ಬೆಂಗಳೂರು: ಕನ್ನಡ ಭಾಷೆಗೆ ಅವಮಾನ ಮಾಡಿರುವ ಗೋಗಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆಯನ್ನರ ರಾಜ್ಯ ಸರ್ಕಾರ ನೀಡಿದೆ.

ಈ ಬಗ್ಗೆ ಫೇಸ್​​ಬುಕ್​​ನಲ್ಲಿ ಮಾಹಿತಿ ನೀಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ.. 2500 ವರ್ಷಗಳ ಹಿಂದೆಯೇ ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು ಎಂದು ಸಾಬೀತಾಗಿದೆ. ಜೊತೆಗೆ ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದ್ದು, ಕನ್ನಡ ಭಾಷೆ ಕನ್ನಡಿಗರ ಹೆಮ್ಮೆ.

ಆದರೆ ಭಾರತದಲ್ಲಿ ಕೆಟ್ಟ( ugliest) ಭಾಷೆ ಎಂದರೆ ನಮ್ಮ ನುಡಿಯಾದ ಕನ್ನಡ ಎಂದು ಉತ್ತರ ಬರುತ್ತಿದೆ ಹೀಗಾಗಿ “ಗೂಗಲ್ ” ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ಗೂಗಲ್ ಕನ್ನಡಿಗರ ಕ್ಷಮೆ ಕೇಳಬೇಕು. ಕನ್ನಡ ಭಾಷೆಯ ಕುರಿತು ಅಪಪ್ರಚಾರ ಮಾಡಿದ ಗೂಗಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

The post ‘ಗೂಗಲ್​ ಕನ್ನಡಿಗರ ಕ್ಷಮೆ ಕೇಳಬೇಕು’ -ಕಾನೂನು ಕ್ರಮಕ್ಕೆ ಮುಂದಾದ ಸರ್ಕಾರ appeared first on News First Kannada.

Source: newsfirstlive.com

Source link