ಗೂಗಲ್ ಎಚ್ಚರಿಕೆ: ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್​ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ..! | Dangerous Smartphone Apps That You Must Immediately Delete


Dangerous Smartphone Apps: ಈ ಅಪ್ಲಿಕೇಶನ್‌ಗಳು ನಿಮ್ಮ ಫೋನ್‌ಗಳಲ್ಲಿದ್ದರೆ ಅವುಗಳನ್ನು ಡಿಲೀಟ್ ಮಾಡಿ. ಅಲ್ಲದೆ, ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದ ಬಳಿಕ ನಿಮ್ಮ ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ಬ್ಯಾಂಕಿಂಗ್ ಖಾತೆಗಳ ಪಾಸ್​ವರ್ಡ್​ಗಳನ್ನು ಬದಲಾಯಿಸಿ.

ಗೂಗಲ್ ಎಚ್ಚರಿಕೆ: ನಿಮ್ಮ ಮೊಬೈಲ್​ನಲ್ಲಿ ಈ ಆ್ಯಪ್​ ಇದ್ದರೆ ತಕ್ಷಣವೇ ಡಿಲೀಟ್ ಮಾಡಿ..!

ಸಾಂದರ್ಭಿಕ ಚಿತ್ರ

ಡಿಜಿಟಲ್​ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಳಸದವರು ತುಂಬಾ ವಿರಳ ಎನ್ನಬಹುದು. ಇನ್ನು ಸ್ಮಾರ್ಟ್​ಫೋನ್ ಇದ್ದ ಮೇಲೆ ಫೋನ್​ನಲ್ಲಿ​ ಒಂದಷ್ಟು ಅಪ್ಲಿಕೇಶನ್​ಗಳು ಇದ್ದೇ ಇರುತ್ತೆ. ಹೀಗೆ ನೀವು ಬಳಸುವ ಕೆಲವೊಂದು ಆ್ಯಪ್​ಗಳು ಹ್ಯಾಕರ್‌ಗಳ ರಾಡಾರ್‌ನಲ್ಲಿವೆ ಎಂದರೆ ನಂಬಲೇಬೇಕು. ಅಂದರೆ, ಹ್ಯಾಕರ್‌ಗಳು ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳನ್ನು ಹ್ಯಾಕಿಂಗ್‌ನ ಸಾಧನವನ್ನಾಗಿ ಬಳಸುತ್ತಿದ್ದಾರೆ. ಇನ್ನು ಸರಳವಾಗಿ ಹೇಳಬೇಕೆಂದರೆ, ಕೆಲ ಆ್ಯಪ್​ಗಳ ಮೂಲಕವೇ ಹ್ಯಾಕರುಗಳು ನಿಮ್ಮ ಮೊಬೈಲ್​ ಫೋನ್​ ಅನ್ನು ನಿಮಗೆ ಗೊತ್ತಿಲ್ಲದಂತೆ ನಿಯಂತ್ರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಪ್ರಮುಖ ಮಾಹಿತಿಗಳನ್ನು ಕಲೆಹಾಕುವ ಮೂಲಕ ನಿಮ್ಮ ಬ್ಯಾಂಕಿಂಗ್ ಖಾತೆ ಹಾಗೂ ಇತರೆ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ.

ಇಂತಹ ಹಲವು ಆ್ಯಪ್​ಗಳು ಗೂಗಲ್ ಪ್ಲೇಸ್ಟೋರ್​ನಲ್ಲಿ ಕಂಡು ಬಂದಿದ್ದು, ಇದೀಗ ಅಪಾಯಕಾರಿ ಎನಿಸುವ ಅಪ್ಲಿಕೇಶನ್​ಗಳನ್ನು ಡಿಲೀಟ್ ಮಾಡುವಂತೆ ಗೂಗಲ್ ಸೂಚಿಸಿದೆ. ಅಲ್ಲದೆ ಇಂತಹ ಯಾವುದೇ ಆ್ಯಪ್​ಗಳನ್ನು ಡೌನ್​ಲೋಡ್ ಮಾಡದಂತೆ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಗೂಗಲ್, ಪ್ಲೇಸ್ಟೋರ್​ನಲ್ಲಿ ಕೆಲ ಅಪಾಯಕಾರಿ ಮಾಲ್‌ವೇರ್ ಹೊಂದಿರುವ ಕೆಲ ಅಂಡ್ರಾಯ್ಡ್​ ಅಪ್ಲಿಕೇಶನ್​ಗಳು ಕಂಡು ಬಂದಿದೆ. ಇದನ್ನು ಅನೇಕರು ಡೌನ್ ಲೋಡ್ ಕೂಡ ಮಾಡಿದ್ದಾರೆ. ಆದರೆ ಈ ಆ್ಯಪ್​ಗಳು ಅಂಡ್ರಾಯ್ಡ್​ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅಪಾಯವನ್ನುಂಟು ಮಾಡಲಿದೆ. ಹೀಗಾಗಿ ಅಂತಹ ಕೆಲ ಅಪ್ಲಿಕೇಶನ್​ಗಳನ್ನು ಅಪಾಯಕಾರಿ ಎಂದು ಘೋಷಿಸಲಾಗಿದ್ದು, ಅವುಗಳನ್ನು ಪ್ಲೇಸ್ಟೋರ್​ನಿಂದ ತೆಗೆದು ಹಾಕಲಾಗಿದೆ. ಇದಾಗ್ಯೂ ಈ ಆ್ಯಪ್​ಗಳು ನಿಮ್ಮ ಫೋನ್​ನಲ್ಲಿದ್ದರೆ ತಕ್ಷಣವೇ ಡಿಲೀಟ್ ಮಾಡುವಂತೆ ತಿಳಿಸಿದೆ.

ಅಷ್ಟೇ ಅಲ್ಲದೆ ಪ್ಲೇಸ್ಟೋರ್​ನಲ್ಲಿ ಕಂಡುಬಂದಂತಹ ಮಾಲ್​ವೇರ್ ವೈರಸ್ ಹೊಂದಿರುವ ಆ್ಯಪ್​ಗಳ ಪಟ್ಟಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಅದರಂತೆ ಈ ಕೆಳಗಿನ ಆ್ಯಪ್​ಗಳು ನಿಮ್ಮ ಸ್ಮಾರ್ಟ್​ಫೋನ್​ನಲ್ಲಿದ್ದ ತಕ್ಷಣವೇ ಡಿಲೀಟ್ ಮಾಡಿ…

 1. ಜಂಕ್ ಕ್ಲೀನರ್ (Junk Cleaner)
 2. ಈಸಿಕ್ಲೀನರ್ (EasyCleaner)
 3. ಪವರ್ ಡಾಕ್ಟರ್ (Power Doctor)
 4. ಸೂಪರ್ ಕ್ಲೀನ್ (Super Clean)
 5. ಫುಲ್ ಕ್ಲೀನರ್ (Full Cleaner)
 6. ಕ್ಲೀನ್ ಕ್ಯಾಚೆ (Clean Cache)
 7. ಫಿಂಗರ್​ಟಿಪ್ ಕ್ಲೀನರ್ (Fingertip Cleaner)
 8. ಕ್ವಿಕ್ ಕ್ಲೀನರ್ (Quick Cleaner)
 9. ಕೀಪ್ ಕ್ಲೀನ್ (Keep Clean)
 10. ವಿಂಡಿ ಕ್ಲೀನ್ (Windy Clean)
 11. ಕಾರ್ಪೆಟ್ ಕ್ಲೀನ್ (Carpet Clean)
 12. ಕೂಲ್ ಕ್ಲೀನ್ (Cool Clean)
 13. ಸ್ಟ್ರಾಂಗ್ ಕ್ಲೀನ್ (Strong Clean)
 14. ಮೀಟಿಯೊರ್ ಕ್ಲೀನ್ (Meteor Clean)

ಮುನ್ನೆಚ್ಚರಿಕೆ ಕ್ರಮಗಳು:
ಮೇಲಿನ ಯಾವುದೇ ಅಪ್ಲಿಕೇಶನ್‌ಗಳನ್ನು ತಮ್ಮ ಫೋನ್‌ಗಳಲ್ಲಿದ್ದರೆ ಸಾಧ್ಯವಾದಷ್ಟು ಬೇಗನೆ ಅವುಗಳನ್ನು ಡಿಲೀಟ್ ಮಾಡಿ. ಅಲ್ಲದೆ, ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿದ ಬಳಿಕ ನಿಮ್ಮ ಸೋಷಿಯಲ್ ಮೀಡಿಯಾ ಹಾಗೂ ಮೊಬೈಲ್ ಬ್ಯಾಂಕಿಂಗ್ ಖಾತೆಗಳ ಪಾಸ್​ವರ್ಡ್​ಗಳನ್ನು ಬದಲಾಯಿಸಿ.

TV9 Kannada


Leave a Reply

Your email address will not be published. Required fields are marked *