ನವದೆಹಲಿ: ವಿಶ್ವದ ಪ್ರಸಿದ್ಧ ಸರ್ಚ್ ಇಂಜಿನ್ ಆಗಿರುವ ಗೂಗಲ್  ಇತ್ತೀಚಿನ ದಿನಗಳಲ್ಲಿ ಹಲವಾರು ವಿಭಿನ್ನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ತನ್ನ ಬಳಕೆದಾರರಿಗೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಈ ನಡುವೆ ಗೂಗಲ್ ತನ್ನ ಗೂಗಲ್ ಮ್ಯಾಪ್ ನಲ್ಲಿ ಹೊಸ ರಸ್ತೆಗಳನ್ನು ಸೇರ್ಪಡೆ ಮಾಡುವುದನ್ನೂ ಒಳಗೊಂಡಂತೆ ಹಲವಾರು  ಸೌಲಭ್ಯಗಳನ್ನು ಪರಿಚಯಿಸಿದೆ.

ಗೂಗಲ್ ಮ್ಯಾಪ್ ನ ಈ ಹೊಸ ಅಪ್ ಡೇಟ್ ನ ಅನ್ವಯ,  ಬಳಕೆದಾರರು ಪ್ರಸ್ತುತ ಮ್ಯಾಪ್ ನಲ್ಲಿ ಇರುವ ರಸ್ತೆಗಳಲ್ಲಿ ಹೆಸರು, ಮಾಹಿತಿ ಸೇರಿದಂತೆ ಯಾವುದಾದರೂ ಹೊಸ ಬದಲಾವಣೆಗಳು ಆಗಿದ್ದರೆ ಅಂತಹ ಬದಲಾವಣೆಗಳನ್ನು ಸೇರಿಸಬಹುದಾಗಿದೆ. ಅಲ್ಲದೆ ಹೊಸ ರಸ್ತೆಯ ಸೌಲಭ್ಯಗಳಿದ್ದರೆ ಅವುಗಳನ್ನು ಕೂಡಾ ಮ್ಯಾಪ್ ನಲ್ಲಿ ಸೇರ್ಪಡೆ ಮಾಡಬಹುದಾಗಿದೆ.

ಈ ಬದಲಾವಣೆಗಳನ್ನು ಮಾಡಲು ಗೂಗಲ್ ಅತ್ಯಂತ ಸುಲಭ ವಿಧಾನವನ್ನು ಪರಿಚಯಿಸಿದ್ದು, ಈ ಹೊಸ ಸೌಲಭ್ಯಕ್ಕೆ ‘ಡ್ರಾಯಿಂಗ್’ ಎಂದು ನಾಮಕರಣ ಮಾಡಿದೆ. ಇದು ಮೈಕ್ರೋಸಾಫ್ಟ್ ನ ‘ಮೈಕ್ರೋಸಾಫ್ಟ್ ಫೇಯಿಂಟ್’ ಫೀಚರ್ ಅನ್ನು  ಹೊಲುತ್ತಿದ್ದು, ಅತ್ಯಂತ ಸುಲಭವಾಗಿ ಗೂಗಲ್ ಮ್ಯಾಪ್ ನಲ್ಲಿ ಬದಲಾಗಣೆ ಮಾಡಬಹುದಾಗಿದೆ. ಈ ಸೌಲಭ್ಯ ಮುಂಬರುವ ತಿಂಗಳಿನಿಂದ ವಿಶ್ವದ 80 ರಾಷ್ಟ್ರಗಳಲ್ಲಿ ಬಳಕೆಗೆ ಸಿಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ತಮಿಳುನಾಡಿನಲ್ಲಿ ಕಾವೇರಿ ನದಿ ಜೋಡಣೆಗೆ ವಿರೋಧ

ಈ ನಡುವೆ ಗೂಗಲ್ ಯಾವುದೇ ಬಳಕೆದಾರರು ಗೂಗಲ್ ಮ್ಯಾಪ್ ನಲ್ಲಿ ಹೊಸ ಬದಲಾವಣೆಗಳನ್ನು ಮಾಡುವಾಗ ಆ ಹೊಸ ಮಾಹಿತಿಗಳು ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂಬುವುದರ ಕುರಿಯಾಗಿಯೂ ಬಹಳ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಯಾವುದೇ ಬಳಕೆದಾರ ಗೂಗಲ್ ಮ್ಯಾಪ್ ನಲ್ಲಿ ಹೊಸ ಬದಲಾವಣೆಗಳನ್ನು ಮಾಡಿದ ಬಳಿಕ ಆ ಮಾಹಿತಿ ಸರಿ ಇದೆಯೇ ಅಥವಾ ಇಲ್ಲವೇ ಎಂಬುವುದನ್ನು ಅರಿಯಲು ಗೂಗಲ್ 7 ದಿನಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಆನಂತರ ಮಾಹಿತಿ ಸಂಪೂರ್ಣವಾಗಿ ಸರಿ ಇದ್ದರೆ  ಮಾತ್ರ ಏಳು ದಿನದ ಬಳಕ ಮ್ಯಾಪ್ ನಲ್ಲಿ ಹೊಸ ಬದಲಾವಣೆ ಸೇರ್ಪಡೆಗೊಳ್ಳುತ್ತದೆ ಎಂದು ವರದಿಯಾಗಿದೆ.

ಇದಿಷ್ಟೇ ಅಲ್ಲದೆ ಗೂಗಲ್ ಫೋಟೋ ಅಪ್ ಡೇಟ್ ಸೌಲಭ್ಯದಲ್ಲಿಯೂ ಹೊಸ ಬದಲಾವಣೆಗಳನ್ನು ಮಾಡಲು ಯೋಜನೆ ರೂಪಿಸಿದ್ದು,  ಆ ಮೂಲಕ ಬಳಕೆದಾರರು ತಾವು ಹೋದ ಪ್ರದೇಶಗಳ ಕುರಿತಾಗಿ ಮಾಹಿತಿ ನೀಡುವ ಮೂಲಕ ಆ ಸ್ಥಳಗಳ ಪೋಟೋಗಳನ್ನು ಹಂಚಿಕೊಳ್ಳಬಹುದಾಗಿದೆ.

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More