ಗೂಗಲ್‌ ಮ್ಯಾಪ್‌ ಇದೀಗ ಮತ್ತಷ್ಟು ಅಪ್‌ಟೇಡ್‌ ಆಗಿದೆ. ನಿಗದಿತವಾಗಿ ಭೇಟಿ ಮಾಡುವ ಸ್ಥಳೀಯ ಲೊಕೇಶನ್‌ಗಳ ರಿವ್ಯೂ, ಫೋಟೋಗಳನ್ನು ಸೇರಿಸಲು ಬಳಕೆದಾರರಿಗೆ ಗೂಗಲ್‌ ಅವಕಾಶ ನೀಡಿದೆ. ಈ ಮೂಲಕ ಗೂಗಲ್‌ನಲ್ಲಿ ಇಲ್ಲದ ಅಥವಾ ಗೂಗಲ್‌ನಲ್ಲಿ ಇದುವರೆಗೆ ಕಾಣಿಸದೇ ಇರುವ ರಸ್ತೆಗಳನ್ನು ಬಳಕೆದಾರರೇ ಗುರುತಿಸಿ ಮ್ಯಾಪ್‌ಗೆ ಸೇರಿಸಬ ಹುದಾಗಿದೆ. ಜತೆಗೆ ತಪ್ಪಾಗಿ ಕಾಣುವ ರಸ್ತೆಗಳ ನಕಾಶೆಯನ್ನು ಮರುಜೋಡಿಸಬಹುದು.

ವಿಶ್ವದ 80ಕ್ಕೂ ಹೆಚ್ಚು ದೇಶಗಳ ನಕಾಶೆಯನ್ನು ಹೊಂದಿರುವ ಗೂಗಲ್‌ ತನ್ನಲ್ಲಿನ ನಕಾಶೆಗಳನ್ನು ನೈಜತೆಯ ಸನಿಹಕ್ಕೆ ತರಲು ಮುಂದಾಗಿದ್ದು ಈ ಕಾರಣಂದಿಂದಾಗಿಯೇ ಇನ್ನಷ್ಟು ಎಡಿಟ್‌ ಮಾಡುವ ಸೌಲಭ್ಯಗಳನ್ನು ಒದಗಿಸಿದೆ. ಈಗ ಬಳಕೆದಾರರು ಅದರಲ್ಲಿರದ ರಸ್ತೆಗಳು ಮತ್ತು ಊರ ಹೆಸರುಗಳನ್ನು ಅಥವಾ ತಪ್ಪಾಗಿರುವ ಹೆಸರನ್ನು ತೆಗೆದು ಹಾಕಬಹುದು ಅಥವಾ ನಕಾಶೆ ಗಳಲ್ಲಿರುವ ಹೆಸರನ್ನು ಬದಲಾಯಿಸಬಹುದು.

ಪೂರ್ಣ ಮಾಹಿತಿ

ನಕಾಶೆಗಳಲ್ಲಿ ಇರುವ ರಸ್ತೆಗಳ ಬಗೆಗಿನ ಈಗಿನ ಸ್ಥಿತಿಗತಿಯ ಮಾಹಿತಿಯನ್ನು ಬಳಕೆ ದಾರರು ಅಪ್‌ಡೇಟ್‌ ಮಾಡಬಹುದಾಗಿದೆ. ಉದಾಹರಣೆಗೆ ರಸ್ತೆ ಎಷ್ಟು ಸಮಯದವರೆಗೆ ಮುಚ್ಚಲ್ಪಟ್ಟಿದೆ? ಮುಚ್ಚಲು ಕಾರಣವೇನು? ಈಗ ಹೊಸ ನಿರ್ದೇಶನ ಏನು? ಎಂಬುದನ್ನೂ ಮ್ಯಾಪ್‌ಗೆ ಅಪ್‌ಡೇಟ್‌ ಮಾಡಬಹುದು. ಬಳಕೆದಾರರು ನೀಡಿದ ಸಲಹೆಗಳು ಮತ್ತು ಸೇರಿಸಲಾದ ಅಂಶಗಳು ಸರಿಯಾಗಿವೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ಬದ ಲಾವಣೆಗಳನ್ನು ಮಾಡಿದ ಬಳಕೆದಾರನ ಹೆಸರನ್ನು ಸಹ ಹೊಂದಿರಲಿದೆ.

ಈ ವಿಧಾನ ಹೇಗೆ?
ಡೆಸ್ಕ್ಟಾಪ್‌ನಲ್ಲಿ maps.google.comಗೆ ಭೇಟಿ ನೀಡಬೇಕು. ಅಲ್ಲಿ ನಿಮಗೆ ಯಾವುದೇ ಮಾರ್ಗ ಕಾಣುತ್ತಿಲ್ಲವಾದರೆ, ಆಗ ಸೈಡ್‌ ಮೆನು ಬಟನ್‌ ಕ್ಲಿಕ್‌ ಮಾಡಬೇಕು. ಅಲ್ಲಿ edit the map here ಆಯ್ಕೆ ಕ್ಲಿಕ್‌ ಮಾಡಬೇಕು, ಬಳಿಕ missing road ಆರಿಸಿಕೊಳ್ಳಬೇಕು. ರಸ್ತೆ ಹಾದುಹೋಗಿರುವಂತೆ ಸ್ಕ್ರೀನ್‌ ಮೇಲೆ ಕಾಣುವ ಮ್ಯಾಪ್‌ನಲ್ಲಿ ಗುರುತು ಮಾಡಬೇಕು. ಹೀಗೆ ಜೋಡಿಸಿದ ಹೊಸ ರಸ್ತೆಗೆ ಹೆಸರನ್ನು ಕೂಡ ಸೂಚಿಸಬಹುದು. ರಸ್ತೆಗಳನ್ನು ಸೇರಿಸಿ ಅಥವಾ ತಪ್ಪಾಗಿ ಗುರುತಾಗಿರುವ ರಸ್ತೆಯನ್ನು ಸರಿಪಡಿಸಿ ಬಳಿಕ ಹೆಸರು ದಾಖಲಿಸಬಹುದು.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More