ಚೀನಾದ ಮುಖವಾಡ ಒಂದೊಂದಾಗಿ ಬಯಲಾಗುತ್ತಿದೆ. ವಿಶ್ವಕ್ಕೇ ಸಂಕಷ್ಟ ತಂದೊಡ್ಡಿದ ಕೊರೊನಾ ವೈರಸ್ ಚೀನಾದ ಲ್ಯಾಬ್ನಿಂದಲೇ ಬಂದದ್ದು ಅನ್ನೋದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತಿವೆ. ಇದರಿಂದಾಗಿ ಚೀನಾದ ಕುತಂತ್ರ ಬುದ್ಧಿ ಎಲ್ಲರಿಗೂ ಪರಿಚಯ ಆಗ್ತಾ ಇದೆ. ಇದೀಗ ಹೊಸದೊಂದು ವಿಡಿಯೋ ಬಿಡುಗಡೆಯಾಗಿದೆ. ಕೊರೊನಾ ಬರುವುದಕ್ಕೂ ಮೊದಲೇ ಚೀನಾ ಬಾವಲಿಯಲ್ಲಿದ್ದ ವೈರಸ್ ಅನ್ನು ಕಲೆ ಹಾಕಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಚೀನಾದ ಲ್ಯಾಬ್ನಲ್ಲಿ ಕೊರೊನಾ ವೈರಸ್ ಅಭಿವೃದ್ಧಿಪಡಿಸಲಾಗಿತ್ತು. ಅದು ಅತಂತ್ರ ಸ್ಥಿತಿಗೆ ತಲುಪಿದ ಮೇಲೆ ವೈರಸ್ ಅನ್ನು ಜಗತ್ತಿಗೆ ಬಿಡಲಾಗಿತ್ತು ಎನ್ನುವ ಮಾಹಿತಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಈ ಮಾಹಿತಿ ಸುಳ್ಳು, ಇದು ಚೀನಾದ ವಿರುದ್ಧ ನಡೆದ ಷಡ್ಯಂತ್ರ ಎಂದು ಚೀನಾ ವಾದಿಸಿತ್ತು. ಆದ್ರೆ ಇದರಲ್ಲಿ ಯಾವುದು ಸತ್ಯ? ನಿಜಕ್ಕೂ ಕೊರೊನಾವನ್ನ ಚೀನಾ ಲ್ಯಾಬ್ ನಲ್ಲಿ ಅಭಿವೃದ್ಧಿಪಡಿಸಲಾಗಿದ್ಯಾ? ಇಲ್ಲ ಇದು ನೈಸರ್ಗಿಕವಾಗಿ ಪ್ರಾಣಿಗಳಿಂದ ಮಾನವರಿಗೆ ಬಂದು ಬಿಡ್ತಾ ಅನ್ನೋದು ಕಳೆದ ವರ್ಷದಿಂದ ಗೊಂದಲವಾಗೇ ಉಳಿದಿದೆ.

ಆದ್ರೆ ಈ ಕೊರೊನಾ, ವುಹಾನ್ ವೈರಾಲಜಿ ಲ್ಯಾಬ್ನಿಂದಲೇ ಬಂದಿರೋದು, ಇದನ್ನು ವುಹಾನ್ ಲ್ಯಾಬ್ ಅಧ್ಯಕ್ಷೆ ಶೀ ಜಿಂಗ್ಲಿ ಪ್ಲಾನ್ ಮಾಡಿ ಹರಡಿಸಿರೋದು ಅನ್ನೊ ವಾದಕ್ಕೆ ಪುಷ್ಠಿ ನೀಡುವಂತೆ ಒಂದೊಂದೇ ಪುರಾವೆಗಳು ಹೊರ ಬರ್ತಾ ಇವೆ. ಶೀ ಜಿಂಗ್ಲಿಯವರು ಪಬ್ಲಿಷ್ ಮಾಡಿದ್ದ ಕೆಲವು ಆರ್ಟಿಕಲ್ಗಳು ಹಾಗೂ  ಥೀಸೀಸ್ಗಳನ್ನು ಅಧ್ಯಯನ ಮಾಡಿದವರು ಇದನ್ನು ಬಗೆಹರಿಸುತ್ತಿದ್ದಾರೆ. ಹಲವು ಅಧ್ಯಯನಗಳನ್ನು ನೋಡುತ್ತಿದ್ದರೆ ಈ ವೈರಸ್ ಚೀನಾದ ವುಹಾನ್ ಲ್ಯಾಬ್ನಿಂದ ಹರಡಿರುವುದು ಪಕ್ಕಾ ಆಗ್ತಾ ಇದೆ. ಇದಕ್ಕೆ ಮತ್ತೊಂದು ಸಾಕ್ಷಿಯಾಗುವಂತೆ ಸಂಶೋಧಕರಿಗೆ ಸಿಕ್ಕಿದೆ ಇನ್ನೊಂದು ವಿಡಿಯೋ.

ಬಾವಲಿಯನ್ನು ಸಂಶೋಧನೆ ಮಾಡಲು ಹೋಗಿದ್ದ ಚೀನಿಯರು
ಗುಹೆ ಒಳಗೆ ಹೋಗಿ ಬಾವಲಿಗಳನ್ನು ಹಿಡಿದು ವೈರಸ್ ಸಂಗ್ರಹ

ಚೀನಾದ ವುಹಾನ್ನಲ್ಲಿ ಇರುವ ಲ್ಯಾಬ್ನಲ್ಲಿ ಹಲವು ವರ್ಷಗಳಿಂದ ವೈರಸ್ಗಳ ಬಗ್ಗೆ ಸಂಶೋಧನೆ ನಡೆಸುತ್ತಲೇ ಇದ್ದಾರೆ. ವಿಶ್ವಕ್ಕೆ ವ್ಯಾಪಿಸಿ ಮಾನವರನ್ನು ಮರಣದವರೆಗೆ ಕೊರೆದುಕೊಂಡು ಹೋಗುವ ವೈರಸ್ಗಳು ಇದ್ದರೆ ಅದಕ್ಕೆ ತಕ್ಕ ಆ್ಯಂಟಿ ವೈರಲ್ಗಳನ್ನು ಮೊದಲೇ ಕಂಡು ಹಿಡಿಯಲು ಈ ಲ್ಯಾಬ್ ಸ್ಥಾಪಿಸಿರೋದು. ಆದರೆ ಕೊರೊನಾ ವೈರಸ್ ಅನ್ನು ನಾವು ಸಂಶೋಧಿಸಿಯೇ ಇಲ್ಲ. ಈ ವೈರಸ್ ನಾವು ಸಂಶೋಧನೆ ಮಾಡಿದ ಯಾವ ಪ್ರಾಣಿಯಲ್ಲೂ ಕಂಡೇ ಇಲ್ಲ ಎಂದು ವೈರಾಲಜಿ ಲ್ಯಾಬ್ನಿಂದ ಮಾಹಿತಿ ಹೊರಬಂದಿತ್ತು. ಆದರೆ ಈ ಚೀನಿ ಸಂಶೋಧಕರು ಬಾವಲಿಗಳಿರುವ ಗುಹೆಯಲ್ಲಿ ಸಂಶೋಧನೆ ಮಾಡುತ್ತಿರುವ ವಿಡಿಯೋ ಇದೀಗ ಸಿಕ್ಕಿದೆ. ಅಲ್ಲಿ ಬಾವಲಿ ಇರುವ ಗುಹೆಗಳಿಗೆ ಸಂಶೋಧಕರು ನುಗ್ಗಿ ಅದರ ಸ್ಯಾಂಪಲ್ ಕಲೆಕ್ಟ್ ಮಾಡುತ್ತಿರುವ ವಿಡಿಯೋ ಅಚ್ಚರಿ ಮೂಡಿಸುತ್ತಿದೆ.

ಕೋವಿಡ್ ವೈರಸ್ ಬರುವುದಕ್ಕೂ ಮುಂಚೆಯೆ ಇದ್ದ ವಿಡಿಯೋ
ವೈರಸ್ ಬಗ್ಗೆ ಗೊತ್ತಿದ್ದರು ಜಗತ್ತಿಗೆ ಸತ್ಯ ಮುಚ್ಚಿಟ್ಟಿತ್ತಾ ಚೀನಾ  ?

ಆಶ್ಚರ್ಯದ ಸಂಗತಿ ಏನು ಅಂದ್ರೆ ಈ ವಿಡಿಯೋ ಸೈನ್ಸ್ ಚೈನಾ ಕಮ್ಯೂನಿಕೇಷನ್ ಎನ್ನುವ ಚಾನಲ್ನಲ್ಲಿ 2019ರ ಡಿಸೆಂಬರ್ 10ರಂದು ಬಿಡುಗಡೆಯಾಗಿದೆ. ಇದೆ ಸಮಯಕ್ಕೆ ವುಹಾನ್ ನಲ್ಲಿ ನಿಮೋನಿಯಾ ತರಹದ ಲಕ್ಷಣಗಳನ್ನು ಅಲ್ಲಿನ ಜನ ತೋರಲು ಶುರು ಮಾಡಿದ್ದರು. ಈ ವಿಡಿಯೋದಲ್ಲಿ ಚೀನಾ ಸಂಶೋಧಕರು ಗೌಣವಾದ ಗುಹೆ ಒಳಗೆ ನುಗ್ಗಿ ಅಲ್ಲಿನ ಬಾವಲಿಗಳನ್ನು ಹಿಡಿದು ಅದರ ಸ್ಯಾಂಪಲ್ಸ್ ಪಡೆಯುತ್ತಿರುವುದು ಕಾಣಬಹುದು. ಹೀಗೆ ಸಂಶೋಧನೆ ಮಾಡುತ್ತಿರುವ ವಿಜ್ಞಾನಿ ಪ್ರಸ್ತುತ ನಡೆಯುತ್ತಿರುವ ಪ್ಯಾಂಡಮಿಕ್ ಕುರಿತಾಗಿ ನಡೆಸಿರುವ ಸಂಶೋಧನೆ ಇರಬಹುದು ಎನಿಸಿದರರೂ ಇದರ ಬಗ್ಗೆ ನಿಖರವಾಗಿ ಹೇಳಲು ಚೀನಾ ಕಡೆಯಿಂದ ಯಾವುದೇ ಮಾಹಿತಿಗಳು ಬರ್ತಾ ಇಲ್ಲ. ಆದ್ರೆ ಇನ್ನಿತರ ಸಂಶೋಧನೆಗಳನ್ನು ಹಾಗೂ ಈ ವಿಡಿಯೋವನ್ನು ನೋಡುತ್ತಿದ್ದರೆ ಚೀನಾಗೆ ಮುಂಚಿತವಾಗಿಯೇ ಈ ವೈರಸ್ ಬಗ್ಗೆ ಅರಿವಿದ್ದು, ಜಗತ್ತಿಗೆ ಇದರ ಸತ್ಯವನ್ನು ತಿಳಿಸದೆ ಮುಚ್ಚಿಟ್ಟಿದೆ ಎನಿಸುವುದು ಸುಳ್ಳಲ್ಲ.

ಚೀನಾ ಕುತಂತ್ರವನ್ನು ಪ್ರಚಾರ ಮಾಡ್ಕೊಂಡಿದ್ಯಾ ?
ವಿಡಿಯೋ ರಿಲೀಸ್ ಮಾಡಿದ ಕಾರಣ ಗೊತ್ತಾ  ?

ಈ ವಿಡಿಯೋದಲ್ಲಿ ಇರುವ ಸಂಶೋಧಕನ ಹೆಸರು ಟೈವಾನ್, ಈತ ಬಾವಲಿ ಇರುವ ಗುಹೆಗೆ ಸಂಶೋಧನೆಗಾಗಿ ತನ್ನ ಟೀಂ ಜೊತೆ ಹೋಗಿದ್ದಾನೆ. ಇನ್ನು ಇವನು ಸಾಮಾನ್ಯ ಸಂಶೋಧಕನಲ್ಲ ಈತ ವುಹಾನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ನಲ್ಲಿ ಸಹ ಕಾರ್ಯ ನಿರ್ವಹಿಸುತ್ತಿದ್ದ ಎನ್ನುವ ಮಾಹಿತಿ ಇದೆ. ಆಗಲೆ ಹೇಳಿದಂತೆ ಈ ವಿಡಿಯೋ ಡಿಸೆಂಬರ್ 2019ರಲ್ಲಿ ಬಿಡುಗಡೆಯಾಗಿದ್ದು. ಆ ವೇಳೆಗೆ ಚೀನಾ, ವೈರಸ್ ಹಂಟರ್ ಆಗಿ ಕೆಲಸ ಮಾಡುತ್ತಿತ್ತು, ಹೀಗೆ ವೈರಸ್ ಅನ್ನು ಕಲೆ ಹಾಕುವುದು ಸಾಹಸದ ಕೆಲಸ ಎನ್ನುವುದಕ್ಕೆ ಈ ರೀತಿ ವಿಡಿಯೊ ಮಾಡಿದೆ. ಇದರಿಂದ ಗ್ಲೋಬಲ್ ವೈರಾಲಜಿಯಲ್ಲಿ ಚೀನಾ ಮುಂಚೂಣೆಯಲ್ಲಿದೆ ಎನ್ನುವ ಪ್ರಚಾರಕ್ಕೆ ಈ ವಿಡಿಯೋ ಮಾಡಿಕೊಂಡಿದೆ ಚೀನಾ. ಈಗ ಇದೇ ವಿಡಿಯೋ ಅವರ ಪಾಲಿಗೆ ಮುಳ್ಳಾಗುವ ಸಾಧ್ಯತೆ ಇದೆ. ಸಂಶೋಧಕರು, ವಿಜ್ಞಾನಿಗಳು ಹಾಗೂ ತಜ್ಞರು ಈ ವಿಡಿಯೋದಲ್ಲಿ ಬಾವಲಿ ಮೇಲೆ ಪ್ರಯೋಗ ಮಾಡಿದ ವಿವರಗಳನ್ನು ಕೇಳುತ್ತಿದ್ದಾರೆ.

 

ನಮ್ಮ ಲ್ಯಾಬ್ನಲ್ಲಿ ಬಾವಲಿ ಸ್ಯಾಂಪಲ್ಗಳು ಇಲ್ಲ ಎಂದು ಚೀನಾ ಈ ಹಿಂದೆ ಹೇಳಿತ್ತು. ಹಾಗಾದರೆ ಈ ಸಂಶೋಧಕ ಮಾಡುತ್ತಿರುವುದಾದರು ಏನು ? ಎನ್ನುವ ಪ್ರಶ್ನೆ ಎಲ್ಲರಲ್ಲೂ  ಮೂಡುತ್ತಿದೆ. ಆದರೆ ಚೀನಾದಿಂದ ಇದ್ಯಾವ ಪ್ರಶ್ನೆಗೂ ಉತ್ತರ ಮಾತ್ರ ಬರುತ್ತಿಲ್ಲ.

30ಕ್ಕೂ ಹೆಚ್ಚು ಗುಹೆ, 300ಕ್ಕೂ ಹೆಚ್ಚು ಬ್ಯಾಟ್ ಸ್ಯಾಂಪಲ್ಸ್
ಇದೇ ವಿಡಿಯೋದಲ್ಲಿ ಟೈವಾನ್ ಹೇಳಿರುವ ಪ್ರಕಾರ, ತಾನೊಬ್ಬ ವೈರಸ್ ಹಂಟರ್. ಇದಕ್ಕಾಗಿ ಎಲ್ಲ ಪ್ರಾಣಿಗಳ ಸ್ಯಾಂಪಲ್ಗಳನ್ನು ನೋಡಿ, ಯಾವುದು ಮಾನವನ ಜೀವಕ್ಕೆ ಹಾನಿ ಮಾಡುತ್ತೆ ಎಂದು ತಿಳಿಯುತ್ತೋ, ಅಂತಹ ವೈರಸ್ಗಳಿಗೆ ಆ್ಯಂಟಿ ಡೋಟ್​ಗಳನ್ನು ಸಿದ್ದಪಡಿಸುತ್ತೇವೆ ಎಂದಿದ್ದಾನೆ. ಇದಕ್ಕಾಗಿ ಟೈವಾನ್, ಹ್ಯೂಬೆ ಪ್ರಾಂತ್ಯದಲ್ಲಿ ಸಿಗುವ 30ಕ್ಕೂ ಹೆಚ್ಚು ಗುಹೆಗಳಿಗೆ ನುಗ್ಗಿ 300ಕ್ಕೂ ಹೆಚ್ಚು ಬಾವಲಿಗಳನ್ನು ನೆಟ್ ಮೂಲಕ ಹಿಡಿದು ಅದರ ಸ್ಯಾಂಪಲ್ ಕಲೆ ಹಾಕುತ್ತಿದ್ದೇನೆ ಎಂದಿದ್ದಾನೆ. ಹಾಗಾದರೆ ಈ ಸ್ಯಾಂಪಲ್ಗಳಲ್ಲಿ ಏನೆಲ್ಲ ಸಿಕ್ಕಿತು, 2019ರ ವೇಳೆಗೆ  ವುಹಾನ್ನಲ್ಲಿ ಕೊರೊನಾ ಸಾಂಕ್ರಮಿಕ ಶುರುವಾಗಿದ್ದರೂ, ಬಾವಲಿಯಲ್ಲಿ ವೈರಸ್ ಹಂಟ್ ಮಾಡಿದ್ದ ಟೈವಾನ್​ಗೆ ಸಿಕ್ಕ ಮಾಹಿತಿ ಜಗತ್ತಿಗೆ ಏಕೆ ತಿಳಿಸಲಿಲ್ಲ ಎನ್ನುವುದು ಸದ್ಯದ ಪ್ರಶ್ನೆ

ಚೀನಾದ ಕುತಂತ್ರ ಬಯಲು ಮಾಡುತ್ತಿರುವ ಹಲವು ಸಂಶೋಧಕರು
ಎಲ್ಲ ರಿಪೋರ್ಟ್ ಗಳನ್ನು ಅಧ್ಯಯನ ಮಾಡಲು ಸಿದ್ದ ಡ್ರಾಸ್ಟಿಕ್ ಟೀಂ

ಜಗತ್ತಿನ ವಿವಿಧೆಡೆಯಿಂದ ಸಂಶೋಧಕರು ಚೀನಾ ನಡೆಸಿದ ಪ್ಲಾನ್ ಬಗ್ಗೆ ಅಧ್ಯಯನ ನಡೆಸುತ್ತಿವೆ. ಈಗಾಗಲೆ ಶೀ ಜಿಂಗ್ಲಿಯವರು ಬರೆದಿರುವ ಹಲವು ಥೀಸೀಸ್ಗಳಲ್ಲಿ ಕೊರೊನಾ 2012ರಲ್ಲಿ ಶ್ವಾಸಕೋಶದ ಸಾಂಕ್ರಮಿಕವಾಗಿ ಕಂಡಿದೆ ಎನ್ನುವ ದಾಖಲೆಗಳು ಸಿಕ್ಕಿವೆ.

ಈ ರಿಪೋರ್ಟ್ ಆಧರಿಸಿ ಮುಂದಿನ ಸಂಶೋಧನೆಗಳನ್ನು ನಡೆಸುವಂತೆ ಅಮೆರಿಕಾ ಅಧ್ಯಕ್ಷ ಬೈಡನ್ ತಮ್ಮ ಸಂಶೋಧಕರಿಗೆ ಸೂಚನೆ ನೀಡಿದ್ದಾರೆ. ಆದರೆ ಚೀನಾ ಮಾತ್ರ ತನ್ನಲ್ಲಿದ್ದ ದಾಖಲೆಗಳನ್ನು ನಿಧಾನವಾಗಿ ನಾಶ ಮಾಡ್ತಾ ಇದೆ ಅನ್ನೊ ಅನುಮಾನಗಳು ಕಾಣಿಸುತ್ತದೆ.

ವುಹಾನ್ ಲ್ಯಾಬ್ ವೈರಸ್ ಗಳನ್ನು ಕಲೆ ಹಾಕುವುದು ಎಷ್ಟು ಸೇಫ್ ?
ವುಹಾನ್ ಲ್ಯಾಬ್ ನಲ್ಲಿ ಕೊರೊನಾ ವೈರಸ್ ಇಲ್ಲ ಎಂದಿದ್ದ ಶಿ.ಜಿಂಗ್ಲಿ

ವುಹಾನ್ ಲ್ಯಾಬ್ ತನ್ನ ಪ್ರತಿಷ್ಠೆ ಪ್ರದರ್ಶನಕ್ಕೋ ಅಥವಾ ಜಗತ್ತಿಗೆ ಉಪಯೋಗವಾಗಲು ಸಂಶೋಧನೆ ಮಾಡುತ್ತಿದ್ಯೂ ಗೊತ್ತಿಲ್ಲ. ಆದ್ರೆ 2018ರಲ್ಲಿ ಅಮೆರಿಕದ ಡೆಲಿಗೇಟ್ಸ್​ಗಳು ವುಹಾನ್ ಲ್ಯಾಬ್ಗೆ ಭೇಟಿ ನೀಡಿ ಈ ಲ್ಯಾಬ್​ ವೈರಸ್ ಕಾಪಾಡಲು ಸೇಫ್ ಅಲ್ಲ, ಇಲ್ಲಿನ ತಂತ್ರಜ್ಞರು ಸಹ ಅರಿತವರಲ್ಲ ಎಂದು ವರದಿ ಮಾಡಿತ್ತು. ಈ ಮೂಲಕ ವೈರಸ್​ ಲ್ಯಾಬ್ ನಿಂದಲೇ ಲೀಕ್ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿದ್ದವು.

ಇದೆಲ್ಲ ಒಂದು ಕಡೆಯಾದರೆ ವುಹಾನ್ ಲ್ಯಾಬ್ ನಲ್ಲಿ ಇದ್ದ 22,000 ಸ್ಯಾಂಪಲ್ಗಳ ಬಗ್ಗೆ ವಿವರಗಳನ್ನು ಕೊಡಲು ಶೀ ಜಿಂಗ್ಲಿಗೆ ಒತ್ತಾಯ ಹೇರಲಾಗಿದೆ. ಚೀನಾದ ಬ್ಯಾಟ್ ವುಮೆನ್ ಶೀ ಜಿಂಗ್ಲಿ ಮುಂದೆ ಇರುವ ಸಾಲು ಸಾಲು ಪ್ರಶ್ನೆಗಳಿಗೆ ಆಕೆ ಉತ್ತರಿಸುತ್ತಾರೋ ಅಥವಾ ತಪ್ಪಾಗಿದ್ದರೆ ಒಪ್ಪಿಕೊಂಡು ಶರಣಾಗುತ್ತಾರೊ ಗೊತ್ತಿಲ್ಲ. ಆದ್ರೆ ಸದ್ಯ ಈ ವಿಡಿಯೋದ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿ, ಚೀನಾವನ್ನು ಪ್ರಶ್ನಿಸಲು ಸಿದ್ದರಾಗ್ತಾ ಇದ್ದಾರೆ ವಿಶ್ವದ ಇತರ ಸಂಶೋಧಕರು.

ಕೊರೊನಾ ವೈರಸ್ ಲ್ಯಾಬ್ ಲೀಕಾ ಅಲ್ವಾ ಅನ್ನೊ ಚರ್ಚೆ ನಡಿತಾನೆ ಇದೆ. ವುಹಾನ್ ಲ್ಯಾಬ್ ಮಾತ್ರ ಏನೂ ಉತ್ತರಿಸದೆ ಮೌನವಾಗಿದೆ. ಇದೀಗ ಸಿಕ್ಕಿರುವ ವಿಡಿಯೋ ನಿಜವಾದ ಸೋರ್ಸ್  ಡಿಲೀಟ್ ಆಗಿರೋದು ಅನುಮಾಸ್ಪದ. ಇದೇ ವಿಡಿಯೋವನ್ನು ಕುರುಹನ್ನಾಗಿ ಇಟ್ಟುಕೊಂಡು ಕೊರೊನಾ ವೈರಸ್ನ ಹುಟ್ಟನ್ನು ಪತ್ತೆಹಚ್ಚಬೇಕು.

 

The post ಗುಹೆಯಲ್ಲಿ ಬಾವಲಿ ಸ್ಯಾಂಪಲ್ಸ್​ ಸಂಗ್ರಹಿಸಿದ್ದೇಕೆ ಚೀನಾ ವಿಜ್ಞಾನಿಗಳು? ವಿಡಿಯೋದಿಂದ ಬಯಲಾಗುತ್ತಾ ಕುತಂತ್ರ appeared first on News First Kannada.

Source: newsfirstlive.com

Source link