂತಿಯನ್ನ ಕೇಳುವವರೇ ಇಲ್ಲ.. ಬೆಳೆದ ಹೂಗಳನ್ನ ರಸ್ತೆಗೆ ಸುರಿದ ರೈತರು

ಗುಲಾಬಿ, ಮಲ್ಲಿಗೆ, ಸೇವಂತಿಯನ್ನ ಕೇಳುವವರೇ ಇಲ್ಲ.. ಬೆಳೆದ ಹೂಗಳನ್ನ ರಸ್ತೆಗೆ ಸುರಿದ ರೈತರು

ಚಿತ್ರದುರ್ಗ: ಇತ್ತೀಚೆಗೆ ಕೋಲಾರದಲ್ಲಿ ಸರಿಯಾದ ಬೆಲೆ ಸಿಗದ ಹಿನ್ನೆಲೆ ಟೊಮ್ಯಾಟೋವನ್ನ ರಸ್ತೆಗೆ ಸುರಿದು ರೈತನೋರ್ವ ಆಕ್ರೋಶ ಹೊರಹಾಕಿದ್ದ. ಇದೀಗ ಕೋಟೆನಾಡಿನಲ್ಲೂ ಇಂಥದ್ದೇ ಘಟನೆ ನಡೆದಿದ್ದು ಬೆಳೆದ ಹೂವನ್ನು ಕೊಳ್ಳುವವರಿದಲ್ಲೇ ರೈತರು ತಾವು ಬೆಳೆದ ಹೂಗಳನ್ನು ರಸ್ತೆಗೆ ಚೆಲ್ಲಿದ್ದಾರೆ.

ಗುಲಾಬಿ, ಮಲ್ಲಿಗೆ, ಸುಗಂದರಾಜ, ಸೇವಂತಿ ಹೂವುಗಳನ್ನು ಬೆಳೆದ ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದ ರೈತರು ಕೊಳ್ಳುವವರಿಲ್ಲದ ಹಿನ್ನೆಲೆ ಬೆಳೆದ ಹೂಗಳನ್ನ ರಸ್ತೆಗೆ, ಬೇವನ ಮರದ ಬುಡಕ್ಕೆ ಸುರಿದಿದ್ದಾರೆ. ಇನ್ನು ಹೊಳಲ್ಕೆರೆ, ಹೊಸದುರ್ಗ ಭಾಗದ ತವಂದಿ, ತೇವಲಕಟ್ಟೆ ಗ್ರಾಮದ ಬೆಳಗಾರರ ಸ್ಥಿತಿಯೂ ಚಿಂತಾಜನಕವಾಗಿದ್ದು ಅಗತ್ಯವಿರುವ ಕಡೆಗೆ ಸಾಗಿಸಲು ಅವಕಾಶ ಮಾಡಿ ಕೊಡಬೇಕೆಂದು ಆಗ್ರಹಿಸಿ ಕಣ್ಣೀರು ಹಾಕಿದ್ದಾರೆ. ತಮಗಾಗಿರುವ ನಷ್ಟಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ.

The post ಗುಲಾಬಿ, ಮಲ್ಲಿಗೆ, ಸೇವಂತಿಯನ್ನ ಕೇಳುವವರೇ ಇಲ್ಲ.. ಬೆಳೆದ ಹೂಗಳನ್ನ ರಸ್ತೆಗೆ ಸುರಿದ ರೈತರು appeared first on News First Kannada.

Source: newsfirstlive.com

Source link